ಸೋಮವಾರ, 29 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಾಗಡಿ: ಕೊಳ್ಳುವವರಿಲ್ಲದೆ ಕೊಳೆಯುತ್ತಿದೆ ಸಿಹಿಕುಂಬಳ

Published 22 ಸೆಪ್ಟೆಂಬರ್ 2023, 4:35 IST
Last Updated 22 ಸೆಪ್ಟೆಂಬರ್ 2023, 4:35 IST
ಅಕ್ಷರ ಗಾತ್ರ

ಮಾಗಡಿ: ಸಾವನದುರ್ಗದ ತಪ್ಪಲಿನ ಗುಡ್ಡಹಳ್ಳಿ ರೈತ ಗಂಗಣ್ಣ ಪ್ರತಿವರ್ಷವೂ ತನ್ನ ಜಮೀನಲ್ಲಿ ಸಿಹಿಕುಂಬಳ ಬೆಳೆಯುತ್ತಿದ್ದಾರೆ. ಮುಂಬೈ, ಅಹಮದಬಾದ್, ಸೂರತ್ ಹಾಗೂ ಇತರೆಡೆಗಳಲ್ಲಿ ಮಾರಾಟ ಮಾಡುತ್ತಿದ್ದರು.

ಈ ಬಾರಿ ನೂರಾರು ಟನ್‌ ಸಿಹಿಕುಂಬಳ ಬೆಳೆದು ಕಟಾವು ಮಾಡಿ ಹೊಲದ ಬದುವಿನಲ್ಲಿ ರಾಶಿ ಹಾಕಿದ್ದಾರೆ. ಸಿಹಿಕುಂಬಳ ಕಾಯಿ ಬೆಲೆ ಮಾರುಕಟ್ಟೆಯಲ್ಲಿ ಕಡಿಮೆಯಾಗಿರುವದರಿಂದ ಕೊಳ್ಳುವವರಿಲ್ಲದೆ, ಕೊಳೆಯಲಾರಂಭಿಸಿದೆ.

ಬೆಂಗಳೂರಿನ ಮಾರುಕಟ್ಟೆಯಲ್ಲಿ ಸಿಹಿಕುಂಬಳ ಕಾಯಿ ಕೆ.ಜಿಯೊಂದಕ್ಕೆ ₹5 ರಿಂದ ₹8ಕ್ಕೆ ಮಾರಾಟವಾಗುತ್ತಿದೆ. ಮಹಾರಾಷ್ಟ್ರ, ಗುಜರಾತ್, ಇತರೆಡೆಗಳಲ್ಲೂ ಸಿಹಿಕುಂಬಳಕಾಯಿ ಬೆಲೆ ಕುಸಿದಿದೆ.

ಶಿಥಿಲೀಕರಣ ಘಟಕವಾಗಲಿ ಇಲ್ಲದೆ ರೈತರು ಕಂಗಾಲಾಗಿದ್ದಾರೆ. ಕುಂಬಳಕಾಯಿ ಬೆಳೆಯಲು ಅಂದಾಜು ₹5 ಲಕ್ಷ ಖರ್ಚಾಗಿದೆ. ಉತ್ತಮ ಬೆಲೆಗೆ ಮಾರಾಟವಾಗಿದ್ದರೆ ₹8 ರಿಂದ ₹10 ಲಕ್ಷ ಗಳಿಸಬಹುದಿತ್ತು. ಕೈಗೆ ಬಂದ ತುತ್ತು ಬಾಯಿಗೆ ಬರಲಿಲ್ಲ ಎಂದು ಸಂಟಕವಾಗುತ್ತಿದೆ. ಈಗಾಗಲೆ ಕಟಾವು ಮಾಡಿ 20 ದಿನ ಕಳೆದಿವೆ ಎಂದು ರೈತ ಗಂಗಣ್ಣ ಹೇಳಿದರು.

ಸರ್ಕಾರ ಸಂಕಟದಲ್ಲಿ ಇರುವ ರೈತರ ನೆರವಿಗೆ ಮುಂದಾಗಬೇಕಿದೆ. ಸರ್ಕಾರಿ ವಿದ್ಯಾರ್ಥಿನಿಲಯ, ಮುಜರಾಯಿ ದೇವಾಲಯದ ದಾಸೋಹ ಕೇಂದ್ರಗಳಲ್ಲಿ ಸಿಹಿಕುಂಬಳ ಬಳಸಬಹುದು. ತೋಟಗಾರಿಕಾ ಇಲಾಖೆ, ಹಾಪ್‌ಕಾಮ್ಸ್‌ ಸಂಕಟದಲ್ಲಿ ಸಿಲುಕಿರುವ ರೈತರ ನೆರವಿಗೆ ಮುಂದಾಗಬೇಕು ಎಂದು ರೈತ ಪುರುಷೋತ್ತಮ್ ಹೇಳಿದರು.

ಮಾಗಡಿ ಕೊಳ್ಳುವವರಿಲ್ಲದೆ ಕೊಳೆಯಲಾರಂಭಿಸಿರುವ ಗುಡ್ಡಹಳ್ಳಿ ರೈತ ಗಂಗಣ್ಣ ಅವರ ಹೊಲದ ಬದುವಿನಲ್ಲಿ ಸಂಗ್ರಹಿಸಿಟ್ಟಿರುವ ಕುಂಬಳ ಕಾಯಿ ರಾಶಿ.
ಮಾಗಡಿ ಕೊಳ್ಳುವವರಿಲ್ಲದೆ ಕೊಳೆಯಲಾರಂಭಿಸಿರುವ ಗುಡ್ಡಹಳ್ಳಿ ರೈತ ಗಂಗಣ್ಣ ಅವರ ಹೊಲದ ಬದುವಿನಲ್ಲಿ ಸಂಗ್ರಹಿಸಿಟ್ಟಿರುವ ಕುಂಬಳ ಕಾಯಿ ರಾಶಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT