ಧಾರ್ಮಿಕ ಕಾರ್ಯಗಳಿಂದ ದೂರವಾಗುತ್ತಿರುವ ಮಹಿಳೆಯರು: ಆದಿಮನಿ ವೀರಲಕ್ಷ್ಮೀ

7

ಧಾರ್ಮಿಕ ಕಾರ್ಯಗಳಿಂದ ದೂರವಾಗುತ್ತಿರುವ ಮಹಿಳೆಯರು: ಆದಿಮನಿ ವೀರಲಕ್ಷ್ಮೀ

Published:
Updated:
Deccan Herald

ರಾಯಚೂರು: ಇತ್ತೀಚಿನ ದಿನಗಳಲ್ಲಿ ಮಹಿಳೆಯರು ಧಾರಾವಾಹಿಗಳಿಗೆ ಮಾರುಹೋಗಿ ಧಾರ್ಮಿಕ ಕಾರ್ಯಕ್ರಮಗಳಿಂದ ದೂರವಾಗುತ್ತಿದ್ದಾರೆ ಎಂದು ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಆದಿಮನಿ ವೀರಲಕ್ಷ್ಮೀ ಹೇಳಿದರು.

ನಗರದ ಕಿಲ್ಲೇಬೃಹನ್ಮಠದಲ್ಲಿ ನವರಾತ್ರಿ ಅಂಗವಾಗಿ ಬುಧವಾರ ಆರಂಭಗೊಂಡ 80ನೇ ವರ್ಷದ ಶ್ರೀದೇವಿ ಪುರಾಣ ಉದ್ಘಾಟನೆ ಕಾರ್ಯಕ್ರಮದಲ್ಲಿ ಮಾತನಾಡಿದರು.

ಧಾರ್ಮಿಕ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳುವುದರಿಂದ ಸಂಸ್ಕೃತ, ಆಚಾರ– ವಿಚಾರಗಳು ತಿಳಿದುಕೊಳ್ಳಲು ಅವಕಾಶ ದೊರೆಯುತ್ತದೆ. ನವರಾತ್ರಿ ಆಚರಣೆಯಿಂದ ಮಹಿಳೆಯರಿಗೆ ಜೀವನದ ಹಲವು ವಿಚಾರಗಳು ಗೋಚರವಾಗಲಿವೆ ಎಂದರು.

ಕಾರ್ಯಕ್ರಮವನ್ನು ಒಂಭತ್ತು ಮಹಿಳೆಯರಿಂದ ಉದ್ಘಾಟನೆ ಮಾಡಿಸಲಾಯಿತು. ಸಾನಿಧ್ಯ ವಹಿಸಿದ್ದ ಶಾಂತಮಲ್ಲ ಶಿವಾಚಾರ್ಯ ಸ್ವಾಮೀಜಿ ಮಾತನಾಡಿದರು.

ದೇವದುರ್ಗದ ಕಪಿಲ ಸಿದ್ದರಾಮ ಶಿವಾಚಾರ್ಯ ಸ್ವಾಮೀಜಿ, ಮುಖಂಡರಾದ ಶರಣಮ್ಮ ಕಾಮರೆಡ್ಡಿ, ನಿರ್ಮಲಾ ಬೆಣ್ಣಿ, ಪ್ರಿಯಾಂಕ, ಅಕ್ಕಮಹಾದೇವಿ, ಶೀಲಾ, ಲಕ್ಷ್ಮೀ, ಕೆ.ಗಿರಿಜಾ ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !