ಗುರುವಾರ , ಮಾರ್ಚ್ 30, 2023
22 °C

ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ಅಗತ್ಯ: ಮಾಜಿ ಸಚಿವ ಎಚ್‌.ಎಂ. ರೇವಣ್ಣ ಸಲಹೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಮಾಗಡಿ: ಗ್ರಾಮೀಣ ಮಕ್ಕಳು ಗುಣಮಟ್ಟದ ಶಿಕ್ಷಣ ಪಡೆಯುವಂತಾಗಬೇಕು ಎಂದು ಮಾಜಿ ಸಚಿವ ಎಚ್‌.ಎಂ. ರೇವಣ್ಣ ತಿಳಿಸಿದರು.

ಶ್ರೀಪತಿಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಮಕ್ಕಳಿಗೆ ಸೋಮವಾರ ಉಚಿತವಾಗಿ ನೋಟ್‌ಬುಕ್‌ ಮತ್ತು ಸಿಹಿ ವಿತರಿಸಿ ಅವರು ಮಾತನಾಡಿದರು.

‘ಸರ್ಕಾರಿ ಜೀಪ್‌ ಚಾಲಕನ ಮಗನನ್ನು ಸಚಿವರನ್ನಾಗಿಸಿ ಗೌರವಿಸಿರುವ ಮಾಗಡಿ ಜನತೆ ಮತ್ತು ರಂಗನಾಥ ಸ್ವಾಮಿಯನ್ನು ನಾನು ಮರೆಯಲಾರೆ. ನಾನು ಎಲ್ಲಿದ್ದರೂ ಮಾಗಡಿಯನ್ನು ಮರೆಯುವುದಿಲ್ಲ. ಕಲ್ಯಾ ಕಾಲೊನಿ ಸರ್ಕಲ್‌ ಬಳಿಯ ಮಾಗಡಿ–ಕುಣಿಗಲ್‌ ರಸ್ತೆಯಲ್ಲಿ ಸರ್ಕಲ್‌ ನಿರ್ಮಿಸಿ ಜನತೆಗೆ ಅನುಕೂಲ ಮಾಡಿಕೊಡುವಂತೆ ಕೆಶಿಪ್‌ ಅಧಿಕಾರಿಗಳಿಗೆ ಕೋರುತ್ತೇನೆ’ ಎಂದು ಹೇಳಿದರು.

ಮುಖಂಡ ಶ್ರೀಪತಿಹಳ್ಳಿ ಕೃಷ್ಣಪ್ಪ ಮಾತನಾಡಿ, ಕುಡಿಯುವ ನೀರಿಲ್ಲದೆ ಯುವಕರಿಗೆ ಹೆಣ್ಣು ಕೊಡಲು ಹಿಂಜರಿಯುತ್ತಿದ್ದ ಕಾಲದಲ್ಲಿ ಸಚಿವರಾಗಿದ್ದ ರೇವಣ್ಣ ಮಂಚನಬೆಲೆ ಜಲಾಶಯದ ನೀರನ್ನು ಪಟ್ಟಣಕ್ಕೆ ಒದಗಿಸಿದರು. ಬೆಂಗಳೂರು–ಮಾಗಡಿ ರಸ್ತೆ
ನಿರ್ಮಾಣ, ಅಂಗನವಾಡಿ ಕೇಂದ್ರಗಳು, ವಸತಿರಹಿತರಿಗೆ ಮನೆಗಳನ್ನು ಕಟ್ಟಿಸಿ ಕೊಡುವ ಮೂಲಕ ತಾಲ್ಲೂಕಿನ ಕೆರೆಗಳಿಗೆ ಹೇಮಾವತಿ ನದಿ ನೀರು ಹರಿಸುವ ಯೋಜನೆಗೆ ಚಾಲನೆ ನೀಡಿದರು ಎಂದು
ಹೇಳಿದರು.

ಕಲ್ಯಾ ಬೆಸ್ತರ ಸಂಘದ ಮುಖಂಡ ಗಂಗಭೈಲಯ್ಯ, ಶ್ರೀಪತಿಹಳ್ಳಿ ಹೋರಾಟಗಾರ ರಾಮಕೃಷ್ಣಯ್ಯ, ಸಿದ್ದರಾಜು ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.