ಗುರುವಾರ, 18 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಚರಂಡಿ ಕಾಮಗಾರಿ ಪೂರ್ಣಗೊಳಿಸಲು ಆಗ್ರಹ

Published 15 ಜೂನ್ 2024, 6:12 IST
Last Updated 15 ಜೂನ್ 2024, 6:12 IST
ಅಕ್ಷರ ಗಾತ್ರ

ಕುದೂರು: ಪಟ್ಟಣದ ಚೌಡೇಶ್ವರಿ ಸರ್ಕಲ್ ಬಳಿ ನಡೆಯುತ್ತಿರುವ ಚರಂಡಿ ಕಾಮಗಾರಿ ಶೀಘ್ರ ಪೂರ್ಣಗೊಳಿಸಬೇಕೆಂದು ವಾಹನ ಸವಾರರು ಆಗ್ರಹಿಸಿದ್ದಾರೆ.

ಸರ್ಕಲ್ ಬಳಿ ಶಾಲೆ, ದೇವಸ್ಥಾನ, ಕಲ್ಯಾಣ ಮಂಟಪ ಇದೆ. ನೂರಾರು ವಿದ್ಯಾರ್ಥಿಗಳು, ಸಾರ್ವಜನಿಕರು ಸಂಚರಿಸುತ್ತಾರೆ. ಕಾಮಗಾರಿಯಿಂದಾಗಿ ಖಾಸಗಿ ಹಾಗೂ ಸರ್ಕಾರಿ ಬಸ್‌ಗಳು, ಶಾಲಾ ವಾಹನಗಳು ಕಿರಿದಾದ ಸರ್ಕಲ್‌ನಲ್ಲಿ ವಾಹನವನ್ನು ಸರಾಗವಾಗಿ ತಿರುಗಿಸಿಕೊಳ್ಳಲಾಗದೆ  ಪರದಾಡುತ್ತಿದ್ದಾರೆ.

ಚೌಡೇಶ್ವರಿ ಸರ್ಕಲ್ ಬಳಿ ರಸ್ತೆ ಅಗೆದು ತಿಂಗಳು ಸಮೀಪಿಸಿದೆ. ಕಳೆದ ವಾರ ಮಳೆ ಬಂದಾಗಲೇ ರಸ್ತೆ ಜಾರು ಬಂಡಿಯಾಗಿತ್ತು. ವಾಹನ ಸವಾರರಿಗೆ ಭದ್ರತೆ ನೀಡಬೇಕಿದ್ದ ಆಡಳಿತ ಇಷ್ಟೊಂದು ಅವಾಂತರಕ್ಕೆ ಕಾರಣವಾಗಿದೆ ಎಂದು ಮಾಗಡಿ ತಾಲ್ಲೂಕು ಪಂಚಾಯಿತಿ ಮಾಜಿ ಅಧ್ಯಕ್ಷ ಕೆ.ಆರ್ ಯತಿರಾಜು‌ ಆರೋಪಿಸಿದರು.

ಕಾಮಗಾರಿ ಪೂರ್ಣಗೊಳಿಸಿ ಸಾರ್ವಜನಿಕರ ಸಂಚಾರಕ್ಕೆ ಮುಕ್ತಗೊಳಿಸಲಾಗುವುದು ಎಂದು ಗ್ರಾಮ ಪಂಚಾಯಿತಿ ಅಧ್ಯಕ್ಷೆ ಕುಸುಮಾ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT