ಆರ್ಯ ಈಡಿಗರ ಸಂಘದಿಂದ ಸಮುದಾಯ ಭವನ ಆರಂಭ

ಗುರುವಾರ , ಜೂಲೈ 18, 2019
22 °C

ಆರ್ಯ ಈಡಿಗರ ಸಂಘದಿಂದ ಸಮುದಾಯ ಭವನ ಆರಂಭ

Published:
Updated:
Prajavani

ಮಾಗಡಿ: ತಾಲ್ಲೂಕಿನ ಸೋಲೂರು ರೇಣುಕಾ ಯಲ್ಲಮ್ಮದೇವಿ ದೇವಸ್ಥಾನ ಟ್ರಸ್ಟ್‌, ಕರ್ನಾಟಕ ಪ್ರದೇಶ ಆರ್ಯ ಈಡಿಗರ ಸಂಘ, ಸೋಲೂರಿನ ಆರ್ಯ ಈಡಿಗ ಮಹಾಸಂಸ್ಥಾನ ಮಠದ ಆವರಣದಲ್ಲಿ ನೂತನವಾಗಿ ಡಾ.ಎಂ.ತಿಮ್ಮೇಗೌಡ ಅವರು ನಿರ್ಮಿಸಿರುವ ಗಣಪತಿ ವಿಗ್ರಹ ಪ್ರತಿಷ್ಠಾಪನೆ ಮತ್ತು ಜೆ.ಪಿ.ನಾರಾಯಣಸ್ವಾಮಿ ಸಮುದಾಯ ಭವನ ಪ್ರಾರಂಭೋತ್ಸವ ಸಮಾರಂಭ ಜೂನ್ 19 ಮತ್ತು 20ರಂದು ನಡೆಯಲಿದೆ ಎಂದು ತಾಲ್ಲೂಕು ಘಟಕದ ಅಧ್ಯಕ್ಷ ಎಂ.ಜಿ.ಗೋಪಾಲ್‌ ಈಡಿಗ ತಿಳಿಸಿದರು.

ಜೂನ್‌ 19ರಂದು ಬೆಳಿಗ್ಗೆ 9.30ಕ್ಕೆ ಪಂಚಗವ್ಯ ಹೋಮ, ಕಳಶಸ್ಥಾಪನೆ, ಸಂಜೆ 5ಕ್ಕೆ ಪೂರ್ಣಾಹುತಿ, ಜೂನ್‌ 20ರಂದು ಬೆಳಿಗ್ಗೆ 8ಕ್ಕೆ ಸ್ಥಾನ ಶುದ್ಧಿ ಹೋಮ, ಬೆಳಿಗ್ಗೆ 11ಕ್ಕೆ ಪ್ರತಿಮಾ ಪ್ರತಿಷ್ಠೆ, ಸತ್ಯನಾರಾಯಣಸ್ವಾಮಿ ಪೂಜೆ, ಲಕ್ಷ್ಮೀನಾರಾಯಣ ಹೃದಯ ಪಾರಾಯಣದ ನಂತರ ಜೆ.ಪಿ ನಾರಾಯಣಸ್ವಾಮಿ ಸಮುದಾಯ ಭವನದ ಉದ್ಘಾಟನೆ ನಡೆಯಲಿದೆ.

ಆಡಳಿತ ಮಂಡಳಿ, ಕಾರ್ಯಕಾರಿ ಸಮಿತಿ ಸದಸ್ಯರು ಹಾಗೂ ಧರ್ಮದರ್ಶಿಗಳು, ಆರ್‌.ಎಲ್‌ ಜಾಲಪ್ಪ ಅಕಾಡೆಮಿ ವಿದ್ಯಾರ್ಥಿಗಳು ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !