ಗುರುವಾರ , ನವೆಂಬರ್ 14, 2019
19 °C

ಯೋಗೇಶ್ವರ್ ಬಿಜೆಪಿ ಬಿಡುವುದಿಲ್ಲ:  ಅಶ್ವತ್ಥ್ ನಾರಾಯಣ

Published:
Updated:

ರಾಮನಗರ: ಸಿ.ಪಿ.ಯೋಗೇಶ್ಚರ್ ಬಿಜೆಪಿಯ ಮುಂಚೂಣಿ ನಾಯಕ‌. ಅವರು ಪಕ್ಷ  ಪ್ರಶ್ನೆಯೇ ಇಲ್ಲ ಎಂದು ಉಪ ಮುಖ್ಯಮಂತ್ರಿ ಅಶ್ವತ್ಥ್ ನಾರಾಯಣ್ ಸ್ಪಷ್ಟ ಪಡಿಸಿದರು.

ಚನ್ನಪಟ್ಟಣದಲ್ಲಿ ಸೋಮವಾರ ಪತ್ರಕರ್ತರ ಜೊತೆ ಮಾತನಾಡಿದ ಅವರು, ಸಿಪಿವೈ ನಮ್ಮ ಪಕ್ಷದ ವರಿಷ್ಠ. ಅವರು ಸದಾ ನಮ್ಮೊಂದಿಗೆ ಇರುತ್ತಾರೆ. ಅವರು ಕಾಂಗ್ರೆಸ್ ಸೇರುವ ಪ್ರಶ್ನೆಯೇ ಇಲ್ಲ ಎಂದರು. 

ಕಾಂಗ್ರೆಸ್ ಸಂಪೂರ್ಣ ತಿರಸ್ಕ್ರತ ಪಕ್ಷ. ಸಮಾಜ ವಿಭಜನೆ, ಜಾತಿ ಒಡೆಯುವುದು. ಎತ್ತಿ ಕಟ್ಟುವ ಕೆಲಸ ಮಾಡುವ ಕಾಂಗ್ರೆಸ್ ಈಗಾಗಲೇ ಮುಳುಗಡೆಯಾಗುತ್ತಿದೆ ಎಂದು ಆರೋಪಿಸಿದರು.

 ಹುಣಸೂರು ಕ್ಷೇತ್ರದ ಉಪ ಚುನಾವಣೆಯಲ್ಲಿ  ಸ್ಪರ್ಧೆ ಬಗ್ಗೆ ಪ್ರತಿಕ್ರಿಯಿಸಿದ ಅವರು, ಈ ಬಗ್ಗೆ ಇನ್ನೂ ಸಮಯ ಇದೆ. ಕಾದು ನೋಡೋಣ ಎಂದರು. 

ನಗರ ಸ್ಥಳೀಯ ಸಂಸ್ಥೆಗಳ ಚುನಾವಣೆಗಳಲ್ಲಿ  ಬಿಜೆಪಿ ಗೆಲ್ಲಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಪ್ರತಿಕ್ರಿಯಿಸಿ (+)