ಬುಧವಾರ, ಆಗಸ್ಟ್ 4, 2021
20 °C
ಜಿಲ್ಲಾ ಪ್ರಧಾನ ಮತ್ತು ಸತ್ರ ನ್ಯಾಯಾದೀಶ ಬೈಲೂರು ಶಂಕರರಾಮ ಸಲಹೆ

ಗಿಡಗಳನ್ನು ನಿರಂತರ ಪೋಷಿಸಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ರಾಯಚೂರು: ಉತ್ತಮ ಪರಿಸರವನ್ನು ನಿರ್ಮಾಣ ಮಾಡುವುದು ಪ್ರತಿಯೊಬ್ಬ ಭಾರತೀಯ ಪ್ರಜೆಯ ಕರ್ತವ್ಯವಾಗಬೇಕು. ಹಸಿರು ಉಸಿರಾಗಬೇಕಾಗಿದೆ. ಕೇವಲ ಜೂನ್ 5 ರಂದು ಗಿಡಗಳನ್ನು ಹಾಕಿ ಬಿಡುವುದಲ್ಲ; ಅವುಗಳನ್ನು ನಿರಂತರವಾಗಿ ಪೋಷಿಸಿ ಸಂರಕ್ಷಣೆ ಮಾಡಿ ಎತ್ತರಕ್ಕೆ ಬೆಳೆಯುವಂತೆ ಮಾಡಬೇಕು ಎಂದು ಜಿಲ್ಲಾ ಪ್ರಧಾನ ಮತ್ತು ಸತ್ರ ನ್ಯಾಯಾದೀಶ ಬೈಲೂರು ಶಂಕರರಾಮ ಹೇಳಿದರು.

ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಜಿಲ್ಲಾ ಕಾರಾಗೃಹದಲ್ಲಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾ ಕಾರಾಗೃಹ , ಪ್ರಾದೇಶಿಕ ಅರಣ್ಯ ಇಲಾಖೆ ಶುಕ್ರವಾರ ಏರ್ಪಡಿಸಿದ್ದ ಸಮಾರಂಭದಲ್ಲಿ ಸಸಿಗಳನ್ನು ನೆಟ್ಟು ಮಾತನಾಡಿದರು.

ಭಾರತದಲ್ಲಿ ಬೆಳೆಸುವ ಗಿಡಗಳಲ್ಲಿ ಆರ್ಯುವೇದದ ಶಕ್ತಿ ಇದೆ. ಇದು ಮಾನವನ ರೋಗ ರುಜನುಗಳನ್ನು ತಡೆಗಟ್ಟಲು ಸಹಾಯಕವಾಗುತ್ತದೆ. ದೇಶದಲ್ಲಿ ಬೆಳೆದಿರುವ ಗಿಡಗಳಿಂದ ಹಲವಾರು ಔಷಧಗಳನ್ನ ತಯಾರು ಮಾಡಲಾಗುತ್ತದೆ. ಸಸ್ಯ ವರ್ಗದ ಸಂಪನ್ಮೂಲವನ್ನು ಕಾಪಾಡಿಕೊಂಡು ಹೋಗಬೇಕು ಎಂದರು.

ರಾಯಚೂರಿನಲ್ಲಿ ಹೆಚ್ಚು ಬಿಸಿಲಿದೆ. ಗಿಡಮರಗಳ ಸಂಖ್ಯೆ ಹೆಚ್ಚಾಗಬೇಕಾಗಿದೆ. ಆದ್ದರಿಂದ ಎಲ್ಲರೂ ಗಿಡಗಳನ್ನು ಬೆಳೆಸುವುದರ ಮೂಲಕ ಉತ್ತಮ ಪರಿಸರವನ್ನು ನಿರ್ಮಾಣ ಮಾಡಬೇಕು. ಯಾವ ಪ್ರದೇಶಗಳಲ್ಲಿ ಹೆಚ್ಚು ಮರಗಳು ಬೆಳೆದಿರುತ್ತವೆ ಆ ಪ್ರದೇಶವು ತಂಪಾಗಿರುತ್ತದೆ ಎಂದು ಹೇಳಿದರು.

ಜಿಲ್ಲಾ ರೆಡ್ ಕ್ರಾಸ್ ಸಂಸ್ಥೆಯ ಸಂಚಾಲಕ ದಂಡಪ್ಪ ಬಿರಾದಾರ ಮಾತನಾಡಿ, ಮರದಿಂದ ಮಳೆ, ಮಳೆಯಿಂದ ಬೆಳೆ, ಬೆಳೆಯಿಂದ ಆಹಾರ ಎನ್ನುವ ಪರಿಕಲ್ಪನೆಯನ್ನು ಪ್ರತಿಯೊಬ್ಬರು ಅರಿತುಕೊಳ್ಳಬೇಕು. ಪ್ಲಾಸ್ಟಿಕ್ ಚೀಲಗಳ ಬಳಕೆಯನ್ನು ಸಂಪೂರ್ಣವಾಗಿ ನಿಲ್ಲಿಸಬೇಕು ಎಂದು ಪರಿಸರ ಪ್ರತಿಜ್ಞೆಯನ್ನು ಭೋದಿಸಿದರು.

ಮಾಲಿನ್ಯ ನಿಯಂತ್ರಣ ಮಂಡಳಿಯ ಪರಿಸರ ಅಧಿಕಾರಿ ಶ್ರೀಧರ್‌ ಮಾತನಾಡಿ, ಕೊರೊನಾ ಹಿನ್ನಲೆಯಲ್ಲಿ ವಿದ್ಯಾರ್ಥಿಗಳಿಗಾಗಿ ಹಲವಾರು ಸ್ಪರ್ಧೆಗಳನ್ನು ಮಾಡಲಾಗಿದೆ. ಮನೆಯಲ್ಲಿಯೇ ಇದ್ದು ನಾವು ಕೊಟ್ಟ ವಿಷಯಗಳ ಆಧಾರದ ಮೇಲೆ ಚಿತ್ರ ಬಿಡಿಸಿ ಕಳುಹಿಸಿಕೊಡಲು ತಿಳಿಸಲಾಗಿದೆ ಎಂದರು.

ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಕಾರ್ಯದರ್ಶಿ ಎಂ.ಸಿ ನಾಡಗೌಡ ಅವರು ಪರಿಸರದ ಕುರಿತು ಮಾತನಾಡಿದರು.

ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಜೆ. ಬಸವರಾಜ, ಕಾರ್ಯದರ್ಶಿ ಶಿವುಕುಮಾರ ದಿನ್ನಿ, ಜಿಲ್ಲಾ ಕಾರಾಗೃಹ ಅಧಿಕಾರಿ ಸೂಕುರ, ಉಪ ಪರಿಸರ ಅಧಿಕಾರಿ ಸುನಂದ ಕುರಿ, ಪ್ರಾದೇಶಿಕ ಹಾಗೂ ಸಾಮಾಜಿಕ ಅರಣ್ಯ ವಿಭಾಗದ ಉಪರಣ್ಯ ಸಂರಕ್ಷಣೆ ಅಧಿಕಾರಿ ಎಚ್.ಆರ್. ಕುಮಾರ್‌, ನಾರಾಯಣಪ್ಪ ಜೆ., ಹಾಗೂ ಸಹಾಯಕ ಅರಣ್ಯ ಅಧಿಕಾರಿ ಎಂ.ಪಿ.ಬೊರಳೆ ಹಾಗೂ ಒಂಟೆಕಾರ್, ವಲಯ ಅರಣ್ಯ ಅಧಿಕಾರಿ ಎಂ.ಪಿ ಮಹಾಬಲೇಶ್ವರ, ಪ್ರಫುಲ್ ಶೆಟ್ಟಿ, ಉಪವಲಯ ಅರಣ್ಯ ಅಧಿಕಾರಿಗಳಾದ ಸಲಾರ್, ನೀಲಕಂಠ, ನಾಗಾರಾಜ್ , ಅರಣ್ಯ ರಕ್ಷಕರಾದ ರಾಘವೇಂದ್ರ, ಯಲ್ಲಪ್ಪ , ಅಮರೇಶ, ವೀರೇಶ ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.