ಚನ್ನಪಟ್ಟಣ: ರೈತ ಸಂಘದ ರಾಜ್ಯ ಘಟಕದ ಕಾರ್ಯದರ್ಶಿ ಕೆ.ಎಸ್.ಲಕ್ಷ್ಮಣಸ್ವಾಮಿ ಅವರ ನಿಧನದಿಂದ ತಾಲ್ಲೂಕಿನ ಹೋರಾಟದ ಕೊಂಡಿಯೊಂದು ಕಳಚಿದಂತಾಗಿದೆ.

2001ರಲ್ಲಿ ತಾಲ್ಲೂಕಿನಲ್ಲಿ ನಡೆದ ನೀರಾ ಹೋರಾಟಕ್ಕೂ ಮೊದಲೇ ರೈತಸಂಘ ಹೋರಾಟದ ಮೂಲಕ ಗುರ್ತಿಸಿಕೊಂಡಿದ್ದ ಲಕ್ಷ್ಮಣಸ್ವಾಮಿ ಅವರು, ನಿರಂತರ 25ಕ್ಕೂ ಹೆಚ್ಚು ವರ್ಷಗಳಿಂದ ರೈತ ಸಂಘದಲ್ಲಿ ವಿವಿಧ ಹುದ್ದೆಗಳಲ್ಲಿ ದುಡಿದು ಹೋರಾಟ ಮಾಡಿದವರು.

ತಾಲ್ಲೂಕಿನ ಗಡಿ ಗ್ರಾಮವಾದ ಕದರಮಂಗಲದಲ್ಲಿ ಮೊದಲಿಗೆ ಹಾಲು ಉತ್ಪಾದಕರ ಸಹಕಾರ ಸಂಘದ ಕಾರ್ಯದರ್ಶಿಯಾಗಿ ಕೆಲಸ ಮಾಡಿ, ನಂತರದ ದಿನಗಳಲ್ಲಿ ರೈತ ಸಂಘದಲ್ಲಿ ಗುರ್ತಿಸಿಕೊಂಡು, ತಾಲ್ಲೂಕು ರೈತ ಸಂಘದ ಅಧ್ಯಕ್ಷರಾಗಿ, ಜಿಲ್ಲಾ ಘಟಕದ ಅಧ್ಯಕ್ಷರಾಗಿ ಸಂಘಟನೆಯಲ್ಲಿ ತೊಡಗಿಸಿಕೊಂಡಿದ್ದರು. ನೂರಾರು ರೈತಪರ ಹಾಗೂ ಜನಪರ ಹೋರಾಟಗಳಲ್ಲಿ ಸಕ್ರಿಯವಾಗಿ ಭಾಗವಹಿಸಿ ರೈತಪರ ಧ್ವನಿಯಾಗಿದ್ದರು.

ನಂಜುಂಡಸ್ವಾಮಿ ಅವರ ನಿಧನದ ನಂತರ ಹೋಳಾಗಿದ್ದ ರೈತ ಸಂಘದ ಕೋಡಿಹಳ್ಳಿ ಚಂದ್ರಶೇಖರ್ ಬಣದಲ್ಲಿ ಗುರ್ತಿಸಿಕೊಂಡಿದ್ದ ಅವರು, ಪ್ರಸ್ತುತ ರಾಮನಗರ ಜಿಲ್ಲಾ ಘಟಕದ ಅಧ್ಯಕ್ಷರಾಗಿದ್ದರು. 2019ರಲ್ಲಿ ಆ ಬಣದ ರಾಜ್ಯ ಕಾರ್ಯದರ್ಶಿಯಾಗಿಯೂ ನೇಮಕವಾಗಿದ್ದರು.

ತಾಲ್ಲೂಕಿನಲ್ಲಿ ಹೋರಾಟದ ಗಟ್ಟಿಧ್ವನಿ ಎಂದೇ ಜನಜನಿತವಾಗಿದ್ದ ಅವರು, ರೈತರಿಗೆ ಅನ್ಯಾಯವಾದಾಗ ಮುಂಚೂಣಿಯಲ್ಲಿ ಇದ್ದವರು. ಸರ್ಕಾರಿ ಕಚೇರಿಗಳಿಗೆ ನುಗ್ಗಿ ರೈತರಿಗೆ ಆಗುವ ಅನ್ಯಾಯ ನೇರವಾಗಿ ಪ್ರಶ್ನಿಸುತ್ತಿದ್ದವರು. ರೈತ ಸಂಘ ಆಯೋಜಿಸುವ ರಾಜ್ಯಮಟ್ಟದ ಹೋರಾಟಗಳಿಗೆ ಜಿಲ್ಲೆಯಿಂದ ರೈತರನ್ನು ಕರೆದೊಯ್ದು ಹೋರಾಟಗಳಿಗೆ ಬೆಂಬಲವಾಗಿ ನಿಂತಿದ್ದವರು. ಜಿಲ್ಲೆಯ ವಿವಿಧ ಗ್ರಾಮಗಳಲ್ಲಿ ನೂರಾರು ರೈತಸಂಘದ ಶಾಖೆಗಳ ಪ್ರಾರಂಭ ಮಾಡಿಸಿದ ಕೀರ್ತಿ ಅವರಿಗೆ ಸಲ್ಲುತ್ತದೆ.

ಕನ್ನಡಪರ ಹೋರಾಟ, ಕಾವೇರಿ ಚಳವಳಿಗಳಲ್ಲಿಯೂ ಭಾಗಿಯಾಗಿದ್ದ ಲಕ್ಷ್ಮಣಸ್ವಾಮಿ ಅವರು, ತಾಲ್ಲೂಕಿಗೆ ಮುಖ್ಯಮಂತ್ರಿ ಆಗಮಿಸುವ ವೇಳೆ ತಾಲ್ಲೂಕಿನ ರೈತರಿಗೆ ಆಗಬೇಕಿರುವ ಕೆಲಸಗಳ ಬಗ್ಗೆ ಮನವಿ ಸಲ್ಲಿಸುತ್ತಿದ್ದರು. ತೆಂಗು, ರೇಷ್ಮೆ, ಮಾವು ಸೇರಿದಂತೆ ರೈತರ ಬೆಳೆಗಳಿಗೆ ಬೆಂಬಲ ಬೆಲೆ ನೀಡಿ ರೈತರನ್ನು ಉಳಿಸಬೇಕು ಎಂದು ಸರ್ಕಾರವನ್ನು ಆಗಾಗ ಒತ್ತಾಯಿಸುತ್ತಿದ್ದ ಮುಂಚೂಣಿ ನಾಯಕ.

ಜುಲೈ ತಿಂಗಳಿನಲ್ಲಿ ನಡೆದ ವಿಠಲೇನಹಳ್ಳಿ ಚಲುವಯ್ಯ ಅವರ ಪುಣ್ಯತಿಥಿ ಸಮಯದಲ್ಲಿ ರೈತ ಹುತಾತ್ಮರ ದಿನಾಚರಣೆ ಮಾಡಿ, ಸರ್ಕಾರದಿಂದ ರೈತರಿಗೆ ಆಗುತ್ತಿರುವ ನೋವು ತೋಡಿಕೊಂಡಿದ್ದರು.
ಪಕ್ಷಾತೀತವಾಗಿ ಸ್ನೇಹಿತರನ್ನು ಹೊಂದಿದ್ದ ಅವರು, ಅನ್ಯಾಯವಾದಾಗ ಯಾವುದೇ ಪಕ್ಷ ಎಂಬುದನ್ನು ನೋಡದೆ ಸಿಡಿದೇಳುವ ಗುಣ ಹೊಂದಿದ್ದರು. ಅವರ ಅಗಲಿಗೆ ಹೋರಾಟ ಕ್ಷೇತ್ರಕ್ಕೆ ತುಂಬಲಾರದ ನಷ್ಟ ಉಂಟು ಮಾಡಿರುವುದಂತೂ ಸತ್ಯ ಎಂದು ಅವರ ಸ್ನೇಹಿತರು ಕಂಬನಿ ಮಿಡಿಯುತ್ತಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.