ಮಂಗಳವಾರ, ಆಗಸ್ಟ್ 11, 2020
26 °C

ಅರ್ಕಾವತಿ ನದಿಯಲ್ಲಿ ಯುವಕನ ಮೃತದೇಹ ಪತ್ತೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕನಕಪುರ: ಮನೆಯಿಂದ ಹೊರ ಹೋಗಿದ್ದ ಯುವಕನೊಬ್ಬ ಶವವಾಗಿ ಅರ್ಕಾವತಿ ನದಿಯಲ್ಲಿ ಪತ್ತೆಯಾಗಿದ್ದಾನೆ. ಮೃತ ಯುವಕ ನಗರದ ಹನುಮಂತನಗರದ ರಾಘವೇಂದ್ರ ಅವರ ಪುತ್ರ ಅಭಿಲಾಷ್‌ (19) ಎಂದು ಗುರುತಿಸಲಾಗಿದೆ.

ಜುಲೈ 6ರಂದು ಅರ್ಕಾವತಿ ನದಿಯಲ್ಲಿ ಯುವಕನ ಬಟ್ಟೆ ಸಿಕ್ಕಿತ್ತು. ಇದರಿಂದ ಗಾಬರಿಗೊಂಡ ಪೋಷಕರು ನದಿ ತೀರದಲ್ಲಿ ಹುಡುಕಾಟ ನಡೆಸುತ್ತಿದ್ದಾಗ ಬೆಂಗಳೂರು ರಸ್ತೆಯ ಅರ್ಕಾವತಿ ಸೇತುವೆ ಕೆಳಗಡೆ ಮೃತದೇಹ ಪತ್ತೆಯಾಗಿದೆ.  

ನದಿಯಲ್ಲಿ ಈಜಲು ಹೋಗಿ ಮೃತಪಟ್ಟಿರಬಹುದೆಂದು ಪೊಲೀಸರು ಶಂಕಿಸಿದ್ದಾರೆ. ಟೌನ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.