ಶನಿವಾರ, ಜನವರಿ 25, 2020
22 °C

ಕನಿಷ್ಠ 12 ಕ್ಷೇತ್ರದಲ್ಲಿ ಬಿಜೆಪಿ ಗೆಲುವು: ಅಶ್ವತ್ಥನಾರಾಯಣ ವಿಶ್ವಾಸ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ರಾಮನಗರ: ಇದೇ 5ರಂದು ನಡೆದ ವಿಧಾನಸಭೆ ಉಪ ಚುನಾವಣೆಯಲ್ಲಿ ಬಿಜೆಪಿ ಕನಿಷ್ಠ 12 ಕ್ಷೇತ್ರದಲ್ಲಿ ಗೆಲ್ಲಲಿದೆ ಎಂದು ಉಪ ಮುಖ್ಯಮಂತ್ರಿ ಅಶ್ವತ್ಥನಾರಾಯಣ ವಿಶ್ವಾಸ ವ್ಯಕ್ತಪಡಿಸಿದರು.

ಮಾಗಡಿ ತಾಲ್ಲೂಕಿನ ಮರಡಿಗುಟ್ಟೆಯಲ್ಲಿ ಶನಿವಾರ ಮಾಧ್ಯಮದವರ ಜೊತೆ ಮಾತನಾಡಿದ ಅವರು ‘ಅಧಿಕಾರ ಎನ್ನುವುದಕ್ಕಿಂತ ಪಕ್ಷವನ್ನು ಪ್ರೀತಿಸಬೇಕು. ಪಡೆದುಕೊಳ್ಳುವ ಜೊತೆಗೆ ತ್ಯಾಗಕ್ಕೂ ಸಿದ್ಧವಿರಬೇಕು. ಶರತ್‌ ಬಚ್ಚೇಗೌಡ ಚುನಾವಣೆಗೆ ನಿಲ್ಲಬಾರದಿತ್ತು’ಎಂದು ಅಭಿಪ್ರಾಯಪಟ್ಟರು.

ಜಿಲ್ಲೆಯಲ್ಲಿ ದಲ್ಲಾಳಿಗಳ ಹಾವಳಿ ಹೆಚ್ಚಾಗಿದೆ ಎಂದು ಡಿ.ಕೆ. ಸುರೇಶ್‌ ಹೇಳಿಕೆ ಕುರಿತು ಪ್ರತಿಕ್ರಿಯೆ ನೀಡಿದ ಅವರು ‘ತಾವು ತಂದು ಹಾಕಿದ ಅಧಿಕಾರಿಗಳನ್ನು ಈಗ ತಾವೇ ಬೈಯುತ್ತಿದ್ದಾರೆ. ಡಿ.9 ಕಳೆಯಲಿ. ನಂತರ ಜಿಲ್ಲೆಯಲ್ಲಿ ‘ಕ್ಲೀನಿಂಗ್‌’ ಆರಂಭಿಸುತ್ತೇನೆ. ದಲ್ಲಾಳಿ ರಹಿತ ವ್ಯವಸ್ಥೆ ತರಲು ನಮ್ಮ ಸರ್ಕಾರ ಬದ್ಧವಾಗಿದೆ. ಅದು ಮುಂದೆ ಜನರಿಗೆ ಗೊತ್ತಾಗುವಂತೆ ಕಾರ್ಯ ನಿರ್ವಹಿಸುತ್ತೇವೆ’ ಎಂದರು.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು