ಮಂಗಳವಾರ, ಅಕ್ಟೋಬರ್ 22, 2019
25 °C

ರಾಮನಗರ | ಅಪಘಾತದಲ್ಲಿ ಮೃತಪಟ್ಟ ಸಹವರ್ತಿ ಕಳೇಬರದ ಮುಂದೆ ಕಣ್ಣೀರಿಟ್ಟ ನಾಯಿ!

Published:
Updated:
Prajavani

ರಾಮನಗರ: ವಾಹನ ಡಿಕ್ಕಿ ಹೊಡೆದು ಮೃತಪಟ್ಟ ನಾಯಿಯ ಕಳೇಬರದ ಮುಂದೆ ಮತ್ತೊಂದು ನಾಯಿ ರೋಧಿಸುತ್ತಿರುವ ದೃಶ್ಯ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗುತ್ತಿದೆ.

ನಗರದ ಅರ್ಚಕರಹಳ್ಳಿ ಬಳಿಯ ಹೆದ್ದಾರಿಯಲ್ಲಿ ಈ ಘಟನೆ ನಡೆದಿದ್ದು, ಬೀದಿನಾಯಿಯೊಂದು ವಾಹನಕ್ಕೆ ಸಿಲುಕಿ ಮೃತ ಪಟ್ಟಿತ್ತು. ಇದನ್ನು ಅರಗಿಸಿಕೊಳ್ಳಲಾಗದ ಮತ್ತೊಂದು ನಾಯಿಯು ಅದರ ಕಳೇಬರದ ಮುಂದೆ ಕುಳಿತು ರೋಧಿಸುತಿತ್ತು. ಅನೇಕ ಬಾರಿ ತನ್ನ ಸಹವರ್ತಿಯ ದೇಹವನ್ನು ಮುಟ್ಟಿ ಎಬ್ಬಿಸಲು ಯತ್ನಿಸಿತು. ಅದು ಏಳದೇ ಹೋದಾಗ ಬೊಗಳುತ್ತಾ ಕಣ್ಣೀರು ಹಾಕಿತು. ಸುಮಾರು ಎರಡು ಗಂಟೆ ಕಾಲ ಹೀಗೆಯೇ ನಡೆದಿತ್ತು ಎನ್ನಲಾಗಿದೆ.

ಈ ದೃಶ್ಯ ನೋಡಿದ ಸಾರ್ವಜನಿಕರು ಅಪಘಾತಕ್ಕೊಳಗಾದ ನಾಯಿಯ ಅಂತ್ಯಸಂಸ್ಕಾರ ನಡೆಸಿದರು. ಮತ್ತೊಂದು ನಾಯಿಗೆ ಪ್ರೀತಿಯಿಂದ ಊಟವನ್ನೂ ನೀಡಿದರು.

ಚುನಾವಣಾ ಫಲಿತಾಂಶ 2019 | ಹರಿಯಾಣ ಮತ್ತು ಮಹಾರಾಷ್ಟ್ರ ವಿಧಾನಸಭೆ 2019 ಚುನಾವಣೆಗೆ ಸಂಬಂಧಿಸಿದ ಸಮಗ್ರ ಸುದ್ದಿ, ಮಾಹಿತಿ, ವಿಶ್ಲೇಷಣೆ ಇಲ್ಲಿ ಲಭ್ಯ.

ಮಹಾರಾಷ್ಟ್ರ ವಿಧಾನಸಭೆಯ ಫಲಿತಾಂಶಕ್ಕಾಗಿ ಇಲ್ಲಿ ಕ್ಲಿಕ್ ಮಾಡಿ

ಹರಿಯಾಣ ವಿಧಾನಸಭೆಯ ಫಲಿತಾಂಶಕ್ಕಾಗಿ ಇಲ್ಲಿ ಕ್ಲಿಕ್ ಮಾಡಿ

ಪ್ರತಿಕ್ರಿಯಿಸಿ (+)