ಬುಧವಾರ, ಸೆಪ್ಟೆಂಬರ್ 22, 2021
22 °C

ಕನಕಪುರ: ಆದರ್ಶ ವಿದ್ಯಾಲಯಕ್ಕೆ ಪ್ರವೇಶ ಪರೀಕ್ಷೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕನಕಪುರ: ತಾಲ್ಲೂಕಿನ ಕೋಡಿಹಳ್ಳಿಯ ಆದರ್ಶ ವಿದ್ಯಾಲಯದಲ್ಲಿ 2021-22ನೇ ಸಾಲಿನ 6ನೇ ತರಗತಿಗೆ ದಾಖಲಾಗಲು ಪ್ರವೇಶ ಪರೀಕ್ಷೆಯು ಜುಲೈ 27ರಂದು ಬೆಳಿಗ್ಗೆ 10.30ರಿಂದ 1 ಗಂಟೆವರೆಗೆ ನಡೆಯಲಿದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಜೆ.ಎಂ. ಜಯಲಕ್ಷ್ಮಿ ತಿಳಿಸಿದ್ದಾರೆ.

ನಗರದ ಎಕ್ಸ್‌ ಮುನಿಸಿಪಲ್‌ ಪ್ರೌಢಶಾಲೆ ಮತ್ತು ಸೆಂಟ್‌ ಥಾಮಸ್‌ ಪ್ರೌಢಶಾಲೆಯಲ್ಲಿ ನೂತನ ಎಸ್‌ಒಪಿ ಪ್ರಕಾರ ಪರೀಕ್ಷೆ ನಡೆಸಲಾಗುತ್ತಿದೆ.

ಪರೀಕ್ಷೆ ಬರೆಯುವ ವಿದ್ಯಾರ್ಥಿಗಳು ಪ್ರವೇಶ ಪತ್ರಗಳನ್ನು ಇಲಾಖೆ ವೆಬ್‌ಸೈಟ್‌ www.schooleducation.kar.nic,in ಅಥವಾ www.vidyavahini.karnataka.gov.inನಲ್ಲಿ ಸ್ಯಾಟ್ಸ್‌ ನಂಬರ್‌ ಅಥವಾ ಅಪ್ಲಿಕೇಷನ್‌ ಸಂಖ್ಯೆ ನಮೂದಿಸಿ ಡೌನ್‌ಲೋಡ್‌ ಮಾಡಿಕೊಂಡು ಪರೀಕ್ಷೆಗೆ ಹಾಜರಾಗಬಹುದು.

ಡೌನ್‌ಲೋಡ್‌ ಮಾಡಿರುವ ಪ್ರವೇಶ ಪತ್ರಕ್ಕೆ ಮುಖ್ಯಶಿಕ್ಷಕರ ಅವಶ್ಯಕತೆಯಿರುವುದಿಲ್ಲ. ಪೋಷಕರು ಅಥವಾ ಶಿಕ್ಷಕರು ಈ ಬಗ್ಗೆ ಮಾಹಿತಿ ಪಡೆದು ವಿದ್ಯಾರ್ಥಿಗಳು ಪರೀಕ್ಷಾ ಕೇಂದ್ರಕ್ಕೆ ಹೋಗಿ ಪರೀಕ್ಷೆ ಬರೆಯಲು ಸಹಕಾರ ನೀಡಬೇಕು.

ಮಾಹಿತಿಗೆ ಆದರ್ಶ ವಿದ್ಯಾಲಯದ ಮುಖ್ಯಶಿಕ್ಷಕ, ಮೊಬೈಲ್‌ 96866 57363, ಶಿಕ್ಷಣ ಸಂಯೋಜಕ, ಮೊಬೈಲ್‌ 83105 45414, ಕ್ಷೇತ್ರ ಶಿಕ್ಷಣಾಧಿಕಾರಿ, ಮೊಬೈಲ್‌ 94806 95321 ಸಂಪರ್ಕಿಸಬಹುದು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.