ಶನಿವಾರ, ಡಿಸೆಂಬರ್ 7, 2019
21 °C

ಗುರ್ಜಾಪುರ ಸ್ಥಳಾಂತರಕ್ಕೆ ಒತ್ತಾಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ರಾಯಚೂರು: ಕೃಷ್ಣಾ ನದಿಯ ಪ್ರವಾಹದಿಂದ ತೊಂದರೆಗೆ ಸಿಲುಕಿದ ತಾಲ್ಲೂಕಿನ ಗುರ್ಜಾಪುರ ಗ್ರಾಮವನ್ನು ಸ್ಥಳಾಂತರ ಮಾಡಬೇಕು ಎಂದು ಒತ್ತಾಯಿಸಿ ಗ್ರಾಮಸ್ಥರು ಜಿಲ್ಲಾಧಿಕಾರಿಗೆ ಗುರುವಾರ ಮನವಿ ಸಲ್ಲಿಸಿದರು.

ಮಹಾರಾಷ್ಟ್ರ ಹಾಗೂ ಉತ್ತರ ಕರ್ನಾಟಕದ ಭಾಗದಲ್ಲಿ ಭಾರೀ ಮಳೆಯಾದಾಗ ಕೃಷ್ಣಾ ನದಿಯಲ್ಲಿ ಬರುವ ಪ್ರವಾಹದಿಂದ ಗ್ರಾಮ ಮುಳುಗಡೆಯಾಗಿ ಜನರು ತೊಂದರೆ ಅನುಭವಿಸುತ್ತಿದ್ದಾರೆ. ಈಚೆಗೆ ಉಂಟಾದ ಪ್ರವಾಹದಿಂದ 10 ದಿನಗಳ ಕಾಲ ಗ್ರಾಮಸ್ಥರನ್ನು 15 ಕಿ.ಮೀ. ದೂರದ ಜೇಗರಕಲ್ ಗ್ರಾಮದ ಸರ್ಕಾರಿ ಶಾಲೆಯಲ್ಲಿ ಸ್ಥಾಪಿಸಿದ್ದ ಕಾಳಜಿ ಕೇಂದ್ರಕ್ಕೆ ಸ್ಥಳಾಂತರ ಮಾಡಲಾಗಿತ್ತು. ರೈತರು ಬೆಳೆದ ಬೆಳೆಗಳು ಪ್ರವಾಹಕ್ಕೆ ಕೊಚ್ಚಿಕೊಂಡು ಹೋಗಿವೆ ಎಂದು ತಿಳಿಸಿದರು.

ಸ್ಥಳಾಂತರ ಮಾಡಲು ತ್ವರಿತವಾಗಿ ಭೂಮಿ ಗುರುತಿಸಬೇಕು. ಭೂ ದಾನಿಗಳ ಮನವೊಲಿಸಿ ಪರಿಹಾರ ನೀಡಿ ಸ್ಥಳಾಂತರಕ್ಕೆ ಮುಂದಾಬೇಕು. 50 ಮನೆಗಳು ಮುಳುಗಡೆಯಾಗಿದ್ದು, 10 ಜನರಿಗೆ ಮಾತ್ರ ₹ 25 ಸಾವಿರ ಪರಿಹಾರ ನೀಡಲಾಗಿದೆ. ಪರಿಹಾರ ವಿತರಣೆಯಲ್ಲಿ ತಾರತಮ್ಯ ನಡೆದಿದ್ದು, ಸರಿಪಡಿಸಬೇಕು ಎಂದು ಒತ್ತಾಯಿಸಿದರು.

ಗ್ರಾಮಸ್ಥರಾದ ರವಿಚಂದ್ರ ನಾಯಕ, ದೇವೇಂದ್ರಪ್ಪ, ಹುಲಿಗೆಪ್ಪ, ರಾಜಪ್ಪ, ರಂಗಾರೆಡ್ಡಿ, ಭಾಷ, ಶರಣಪ್ಪ, ದುರುಗಣ್ಣ, ಹನುಮಂತ, ದಂಡಪ್ಪ, ಶರಣಪ್ಪ, ಮರೆಣ್ಣ, ರಂಗಪ್ಪ, ಯಂಕಪ್ಪ, ಜಿಂದಪ್ಪ, ಹನುಮಂತ, ಹುಸೇನಪ್ಪ, ನಾಗಪ್ಪ, ಮರಿಲಿಂಗಪ್ಪ, ಮಲ್ಲಪ್ಪ, ತೇಜಪ್ಪ ಇದ್ದರು.

ಪ್ರತಿಕ್ರಿಯಿಸಿ (+)