ಕನಕಪುರ: ತಾಲ್ಲೂಕು ಕಚೇರಿ ಆವರಣದಲ್ಲಿ ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಪುತ್ಥಳಿ ನಿರ್ಮಾಣ ಕಾರ್ಯ ಶೀಘ್ರ ಆಗಬೇಕೆಂದು ತಾಲ್ಲೂಕು ದಲಿತ ಸಂಘಟನೆಗಳ ಒಕ್ಕೂಟದ ಅಧ್ಯಕ್ಷ ಜೆ.ಎಂ.ಶಿವಲಿಂಗಯ್ಯ ಒತ್ತಾಯಿಸಿದರು.

ತಾಲ್ಲೂಕು ದಲಿತ ಸಂಘಟನೆಗಳ ಒಕ್ಕೂಟದ ನಿಯೋಗದೊಂದಿಗೆ ತಹಶೀಲ್ದಾರ್ ಅವರಿಗೆ ಮನವಿ ಸಲ್ಲಿಸಿದರು.

ಅಂಬೇಡ್ಕರ್ ಪುತ್ಥಳಿ ಸ್ಥಾಪಿಸುವ ವಿಚಾರವಾಗಿ ಬಹಳ ದಿನಗಳ ಹಿಂದೆಯೇ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರಿಗೆ ಮನವಿ ಸಲ್ಲಿಸಲಾಗಿತ್ತು. ಸೂಕ್ತ ಸ್ಥಳ ಗುರುತಿಸಿ ತಿಳಿಸುವಂತೆ ಅವರು ಸೂಚಿಸಿದ್ದರು ಎಂದರು.

ಒಕ್ಕೂಟದ ಎಂ.ಮಲ್ಲಿಕಾರ್ಜುನ್ ಮಾತನಾಡಿ, ಇಡೀ ವಿಶ್ವವೇ ಗೌರವಿಸುವ ಮಹಾನ್ ಚೇತನ ಅಂಬೇಡ್ಕರ್ ಪುತ್ಥಳಿ ನಿರ್ಮಾಣ ಕಾರ್ಯ ತಕ್ಷಣದಿಂದ ಪ್ರಾರಂಭವಾಗಬೇಕು ಎಂದು ಆಗ್ರಹಿಸಿದರು.

ಒಕ್ಕೂಟದ ಮುಖಂಡರಾದ ಕೋಡಿಹಳ್ಳಿ ಚಿಕ್ಕಸ್ವಾಮಿ, ಛಲವಾದಿ ನವೀನ್, ಮಳಗಾಳು ಶಿವಶಂಕರ್, ತಾಮ ಮಲ್ಲೇಶ್, ನಟರಾಜು, ಸ್ವಾಮಿ, ಬೊಮ್ಮನಹಳ್ಳಿ ಸುರೇಶ್, ಮುತ್ತುರಾಜ್, ವೀರಭದ್ರಯ್ಯ, ಕುರುಪೇಟೆ ನಟ ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.