ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸರಗಳ್ಳರ ಸೆರೆ: 15 ಬೈಕ್‌ ವಶ

Last Updated 4 ಜುಲೈ 2021, 8:39 IST
ಅಕ್ಷರ ಗಾತ್ರ

ಕುದೂರು(ಮಾಗಡಿ): ಬೈಕ್‌ಗಳು ಮತ್ತು ಸರಗಳವು ಮಾಡುತ್ತಿದ್ದ ಇಬ್ಬರು ಆರೋಪಿಗಳನ್ನು ಕುದೂರು ಪೊಲೀಸರು ಬಂಧಿಸಿದ್ದಾರೆ.

ತಿಪ್ಪಸಂದ್ರ ಹೋಬಳಿಯ ದೊಡ್ಡಸೋಮನಹಳ್ಳಿಯ ಮಾರುತಿ ಗೌಡ ಎಸ್‌. ಮತ್ತು ಸ್ವಾಮಿ ಬಂಧಿತರು. ಆರೋಪಿಗಳಿಂದ 15 ಬೈಕ್‌ಗಳು ಮತ್ತು 21 ಗ್ರಾಂ ತೂಕದ ₹ 95 ಸಾವಿರ ಬೆಲೆಬಾಳುವ ಮಾಂಗಲ್ಯ ಸರಗಳನ್ನು ವಶಪಡಿಸಿಕೊಳ್ಳಲಾಗಿದೆ.

ಸಂಜಯ್‌ ಎಂಬಾತನೊಂದಿಗೆ ಸೇರಿಕೊಂಡು ಮಾದನಾಯಕನಹಳ್ಳಿ, ಆರ್‌.ಎಂ.ಸಿ. ಯಾರ್ಡ್‌, ಬಾಗಲುಗುಂಟೆ ಸೇರಿದಂತೆ ಹಲವೆಡೆ ಆರೋಪಿಗಳು ಬೈಕ್‌ಗಳು ಮತ್ತು ಸರಗಳ್ಳತನ ಮಾಡಿರುವುದಾಗಿ ವಿಚಾರಣೆ ವೇಳೆ ಒಪ್ಪಿಕೊಂಡಿದ್ದಾರೆ.‌

ಅಪರಾಧ ಪ್ರಕರಣವೊಂದರ ಪತ್ತೆ ಕಾರ್ಯಕ್ಕಾಗಿ ಪೊಲೀಸರು ಜೂನ್‌ 30ರಂದು ಬೆಳಿಗ್ಗೆ 10 ಗಂಟೆಯಲ್ಲಿ ರಾಷ್ಟ್ರೀಯ ಹೆದ್ದಾರಿ 75ರ ಸೂರಪ್ಪನಹಳ್ಳಿ ಗೇಟ್‌
ಬಳಿ ಪತ್ತೆ ಕಾರ್ಯದಲ್ಲಿ ತೊಡಗಿದ್ದಾಗ ಇಬ್ಬರು ವ್ಯಕ್ತಿಗಳು ನಂಬರ್‌ ಪ್ಲೇಟ್‌ ಇಲ್ಲದ ಬೈಕ್‌ ನಿಲ್ಲಿಸಿಕೊಂಡು ನಿಂತಿದ್ದರು. ಪೊಲೀಸರನ್ನು ಕಂಡ ಕೂಡಲೇ ಸ್ಥಳದಲ್ಲಿಯೇ ಬೈಕ್‌ ಬಿಟ್ಟು ಓಡಲಾರಂಭಿಸಿದರು. ಪೊಲೀಸರು ಅವರನ್ನು ಬೆನ್ನಟ್ಟಿ ಹಿಡಿದಾಗ ಕಳ್ಳತನ ಪ್ರಕರಣಗಳು ಬೆಳಕಿಗೆ ಬಂದಿವೆ.

ಜಿಲ್ಲಾ ಎಸ್‌.ಪಿ ಗಿರೀಶ್‌ ಮಾರ್ಗದರ್ಶನದಲ್ಲಿ ಡಿವೈಎಸ್‌ಪಿ ಓಂಪ್ರಕಾಶ್‌, ಕುದೂರು ಠಾಣೆಯ ಪಿಐ ಕುಮಾರ್‌, ಪಿಎಸ್‌ಐ ಪುಟ್ಟೇಗೌಡ ಹಾಗೂ ಸಿಬ್ಬಂದಿಯಾದ ಸತೀಶ್‌, ಹೇಮಂತ್‌ಕುಮಾರ್‌, ನಾಗರಾಜು, ಶರತ್‌ ಕುಮಾರ್‌, ವೀರಭದ್ರಪ್ಪ ಅಂಗಡಿ, ಪುರು ಷೋತ್ತಮ್‌, ಚೇತನ್‌, ಶರಣಬಸು, ಸುಭಾಷ್‌ ತಂಡ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT