ಗುರುವಾರ , ಜೂಲೈ 2, 2020
27 °C

ಚಿರತೆ ದಾಳಿ: ಕರು ಬಲಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಚನ್ನಪಟ್ಟಣ ತಾಲ್ಲೂಕಿನ ನೇರಳೂರು ಗ್ರಾಮದಲ್ಲಿ ಚಿರತೆ ದಾಳಿಯಿಂದ ಸಾವಿಗೀಡಾಗಿರುವ ಕರು

ಚನ್ನಪಟ್ಟಣ: ತಾಲ್ಲೂಕಿನ ನೇರಳೂರು ಗ್ರಾಮದಲ್ಲಿ ಭಾನುವಾರ ರಾತ್ರಿ ಚಿರತೆ ದಾಳಿ ನಡೆಸಿ ಕರುವನ್ನು ಕೊಂದು ಹಾಕಿದೆ.

ಗ್ರಾಮದ ಸಿದ್ದೇಗೌಡ ಅವರಿಗೆ ಸೇರಿದ ತೋಟದ ಕೊಟ್ಟಿಗೆಯಲ್ಲಿ ಕಟ್ಟಿ ಹಾಕಿದ್ದ ವೇಳೆ ದಾಳಿ ನಡೆಸಿದೆ. ಇದರ ಬೆಲೆ ₹30 ಸಾವಿರ ಎಂದು ಅಂದಾಜಿಸಲಾಗಿದೆ.‌

ಈ ಭಾಗದಲ್ಲಿ ಎರಡು ದೊಡ್ಡ ಚಿರತೆ ಹಾಗೂ ಒಂದು ಮರಿಚಿರತೆ ಸೇರಿ ಒಟ್ಟು ಮೂರು ಚಿರತೆಗಳು ಓಡಾಡಿಕೊಂಡಿದ್ದು, ಗ್ರಾಮದ ಜನರಲ್ಲಿ ಭೀತಿ ಸೃಷ್ಟಿ ಆಗಿದೆ. ಈಗಾಗಲೇ ಗ್ರಾಮದಲ್ಲಿ ಮೂರರಿಂದ ನಾಲ್ಕು ಕುರಿಗಳನ್ನು ಬಲಿ ತೆಗೆದುಕೊಂಡಿವೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.

ಅರಣ್ಯ ಇಲಾಖೆ ಸಿಬ್ಬಂದಿ ಈ ಭಾಗದಲ್ಲಿ ಬೋನು ಇಟ್ಟು ಚಿರತೆಗಳನ್ನು ಸೆರೆ ಹಿಡಿಯಬೇಕು ಎಂದು ಒತ್ತಾಯಿಸಿದ್ದಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು