ಶುಕ್ರವಾರ, 17 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಕ್ಕಳ ಇಂಗ್ಲಿಷ್‌ ಕಲಿಕೆಗೆ ‘ರೀಡಿಂಗ್‌ ರೂಂ’

ಶೈಕ್ಷಣಿಕ ಅಂಗಳ
Last Updated 12 ನವೆಂಬರ್ 2014, 6:35 IST
ಅಕ್ಷರ ಗಾತ್ರ

ದೇವದುರ್ಗ: ತಾಲ್ಲೂಕಿನ ಮಾನಶಯ್ಯನದೊಡ್ಡಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕರ ಕಾಳಜಿ ಹಾಗೂ ಗ್ರಾಮಸ್ಥರ ಹಾಗೂ ಎಸ್‌ಡಿಎಂಸಿ ಸದಸ್ಯರ ಸಹಕಾರಿದಿಂದ ಮಕ್ಕಳು ಸುಲಭವಾಗಿ ಇಂಗ್ಲಿಷ್‌ ಭಾಷೆ ಕಲಿಯಲಿ ಎಂಬ ಉದ್ದೇಶದಿಂದ  ಪ್ರತ್ಯೇಕ ಇಂಗ್ಲಿಷ್‌ ರೀಡಿಂಗ್‌ ರೂಂ ನಿರ್ಮಾಣ ಮಾಡಿರುವ ಹೆಗ್ಗಳಿಗೆ ಈ ಶಾಲೆ ಭಾಜನವಾಗಿದೆ.

ದೇವದುರ್ಗ–ಸಿರವಾರ ಮುಖ್ಯ ರಸ್ತೆಯಲ್ಲಿಇರುವ ಈ ಶಾಲೆ ವಿದ್ಯಾರ್ಥಿಗಳಿಗೆ ಅಚ್ಚುಮೆಚ್ಚು. ಶಾಲೆ ಮುಖ್ಯ ಶಿಕ್ಷಕಿ ಕುಸುಮಾ ಮತ್ತು ಎಸ್‌ಡಿಎಂಸಿ ಅಧ್ಯಕ್ಷ ಮಲ್ಲಯ್ಯ ಮತ್ತು ಪದಾಧಿಕಾರಿಗಳು ಶಾಲೆ ಅಭಿವೃದ್ಧಿಗೆ ಸದಾ ಮಂಚೂಣಿಯಲ್ಲಿರುತ್ತಾರೆ.

ಶಾಲೆಯ ಅಂದ ಹಾಳಾಗದಿರಲಿ ಎಂದು ಕಾಂಪೌಂಡ್‌ ನಿರ್ಮಾಣ ಮಾಡಲಾಗಿದೆ.  ಆವರಣದಲ್ಲಿ ಹೂವಿನ ಗಿಡ, ಮರ, ಕುಡಿವ ನೀರಿನ ವ್ಯವಸ್ಥೆ, ಕೈತೋಟ, ಶೌಚಾಲಯ ಮತ್ತು ಆಟದ ಮೈದಾನ ಎಲ್ಲವೂ ಇವೆ. ಬೋಧನೆಗೆ ಸಂಬಂಧಿಸಿದಂತೆ ನಲಿ,ಕಲಿ ಯೋಜನೆ ಹಲವು ಕಲಿಕಾ ಸಾಮಗ್ರಿಗಳು ಇವೆ. ಶಾಲೆಯಲ್ಲಿನ ಸ್ವಚ್ಛತೆ, ಮಕ್ಕಳಲ್ಲಿನ ಶಿಸ್ತು, ಪಾಠ ಬೋಧನೆ ವಿಧಾನ ಎಲ್ಲವು ಇಲ್ಲಿ ವಿಶೇಷತೆ ಹೊಂದಿವೆ.  ಆರಂಭದಲ್ಲಿ ಕಿರಿಯ ಪ್ರಾಥಮಿಕ ಶಾಲೆ ಯಾಗಿತ್ತು. ಎರಡು ಕೋಣೆಯಲ್ಲಿ ಆರಂಭವಾದ ಶಾಲೆ ಬಡ್ತಿ ಪಡೆದು ಹಿರಿಯ ಪ್ರಾಥಮಿಕ ಶಾಲೆಯಾಗಿದೆ.

ಗುರುವಿನ ತಕ್ಕಂತೆ ಶಿಷ್ಯರು ಎಂಬಂತೆ ಇಲ್ಲಿನ ಎಲ್ಲ ತರಗತಿ ಮಕ್ಕಳು ಓದಿನಲ್ಲಿ ಮುಂಚೂಣಿಯಲ್ಲಿ ಇದ್ದಾರೆ. ಎಲ್ಲ ತರಗತಿ ಮಕ್ಕಳಿಗೆ ಸುಲಭವಾಗಿ ಇಂಗ್ಲಿಷ್‌ ಭಾಷೆ ಜ್ಞಾನ ಸಿಗಲಿ ಎಂಬ ಕಾರಣಕ್ಕೆ ಕೋಣೆಯಲ್ಲಿ ಇಂಗ್ಲಿಷ್‌ ಅಕ್ಷರದಲ್ಲಿ ಗೋಡೆ ಬರಹ ಬರೆಯಲಾಗಿದೆ. 
ಪ್ರಶಸ್ತಿ: 2011–12ನೇ ಸಾಲಿನಲ್ಲಿ ಗುಣಾತ್ಮಕ ರೀತಿಯಲ್ಲಿ ಸಾಧನೆ ಮಾಡಿರುವ ಶಾಲೆಗೆ ಜಿಲ್ಲಾ ಪಂಚಾಯಿತಿ ಮತ್ತು ಶಿಕ್ಷಣ ಇಲಾಖೆ ವತಿಯಿಂದ ಜಿಲ್ಲಾ ಮಟ್ಟದ ಅಭಿನಂದನಾ ಪತ್ರ ನೀಡಲಾಗಿದೆ.

2013–14ನೇ ಸಾಲಿನಲ್ಲಿ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ವತಿಯಿಂದ ಪರಿಸರ ಮಿತ್ರ ಶಾಲಾ ಕಾರ್ಯಕ್ರಮದ ಯೋಜನೆಯಲ್ಲಿ ರಾಯಚೂರು ಜಿಲ್ಲಾ ಕಿತ್ತಳೆ ಶಾಲೆ  ಪ್ರಶಸ್ತಿಗೆಆಯ್ಕೆಯಾಗಿದೆ.

‘ಗುಣಮಟ್ಟದ ಶಿಕ್ಷಣಕ್ಕೆ ಆದ್ಯತೆ’
ಮಕ್ಕಳಿಗೆ ಪಾಠ ಹೇಳಿಕೊಡುವ ಸ್ಥಳ ಚೆನ್ನಾಗಿ ಇದ್ದಾಗ ಮಾತ್ರ ಅದರ ಪರಿಣಾಮ ಪ್ರತಿಯೊಬ್ಬ ವಿದ್ಯಾರ್ಥಿಯ ಮೇಲೆ ಆಗುತ್ತದೆ. ಮಕ್ಕಳಿಗೆ ಇಲ್ಲಿ ಗುಣಮಟ್ಟದ ಶಿಕ್ಷಣಕ್ಕೆ ಆದ್ಯತೆ ನೀಡಲಾಗುತ್ತಿದೆ.
–ಕುಸುಮಾ, ಮುಖ್ಯ ಶಿಕ್ಷಕಿ ಮಾನಶಯ್ಯನ ದೊಡ್ಡಿ

‘ಶಿಕ್ಷಕರ ಶ್ರಮದಿಂದ ಸಾಧನೆ’
ಶಾಲೆಯ ಶಿಕ್ಷಕರ ಶ್ರಮವು ಶಾಲೆಗೆ ಅತ್ಯುತ್ತಮ ಹೆಸರು ತಂದಿದೆ. ಉತ್ತಮ ಬೋಧನೆ ಮಾಡುವ ಮೂಲಕ ಮಕ್ಕಳಲ್ಲಿ ಗುಣಾತ್ಮಕ ಶಿಕ್ಷಣ ನೀಡುತ್ತಿದ್ದಾರೆ.
–ಮಲ್ಲಯ್ಯ, ಎಸ್‌ಡಿಎಂಸಿ ಅಧ್ಯಕ್ಷ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT