ಗುರುವಾರ , ಸೆಪ್ಟೆಂಬರ್ 23, 2021
26 °C

ಅಂಬೇಡ್ಕರ್‌ ಸಂಘದ ನಾಮಫಲಕಕ್ಕೆ ಹಾನಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಮಾಗಡಿ: ಡಾ.ಬಿ.ಆರ್‌. ಅಂಬೇಡ್ಕರ್‌ ಕಲಾ, ಕ್ರೀಡಾ ಮತ್ತು ಸಾಂಸ್ಕೃತಿಕ ಸಂಘದ ನಾಮಫಲಕವನ್ನು ಕಿತ್ತುಹಾಕಿ ಅವಮಾನ ಮಾಡಿರುವ ಘಟನೆ ಕೊಟ್ಟಗಾರಹಳ್ಳಿಯಲ್ಲಿ ಗುರುವಾರ ನಡೆದಿದೆ.

ಮೇಲ್ವರ್ಗದವರು ಇಬ್ಬರು ಪರಿಶಿಷ್ಟ ಜಾತಿಗೆ ಸೇರಿದ ವ್ಯಕ್ತಿಗಳನ್ನೇ ಬಳಸಿಕೊಂಡು ಅಂಬೇಡ್ಕರ್‌ ಭಾವಚಿತ್ರಕ್ಕೆ ಅವಮಾನ ಮಾಡಿದ್ದಾರೆ ಎಂದು ತಾ.ಪಂ. ಮಾಜಿ ಸದಸ್ಯ ಸಿ. ಜಯರಾಮ್‌ ಆರೋಪಿಸಿದರು.

ಅದೇ ಸ್ಥಳದಲ್ಲಿ ನಾಮಫಲಕ ಅಳವಡಿಸುವಂತೆ ಪಟ್ಟು ಹಿಡಿದ ಹೋರಾಟಗಾರರು ಪೊಲೀಸ್‌ ಠಾಣೆ ಮುಂದೆ ಪ್ರತಿಭಟನೆ
ನಡೆಸಿದರು.

ಸುದ್ದಿ ತಿಳಿದ ಕೂಡಲೇ ಸ್ಥಳಕ್ಕೆ ಆಗಮಿಸಿದ ಡಿವೈಎಸ್‌ಪಿ ಓಂ ಪ್ರಕಾಶ್‌ ಮತ್ತು ಸಿಪಿಐ ರವಿ ಬಿ. ಹೋರಾಟಗಾರರಾದ ಸಿ. ಜಯರಾಮ್‌, ಜಿ. ಕೃಷ್ಣ, ದೊಡ್ಡಿಲಕ್ಷ್ಮಣ್‌, ಗೋಪಾಲಕೃಷ್ಣ, ತೋಟದಮನೆ ಗಿರೀಶ್‌, ಗಂಗಹನುಮಯ್ಯ, ಉಮೇಶ್‌, ಪ್ರಸನ್ನಕುಮಾರ್‌ ಅವರೊಂದಿಗೆ ಚರ್ಚಿಸಿದರು.

‘ಗ್ರಾಮಸ್ಥರ ಸಮ್ಮುಖದಲ್ಲಿ ಸರ್ವರೂ ಸಭೆ ಸೇರಿ ಚರ್ಚಿಸಿ ಅಂಬೇಡ್ಕರ್‌ ಸಂಘದ ನಾಮಫಲಕ ಅಳವಡಿಸುವ ಬಗ್ಗೆ ತೀರ್ಮಾನ ಕೈಗೊಳ್ಳಲಾಗುವುದು’ ಎಂದು ಸಿಪಿಐ ರವಿ ತಿಳಿಸಿದರು.

ಕೊಟ್ಟಗಾರಹಳ್ಳಿ ಮುಖಂಡರಾದ ರೇವಣ್ಣ, ರವಿತೇಜ, ನಂಜಯ್ಯ, ವಿಜಯಕುಮಾರ್‌, ರಮೇಶ್‌, ರವಿಕುಮಾರ್‌, ಗ್ರಾ.ಪಂ. ಮಾಜಿ ಸದಸ್ಯ ಚಿಕ್ಕವೆಂಕಟಯ್ಯ, ಮೂಡ್ಲಯ್ಯ ಚರ್ಚೆಯಲ್ಲಿ ಭಾಗವಹಿಸಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.