ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಕ್ತದಾನ ಮಾಡಲು ಸಲಹೆ

Last Updated 1 ಆಗಸ್ಟ್ 2021, 3:46 IST
ಅಕ್ಷರ ಗಾತ್ರ

ಕನಕಪುರ: ಮನುಷ್ಯನ ರಕ್ತ ಅತ್ಯಮೂಲ್ಯವಾದುದು. ಇದನ್ನು ಕೃತಕವಾಗಿ ತಯಾರಿಸಲು ಸಾಧ್ಯವಿಲ್ಲ. ಆರೋಗ್ಯವಂತ ವ್ಯಕ್ತಿಯೇ ರಕ್ತದಾನ ಮಾಡಿ ಇನ್ನೊಬ್ಬರ ಜೀವ ಉಳಿಸಬೇಕಿದೆ ಎಂದು ಯುವ ಮುಖಂಡ ಗೌತಮ್‌ ಎಂ. ಗೌಡ ತಿಳಿಸಿದರು.

ತಾಲ್ಲೂಕಿನ ಹಾರೋಹಳ್ಳಿಯಲ್ಲಿ ಗೌತಮ್‌ ಎಂ. ಗೌಡ ಅಭಿಮಾನಿ ಬಳಗದಿಂದ ಆರ್‌ಎಚ್‌ಎಸ್‌ ಶಾಲೆಯಲ್ಲಿ ಶನಿವಾರ ಏರ್ಪಡಿಸಿದ್ದ ಬೃಹತ್‌ ರಕ್ತದಾನ ಶಿಬಿರದಲ್ಲಿ ಅವರು ಮಾತನಾಡಿದರು.

ಕೊರೊನಾ ಸಂದರ್ಭದಲ್ಲಿ ಆರೋಗ್ಯವಂತರ ರಕ್ತಕ್ಕೆ ಹೆಚ್ಚಿನ ಬೇಡಿಕೆ ಇದೆ. ಏಕೆಂದರೆ ಸೋಂಕು ಬಂದ ವ್ಯಕ್ತಿಯು 6 ತಿಂಗಳು ರಕ್ತ ಕೊಡುವಂತಿಲ್ಲ. ವ್ಯಾಕ್ಸಿನ್‌ ಪಡೆದವರು 3 ತಿಂಗಳು ರಕ್ತದಾನ ಮಾಡುವಂತಿಲ್ಲ. ಈ ಕಾರಣದಿಂದ ತುರ್ತು ಪರಿಸ್ಥಿತಿಯಲ್ಲಿ ಇರುವವರಿಗೆ ರಕ್ತದ ಸಮಸ್ಯೆ ಉಂಟಾಗುತ್ತಿದೆ. ಆ ಕಾರಣದಿಂದ ಅಭಿಮಾನಿಗಳು ರಕ್ತದಾನ ಶಿಬಿರ ಆಯೋಜನೆ ಮಾಡಿದ್ದಾರೆ ಎಂದು ಹೇಳಿದರು.

ಪ್ರತಿಯೊಬ್ಬ ಆರೋಗ್ಯ ವ್ಯಕ್ತಿಯು ರಕ್ತದಾನ ಮಾಡಬಹುದಾಗಿದೆ. ಯಾರು ಭಯ ಪಡದೆ ರಕ್ತದಾನ ಮಾಡಿ ತೊಂದರೆಯಲ್ಲಿರುವ ಇನ್ನೊಂದು ಜೀವ ಉಳಿಸಿದ ಪುಣ್ಯ ನಿಮ್ಮದಾಗಲಿದೆ ಎಂದು ಮನವಿ
ಮಾಡಿದರು.

ರಾಮನಗರ ಬೆಳ್ಳಿ ರಕ್ತನಿಧಿ ಸಂಸ್ಥೆಯವರು 71 ಯೂನಿಟ್‌‌ ರಕ್ತ ಸಂಗ್ರಹಿಸಿದರು.

ರೇಷನ್‌ ಕಿಟ್‌ ವಿತರಣೆ: ಹಾರೋಹಳ್ಳಿಯಲ್ಲಿ ಆಟೊ ಚಾಲಕರು, ಟ್ಯಾಕ್ಸಿ ಚಾಲಕರು ಹಾಗೂ ಕೂಲಿ ಕಾರ್ಮಿಕ 200 ಮಂದಿಗೆ ರೇಷನ್‌ ಕಿಟ್‌ ವಿತರಿಸಲಾಯಿತು.

ಇಕ್ಬಾಲ್‌ ಹುಸೇನ್‌, ಎಂ. ಮಲ್ಲಪ್ಪ, ಡಿ.ಎಸ್‌. ಭುಜಂಗಯ್ಯ, ರಾಮು, ಲಕ್ಷ್ಮಣ್‌, ಸಿದ್ದಪ್ಪ, ಸ್ಟುಡಿಯೊ ಚಂದ್ರ, ಸೋಮಣ್ಣ, ಸೋಮಶೇಖರ್‌, ಪುರುಷೋತ್ತಮ್‌, ಅಶೋಕ್‌, ಈಶ್ವರ್‌, ಜ್ಞಾನೇಶ್‌, ಕೆಂಪಣ್ಣ, ಚಂದ್ರಶೇಖರ್‌, ಶ್ರೀನಿವಾಸ್‌, ದೇವರಾಜು, ಲೋಕೇಶ್‌, ರವಿ, ಸಂತೋಷ್‌
ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT