ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರಥಮ ಪದವಿ ತರಗತಿ ಇಂದಿನಿಂದ

ವಿದ್ಯಾರ್ಥಿಗಳಿಗೆ ಕೋವಿಡ್ ಪರೀಕ್ಷೆಯಿಂದ ವಿನಾಯಿತಿ
Last Updated 15 ಜನವರಿ 2021, 3:20 IST
ಅಕ್ಷರ ಗಾತ್ರ

ರಾಮನಗರ: ಎಂಜಿನಿಯರಿಂಗ್‌, ಡಿಪ್ಲೊಮಾ ಹಾಗೂ ಪದವಿ ಕಾಲೇಜುಗಳು ಶುಕ್ರವಾರ ಬಾಗಿಲು ತೆರೆಯಲಿದ್ದು, ಅದಕ್ಕಾಗಿ ಅಗತ್ಯ ಸಿದ್ಧತೆ ನಡೆದಿದೆ.

ಪ್ರಥಮ ವರ್ಷ ಪದವಿ ತರಗತಿಗಳು, ತಾಂತ್ರಿಕ ಶಿಕ್ಷಣ ವಿಭಾಗದ ಡಿಪ್ಲೊಮಾ, ಎಂಜಿನಿಯರಿಂಗ್‌ ಕಾಲೇಜುಗಳನ್ನು ತೆರೆಯುವಂತೆ ಉನ್ನತ ಶಿಕ್ಷಣ ಇಲಾಖೆಯು ಈಗಾಗಲೇ ಸೂಚನೆ ನೀಡಿದೆ. ಈ ಮೂಲಕ ಪ್ರಸಕ್ತ ವರ್ಷದ ಶೈಕ್ಷಣಿಕ ಚಟುವಟಿಕೆಗಳಿಗೆ ಅಧಿಕೃತವಾಗಿ ಚಾಲನೆ ದೊರೆಯಲಿದೆ.

ಸುಮಾರು ಹತ್ತು ತಿಂಗಳ ಬಳಿಕ ಪ್ರಥಮ ಮತ್ತು ದ್ವಿತೀಯ ವರ್ಷದ ‍ಪದವಿ ತರಗತಿಗಳು ಆರಂಭ ಆಗುತ್ತಿವೆ. ಈ ಹಿನ್ನೆಲೆಯಲ್ಲಿ ಕಾಲೇಜು ಆವರಣ ಸ್ವಚ್ಛತೆ ಜೊತೆಗೆ ಪ್ರತಿ ತರಗತಿಗೂ ಸ್ಯಾನಿಟೈಸ್‌ ಸಹ ಮಾಡಲಾಗಿದೆ. ತರಗತಿಗಳು ನಡೆದರೂ ವಿದ್ಯಾರ್ಥಿಗಳ ಹಾಜರಿ ಕಡ್ಡಾಯ ಆಗಿಲ್ಲ. ವಿದ್ಯಾರ್ಥಿಗಳಿಗೆ ಈಗಲೂ ಆನ್‌ಲೈನ್ ಪಾಠದ ಆಯ್ಕೆಯನ್ನು ನೀಡಲಾಗಿದೆ.

ನಿಯಮ ಸಡಿಲಿಕೆ: ಜಿಲ್ಲೆಯಲ್ಲಿ ಎರಡು ತಿಂಗಳ ಹಿಂದೆಯೇ ಪದವಿ ಕಾಲೇಜುಗಳು ತೆರೆದಿದ್ದು, ಅಂತಿಮ ವರ್ಷದ ತರಗತಿಗಳನ್ನು ನಡೆಸಲು ಕಾಲೇಜು ಶಿಕ್ಷಣ ಇಲಾಖೆಯು ಅನುಮತಿ ನೀಡಿತ್ತು. ಈ ಸಂದರ್ಭ ಪ್ರತಿ ವಿದ್ಯಾರ್ಥಿಗೂ ಕೋವಿಡ್ ಪರೀಕ್ಷೆ ಕಡ್ಡಾಯಗೊಳಿಸಿದ್ದು, ಜೊತೆಗೆ ಪೋಷಕರ ಅನುಮತಿ ಪತ್ರವನ್ನೂ ಕಡ್ಡಾಯ ಮಾಡಲಾಗಿತ್ತು. ಆದರೆ, ಈಗ ಕೋವಿಡ್ ಪರೀಕ್ಷೆ ಕಡ್ಡಾಯ ಎಂಬ ನಿಯಮವನ್ನು ಕೈಬಿಡಲಾಗಿದೆ. ಆದರೆ ಪೋಷಕರ ಒಪ್ಪಿಗೆ ಪತ್ರ ತರುವಂತೆ ವಿದ್ಯಾರ್ಥಿಗಳಿಗೆ ಸೂಚನೆ ನೀಡಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT