ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಕೃಷಿ ಚಟುವಟಿಕೆ ಚುರುಕು: ರಸಗೊಬ್ಬರ ದಾಸ್ತಾನು

ನಿಗದಿತ ಬೆಲೆಯಲ್ಲಿ ರೈತರಿಗೆ ರಸಗೊಬ್ಬರ
Published 22 ಮೇ 2024, 5:17 IST
Last Updated 22 ಮೇ 2024, 5:17 IST
ಅಕ್ಷರ ಗಾತ್ರ

ಮಾಗಡಿ (ಕುದೂರು): ತಾಲ್ಲೂಕಿನಲ್ಲಿ ಮುಂಗಾರು ಮಳೆ ಚೆನ್ನಾಗಿ ಸುರಿಯುತ್ತಿದ್ದು, ಕೃಷಿ ಚಟುವಟಿಕೆ ಚುರುಕುಗೊಂಡಿವೆ. ರೈತರು ಉತ್ಸಾಹದಿಂದ ಬಿತ್ತನೆ ಕಾರ್ಯಕ್ಕೆ ಭೂಮಿ ಹದ ಮಾಡುತ್ತಿದ್ದಾರೆ.

ರೈತರಿಗೆ ವಿತರಿಸಲು ಸರ್ಕಾರಿ ಗೋದಾಮು ಮತ್ತು ಸಹಕಾರಿ ಸಂಸ್ಥೆಗಳ ಗೋದಾಮುಗಳಲ್ಲಿ ಬಿತ್ತನೆ ಬೀಜ, ರಸಗೊಬ್ಬರ ದಾಸ್ತಾನು ಮಾಡಲಾಗುತ್ತಿದೆ. 

ತಾಲ್ಲೂಕಿನ 29 ವಿಎಸ್‌ಎಸ್‌ಎನ್‌ ಗಳಿಗೆ ಹೆಚ್ಚುವರಿ ರಸಗೊಬ್ಬರ ಬರಲಿದೆ. 30 ಟನ್ 20- 20 ರಸಗೊಬ್ಬರ, 450 ಟನ್ ಡಿಎಪಿ, 100 ಟನ್ ಯೂರಿಯಾ ರಸಗೊಬ್ಬರಗಳು ತಾಲ್ಲೂಕಿನ ಎಲ್ಲಾ ವಿಎಸ್‌ಎಸ್‌ಎನ್‌ ಗಳಿಗೆ ಸರಬರಾಜು ಆಗುತ್ತಿದೆ ಎಂದು ಬಿಡಿಸಿಸಿ ಬ್ಯಾಂಕ್ ನಿರ್ದೇಶಕ ಎಚ್.ಎನ್. ಅಶೋಕ್ ತಿಳಿಸಿದರು.

ಪ್ರಾಥಮಿಕ ಕೃಷಿ ಪತ್ತಿನ ಸೇವಾ ಸಹಕಾರ ಸಂಘದಲ್ಲಿ ರಸಗೊಬ್ಬರಗಳು ದಾಸ್ತಾನು ಮಾಡಲಾಗಿದ್ದು, ರೈತರು ಕಡಿಮೆ ದರದಲ್ಲಿ ಖರೀದಿಸಬಹುದು ಎಂದು ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT