ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕವಿತಾಳ: ವೀರಭದ್ರೇಶ್ವರ ಉತ್ಸವ

Last Updated 18 ಆಗಸ್ಟ್ 2022, 5:13 IST
ಅಕ್ಷರ ಗಾತ್ರ

ಕವಿತಾಳ: ಪಟ್ಟಣದಲ್ಲಿ ಪ್ರತಿ ಮೂರು ವರ್ಷಕ್ಕೊಮ್ಮೆ ಜರುಗುವ ವೀರಭದ್ರೇಶ್ವರ ಉತ್ಸವ ಮಂಗಳವಾರ ನಡೆಯಿತು.

ವೀರಭದ್ರೇಶ್ವರ ಮೂರ್ತಿಗೆ ಮಹಾ ರುದ್ರಾಭಿಷೇಕ ಮತ್ತು ಸಹಸ್ರ ಬಿಲ್ವಾರ್ಚನೆ ಸೇರಿದಂತೆ ವಿಶೇಷ ಪೂಜೆ ನೆರವೇರಿಸಲಾಯಿತು.

ಪಲ್ಲಕ್ಕಿ ಉತ್ಸವ, ನಂದಿಕೋಲು ಕುಣಿತ ವೀರಘಾಸೆ ಕುಣಿತ, ಪೂರ್ಣ ಕುಂಭ, ಕಳಸಗಳ ಮೆರವಣಿಗೆ ಮತ್ತು ಭಕ್ತರ ಅಗ್ನಿಕುಂಡ ಸೇವೆ ಹಾಗೂ ಪುರವಂತಿಕೆ ಸೇವೆ ನಡೆಯಿತು.

ದೊಡ್ಡಬಸವ ಶಾಸ್ತ್ರೀ, ರುದ್ರಯ್ಯಸ್ವಾಮಿ , ಶೇಖರಯ್ಯ ಸ್ವಾಮಿ ಮತ್ತು ಶಾಂತಯ್ಯಸ್ವಾಮಿ ಪೂಜಾ ಕಾರ್ಯಕ್ರಮ ನೆರವೇರಿಸಿದರು. ಶ್ರೀಶೈಲಪ್ಪ ತಾತ, ವೀರಯ್ಯಸ್ವಾಮಿ ಮತ್ತಿತರರು ಪುರವಂತಿಕೆ ಸೇವೆ ಮಾಡಿದರು.

ಅರ್ಚಕ ಸಿದ್ದಯ್ಯಸ್ವಾಮಿ, ಶೇಖರಪ್ಪ ಸಾಹುಕಾರ ಹಟ್ಟಿ, ಭೀಮನಗೌಡ ವಂದ್ಲಿ, ಅಂಬಣ್ಣ ಸಾಹುಕಾರ ಭಾವಿಕಟ್ಟಿ, ವೀರಭದ್ರಪ್ಪ ಸಾಹುಕಾರ ಭಾವಿಕಟ್ಟಿ, ಮರಿಯಣ್ಣ ಕಾಮರಡ್ಡಿ, ರವೀಂದ್ರ ಕಾಮರಡ್ಡಿ, ಬಸಪ್ಪ ಕಂದಗಲ್, ಶರಣುಭೂಪಾಲ ಭಾವಿಕಟ್ಟಿ, ವೀಭದ್ರಪ್ಪ ಸಾಹುಕಾರ, ಸುಭಾಶ್ಚಂದ್ರ ಚಕೋಟಿ, ವಿಶ್ವನಾಥ ಕಾಮರಡ್ಡಿ, ಕರಿಬಸಯ್ಯ ನಂದಿಕೋಲಮಠ, ಗಂಗಪ್ಪ ರೊಟ್ಟಿ, ಚನ್ನಯ್ಯಸ್ವಾಮಿ, ಶಿವು ಕಂದಗಲ್, ಪಂಪಾಪತಿ ಮುಂಡರಗಿಮಠ, ಮಲ್ಲಿಕಾರ್ಜುನ, ವಿರೇಶ ರೊಟ್ಟಿ, ರಾಚಯ್ಯಸ್ವಾಮಿ, ಅಮರೇಶ, ಮಂಜುನಾಥ ಪತ್ತಾರ್, ಗಂಗಾಧರ ಹಡಪದ್, ಸಂಗಮೇಶ, ದೊಡ್ಡಪ್ಪ ಮಹಾದೇವ ಹಡಪದ್, ಶಿವಲಿಂಗಪ್ಪ ಸಜ್ಜನ್, ಕಂದಗಲ್, ಗುರುಬಸ್ಸಯ್ಯ ಮತ್ತು ಮಹಿಳೆಯರು ಮಕ್ಕಳು ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT