ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಕೋಟೆ ರಾಮೇಶ್ವರ ರಥೋತ್ಸವ

Published 21 ಮಾರ್ಚ್ 2024, 4:22 IST
Last Updated 21 ಮಾರ್ಚ್ 2024, 4:22 IST
ಅಕ್ಷರ ಗಾತ್ರ

ಮಾಗಡಿ: ಪಟ್ಟಣದ ಕೋಟೆ ರಾಮೇಶ್ವರ ಬ್ರಹ್ಮ ರಥೋತ್ಸವ ಮಂಗಳವಾರ ಅದ್ದೂರಿಯಾಗಿ ನೆರವೇರಿತು.

ರಥೋತ್ಸವದ ಅಂಗವಾಗಿ ಕೋಟೆ ರಾಮೇಶ್ವರ ಮೂರ್ತಿಗೆ ಬೆಳಗ್ಗೆಯಿಂದ ಪಂಚಾಮೃತ ಅಭಿಷೇಕ ಹೂವಿನ ಅಲಂಕಾರ ಏರ್ಪಡಿಸಲಾಗಿತ್ತು, ಉತ್ಸವ ಮೂರ್ತಿಗಳಿಗೆ ವಿಶೇಷ ಪೂಜೆ ಸಲ್ಲಿಸಿ ರಥದಲ್ಲಿ ಕೂರಿಸಲಾಯಿತು. ದೇವಸ್ಥಾನದ ಸುತ್ತ ಚಿಕ್ಕ ರಥದಲ್ಲಿ ಮೂರು ಸುತ್ತು ಎಳೆಯುವ ಮೂಲಕ ಬ್ರಹ್ಮರಥೋತ್ಸವಕ್ಕೆ ಅದ್ದೂರಿಯಾಗಿ ಚಾಲನೆ ನೀಡಲಾಯಿತು. ರಥೋತ್ಸವದ ಅಂಗವಾಗಿ ಭಕ್ತರಿಗೆ ಪಾನಕ, ಕೋಸಂಬರಿ, ಅನ್ನ ಸಂತರ್ಪಣೆ ಏರ್ಪಡಿಸಲಾಗಿತ್ತು.‌

ಇಮ್ಮಡಿ ಕೆಂಪೇಗೌಡರ ತಾಯಿ ಚಿಕ್ಕಮ್ಮಾಜಿ ಗಂಡು ಸಂತಾನವಾದಲ್ಲಿ ದಕ್ಷಿಣದಲ್ಲಿನ ರಾಮೇಶ್ವರನಿಗೆ ಪೂರಿ ಸಲ್ಲಿಸಿ ಕಾಣಿಸುವುದಾಗಿ ಹರಕೆ ಹೊತ್ತಿದಳು. ಇಮ್ಮಡಿ ಕೆಂಪೇಗೌಡರ ಜನನದ ನಂತರ ನಡೆದ ಕದನಗಳ ಕಾರಣ ಚಿಕ್ಕಮ್ಮಾಜಿ ಅವರಿಗೆ ಮೇಶ್ವರನಿಗೆ ಹರಕೆ ಸಲ್ಲಿಸಲು ಆಗಲಿಲ್ಲ. ತಾಯಿಯ ಆಸೆಯ ನೆರವೇರಿಸಲು ಇಮ್ಮಡಿ ಕೆಂಪೇಗೌಡ ಮಾಗಡಿ ಕೋಟೆಯ ದೇವಮೂಲೆಯಲ್ಲಿ ಕ್ರಿ.ಶ. 1628ರಲ್ಲಿ ಕೋಟೆ ರಾಮೇಶ್ವರ ದೇವಾಲಯವನ್ನು ನಿರ್ಮಿಸಿದರು. ಇದರ ಬಗ್ಗೆ ಇತಿಹಾಸದ ದಾಖಲೆಗಳಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT