ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸರ್ಕಾರಿ ನೌಕರರ ಸಂಘಕ್ಕೆ ಆಯ್ಕೆ

ಸಾರ್ವತ್ರಿಕ ಚುನಾವಣೆ ನೆನಪಿಸಿದ ಮತದಾನ: ವಿಜೇತರಿಂದ ಸಂಭ್ರಮಾಚರಣೆ
Last Updated 13 ಜೂನ್ 2019, 16:23 IST
ಅಕ್ಷರ ಗಾತ್ರ

ರಾಮನಗರ: ಸರ್ಕಾರಿ ನೌಕರರ ಸಂಘದ ಜಿಲ್ಲಾ ಘಟಕದ 13 ಇಲಾಖೆಗಳ 25 ನಿರ್ದೇಶಕ ಸ್ಥಾನಗಳಿಗೆ ಗುರುವಾರ ಚುನಾವಣೆ ನಡೆದಿದ್ದು, ಸಂಜೆ ಫಲಿತಾಂಶ ಪ್ರಕಟಗೊಂಡಿತು.

ಪ್ರೌಢ ಶಿಕ್ಷಣ ಇಲಾಖೆ ಪ್ರತಿನಿಧಿಗಳಾಗಿ -ಆರ್.ಕೆ. ಬೈರಲಿಂಗಯ್ಯ, ಶಿವಸ್ವಾಮಿ, ಸರ್ಕಾರಿ ಪದವಿಪೂರ್ವ ಶಿಕ್ಷಣ ಇಲಾಖೆಯಿಂದ - ಎಸ್. ಮಂಜುನಾಥ್, ಕೃಷಿಇಲಾಖೆ - ಚಿಕ್ಕವೀರಯ್ಯ ಮತ್ತು ಯೋಗೇಶ್, ಪಶುಸಂಗೋಪನೆ ಇಲಾಖೆ - ಎಚ್.ಪಿ. ರವೀಶ್, ಕಂದಾಯ ಇಲಾಖೆ - ಎನ್. ರಮೇಶ್, ಎಂ.ಬಿ. ಯೋಗೇಶ್, ಎಂ.ಸಿ. ರಾಜಶೇಖರಮೂರ್ತಿ, ಲೋಕೋಪಯೋಗಿ ಮತ್ತು ಪಂಚಾಯತ್ ಎಂಜಿನಿಯರಿಂಗ್ ಇಲಾಖೆ - ಸಿ. ಬೈರಪ್ಪ ಮತ್ತು ವಿ. ಶ್ರೀನಿವಾಸ್, ಹಿಂದುಳಿದ ವರ್ಗಗಳ ಮತ್ತು ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ - ಎಂ. ರವಿಕುಮಾರ್, ವೈದ್ಯಕೀಯ ಮತ್ತು ಜಿಲ್ಲಾ ಆಸ್ಪತ್ರೆ - ಡಾ.ಎಸ್.ವಿ. ನಾರಾಯಣಸ್ವಾಮಿ ಮತ್ತು ಎಚ್.ಎಸ್.ಸದಾನಂದ ಆಯ್ಕೆಯಾದರು.

ಅಂತೆಯೇ ಆಯುಷ್ ಮತ್ತು ಇಎಸ್ಐ ಇಲಾಖೆಯಿಂದ - ಡಾ. ಎಚ್. ರಂಗಪ್ಪ, ರೇಷ್ಮೆಇಲಾಖೆ - ಡಿ. ಪುಟ್ಟಸ್ವಾಮಿ, ನ್ಯಾಯಾಂಗ ಇಲಾಖೆ - ಎನ್. ಕೆಂಪೇಗೌಡ ಮತ್ತು ಸಿ. ನರಸಿಂಹ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ - ಕೃಷ್ಣೇಗೌಡ, ಸಿ.ಎಂ. ದಾಸಯ್ಯ, ಡಿ. ಪುಟ್ಟಸ್ವಾಮಿಗೌಡ, ಪ್ರಾಥಮಿಕ ಶಿಕ್ಷಣ ಇಲಾಖೆ- ಎಂ. ಕಾಂತರಾಜು, ಸಂಜೀವೇಗೌಡ, ಮರುಳಸಿದ್ದಯ್ಯ, ಹನುಮಯ್ಯ ಆಯ್ಕೆಗೊಂಡರು.

‘ಸರ್ಕಾರಿ ನೌಕರರ ಸಂಘದ ಜಿಲ್ಲಾ ಘಟಕಕ್ಕೆ ಈಗಾಗಲೇ 37 ಮಂದಿ ನಿರ್ದೇಶಕರಾಗಿ ಅವಿರೋಧವಾಗಿ ಆಯ್ಕೆಯಾಗಿದ್ದು, ಸಂಘದಲ್ಲಿ ಒಟ್ಟು 62 ಮಂದಿ ನಿರ್ದೇಶಕರಿದ್ದಾರೆ’ ಎಂದು ಚುನಾವಣಾಧಿಕಾರಿ ಕೆ. ಕರೀಗೌಡ, ಸಹಾಯಕ ಚುನಾವಣಾಧಿಕಾರಿ ಎಸ್. ವೆಂಕಟಪ್ಪ ತಿಳಿಸಿದರು.

ಪಟಾಕಿ ಸಿಡಿಸಿ ಸಂಭ್ರಮ: ವಿವಿಧ ಇಲಾಖೆಗಳಿಗೆ ನಿರ್ದೇಶಕರಾಗಿ ಆಯ್ಕೆಯಾದವರಿಗೆ ಹೂವಿನ ಹಾರ ಹಾಕುವ ಮೂಲಕ ಅಭಿನಂದಿಸಲಾಯಿತು. ಬೆಂಬಲಿಗರು ಪಟಾಕಿ ಸಿಡಿಸಿ, ಸಿಹಿ ಹಂಚಿ ಸಂಭ್ರಮಾಚರಣೆ ನಡೆಸಿದರು.

ಬಿರುಸಿನ ಮತದಾನ: ಗುರುವಾರ ಬೆಳಿಗ್ಗೆ ಇಲ್ಲಿನ ಸ್ಪೂರ್ತಿ ಭವನದಲ್ಲಿ ಪ್ರೌಢ ಶಿಕ್ಷಣ, ಪಶು ಸಂಗೋಪನೆ ಇಲಾಖೆ, ಪದವಿ ಪೂರ್ವ ಶಿಕ್ಷಣ ಇಲಾಖೆ, ಆಯುಷ್ ಮತ್ತು ಇಎಸ್ಐ ಇಲಾಖೆ, ಹಿಂದುಳಿದ ವರ್ಗಗಳ ಮತ್ತು ಅಲ್ಪಸಂಖ್ಯಾತರ ಇಲಾಖೆ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ರೇಷ್ಮೆ ಇಲಾಖೆ, ಚೈತನ್ಯ ಭವನದಲ್ಲಿ ಕಂದಾಯ ಇಲಾಖೆ ಹಾಗೂ ನ್ಯಾಯಾಂಗ ಇಲಾಖೆ, ಡಯಟ್ ನಲ್ಲಿ ಪ್ರಾಥಮಿಕ ಶಿಕ್ಷಣ, ಕೃಷಿ ಇಲಾಖೆ, ವೈದ್ಯಕೀಯ ಮತ್ತು ಜಿಲ್ಲಾ ಆಸ್ಪತ್ರೆ, ಲೋಕೋಪಯೋಗಿ ಮತ್ತು ಪಂಚಾಯತ್ ಎಂಜಿಯರಿಂಗ್ ಇಲಾಖೆಗೆ ಸಂಬಂಧಿಸಿದಂತೆ ಚುನಾವಣೆ ನಡೆಯಿತು.

ಪ್ರಾಥಮಿಕ ಶಿಕ್ಷಣ ನಿರ್ದೇಶಕ ಸ್ಥಾನದ ಮತದಾನ 3 ಕೊಠಡಿಗಳಲ್ಲಿ, ಪ್ರೌಢಶಿಕ್ಷಣ ನಿರ್ಧೇಶಕ ಸ್ಥಾನದ ಮತದಾನ ಎರಡು ಕೊಠಡಿಗಳಲ್ಲಿ ಹಾಗೂ ಉಳಿದ ಇಲಾಖೆಗಳ ಮತದಾನ ಪ್ರತ್ಯೇಕವಾಗಿ ಒಂದೊಂದು ಕೊಠಡಿಗಳಲ್ಲಿ ನಡೆಯಿತು.

13 ಇಲಾಖೆಗಳಲ್ಲಿನ ನೌಕರರು ಅತ್ಯುತ್ಸಾಹದಿಂದ ಚುನಾವಣೆಯಲ್ಲಿ ಪಾಲ್ಗೊಂಡಿದ್ದರು. ಸ್ಪೂರ್ತಿ ಭವನದಲ್ಲಿ ಸರ್ಕಾರಿ ನೌಕರರ ಸಂಘದ ಚುನಾವಣೆ ನಡೆದಿದ್ದರಿಂದ ಕೋರ್ಟ್ ರಸ್ತೆ ಜನರು ಹಾಗೂ ವಾಹನಗಳಿಂದ ತುಂಬಿ ಹೋಗಿತ್ತು. ನೌಕರರು ತಮ್ಮ ಅಭ್ಯರ್ಥಿಗಳ ಪರವಾಗಿ ಪ್ರಚಾರ ಮಾಡುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು. ಮತ ಹಾಕಲು ಬಂದ ನೌಕರರಿಗೆ ಟೀ, ಕಾಫಿ, ಕಲ್ಲಂಗಡಿ, ಪರಂಗಿ ಹಣ್ಣುಗಳನ್ನು ನೀಡಲಾಯಿತು.

ಸಾರ್ವತ್ರಿಕ ಚುನಾವಣೆಯಂತೆಯೇ ಸರ್ಕಾರಿ ನೌಕರರ ಸಂಘದ ಚುನಾವಣೆಯೂ ನಡೆಯಿತು.

ಅಂಕಿ–ಅಂಶ
62: ಸರ್ಕಾರಿ ನೌಕರರ ಸಂಘದಲ್ಲಿನ ಒಟ್ಟು ನಿರ್ದೇಶಕ ಸ್ಥಾನಗಳು
25: ಗುರುವಾರ ನಡೆದ ಮತದಾನದಲ್ಲಿ ಚುನಾಯಿತರಾದವರು
37: ಅವಿರೋಧವಾಗಿ ಆಯ್ಕೆಯಾದ ನಿರ್ದೇಶಕರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT