ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಯಚೂರು: ವಿವಿಧ ಬೇಡಿಕೆಗಳ ಈಡೇರಿಕೆಗೆ ಮನವಿ

Last Updated 14 ಮೇ 2020, 13:00 IST
ಅಕ್ಷರ ಗಾತ್ರ

ರಾಯಚೂರು: ಕಂಟೈನ್‌ಮೆಂಟ್ ಹಾಗೂ ಕೆಂಪು ವಲಯದಲ್ಲಿ ಕೆಲಸ ಮಾಡುತ್ತಿರುವ ಸಿಬ್ಬಂದಿ ಸುರಕ್ಷತೆಗಾಗಿ ಪಿಪಿಇ ಕಿಟ್ ನೀಡಬೇಕು. ಎಲ್ಲಾ ಸಿಬ್ಬಂದಿಗೆ ಕೋವಿಡ್–19 ಪರೀಕ್ಷೆ ಮಾಡಿಸಬೇಕು ಎನ್ನುವುದು ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸಲು ಆಗ್ರಹಿಸಿ ಸೆಂಟರ್ ಆಫ್ ಇಂಡಿಯನ್ ಟ್ರೇಡ್ ಯುನಿಯನ್ (ಸಿಐಟಿಯು) ಜಿಲ್ಲಾ ಸಮಿತಿ ಮುಖಂಡರು ಜಿಲ್ಲಾಧಿಕಾರಿ ಮೂಲಕ ಮುಖ್ಯಮಂತ್ರಿಗೆ ಗುರುವಾರ ಮನವಿ ಸಲ್ಲಿಸಿದರು.

ಕೋವಿಡ್–19 ಕರ್ತವ್ಯದಲ್ಲಿರುವ ಎಲ್ಲಾ ಎನ್ಎಚ್ಎಂ ಗುತ್ತಿಗೆ, ಸ್ಕೀಂ ನೌಕರರಿಗೆ ಹೆಚ್ಚುವರಿಯಾಗಿ ಪ್ರತಿ ತಿಂಗಳು ಪ್ರತಿ ತಿಂಗಳು ₹25,000 ಪ್ರೋತ್ಸಾಹಧನ ನೀಡಬೇಕು. ಕೋವಿಡ್–19 ಸೋಂಕಿತರಾದ ಸಿಬ್ಬಂದಿಗೆ ಕನಿಷ್ಠ ₹5 ಲಕ್ಷ ಪರಿಹಾರ ನೀಡಬೇಕು. ಎಲ್ಲಾ ಎನ್ಎಚ್ಎಂ ಗುತ್ತಿಗೆ, ಸ್ಕೀಂ ನೌಕರರಿಗೆ ಉಚಿತ ಪಡಿತರ ನೀಡಬೇಕು. ತೆರಿಗೆ ವ್ಯಾಪ್ತಿಯಿಂದ ಹೊರಗಿರುವ ಎಲ್ಲಾ ಕುಟುಂಬಗಳಿಗೆ ₹7,500 ಕೊಡಬೇಕು.

ಜಿಡಿಪಿಯ ಶೇ 5ರಷ್ಟು ಸಾರ್ವಜನಿಕ ಆರೋಗ್ಯ ಸೇವೆಗೆ ಮೀಸಲಿಟ್ಟು ಆರೋಗ್ಯ ವ್ಯವಸ್ಥೆ ಸಾರ್ವತ್ರಿಕ ಆರೋಗ್ಯ ವ್ಯವಸ್ಥೆ ಶಾಸನ ರಚಿಸಬೇಕು. ಮೇ 10ರಂದು ಮೃತಪಟ್ಟ ಆಶಾ ಕಾರ್ಯಕರ್ತೆ ಸಾಕಮ್ಮಳ ಕುಟುಂಬಕ್ಕೆ ₹50 ಲಕ್ಷ ಪರಿಹಾರ ನೀಡಬೇಕು ಎಂದು ಒತ್ತಾಯಿಸಿದರು.

ಜಿಲ್ಲಾ ಅಧ್ಯಕ್ಷೆ ವರಲಕ್ಷ್ಮೀ, ಉಪಾಧ್ಯಕ್ಷೆ ಎಚ್. ಪದ್ಮಾ, ಕಾರ್ಯದರ್ಶಿ ಶರಣಬಸವ, ಕೆ.ಜಿ.ವೀರೇಶ, ಗೋಕರಮ್ಮ , ಮಲ್ಲೇಶ ಮತ್ತಿತರರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT