ಆಸ್ಪತ್ರೆಯ ಆಡಳಿತಾಧಿಕಾರಿ ಡಾ. ಶಶಿಧರ್ ನೇತೃತ್ವದಲ್ಲಿ ಆಸ್ಪತ್ರೆಯ ವೈದ್ಯರು ನೌಕರರು ಮತ್ತು ಸಿಬ್ಬಂದಿ ವೈಯಕ್ತಿಕವಾಗಿ ಸಹಾಯ ಮಾಡಿದರು. ವೈನಾಡಿನಲ್ಲಿ ಸಂಕಷ್ಟಕ್ಕೆ ಸಿಲುಕಿರುವ ಜನರ ಸಹಾಯಕ್ಕಾಗಿ ಒಂದು ಸಣ್ಣ ಪ್ರಯತ್ನ ಮಾಡುತ್ತಿದ್ದೇವೆ, ಅಗತ್ಯ ವಸ್ತುಗಳು, ಔಷಧಿಗಳು, ಆಹಾರ ಪದಾರ್ಥಗಳನ್ನು ಕಳಿಸಿ ಕೊಡುತ್ತಿದ್ದೇವೆ ಎಂದು ಡಾ. ಶಶಿಧರ್ ಹೇಳಿದರು.