ಶನಿವಾರ, ನವೆಂಬರ್ 16, 2019
22 °C

ಪುರಸಭೆ ಚುನಾವಣೆ: ತೀವ್ರಗೊಂಡ ಚುನಾವಣಾ ಪ್ರಚಾರ

Published:
Updated:
Prajavani

ಮಾಗಡಿ: ಪುರಸಭೆ ಚುನಾವಣೆ ಅಂಗವಾಗಿ ನ.10ರಂದು ಸಂಜೆ 6 ಗಂಟೆಗೆ ಬಹಿರಂಗ ಪ್ರಚಾರ ಅಂತ್ಯಗೊಳ್ಳಲಿದೆ. ಶನಿವಾರ ಮಧ್ಯಾಹ್ನದ ನಂತರ ಸೋಮೇಶ್ವರ ಬಡಾವಣೆ, ರಾಜೀವಗಾಂಧಿ ನಗರದಲ್ಲಿ ಬಿಜೆಪಿ ಅಭ್ಯರ್ಥಿ ಶಶಿಧರ ಪರವಾಗಿ ಬಿಜೆಪಿ ಮುಖಂಡ ಎ.ಎಚ್‌.ಬಸವರಾಜು, ತಾಲ್ಲೂಕು ಬಿಜೆಪಿ ಅಧ್ಯಕ್ಷ ರಂಗಧಾಮಯ್ಯ ಹಾಗೂ ಕಾರ್ಯಕರ್ತರು ಬಿರುಸಿನ ಪ್ರಚಾರ ನಡೆಸಿದರು.

ಕೊಟ್ಟಣಬೀದಿಯಲ್ಲಿ ಬಿಜೆಪಿ ಅಭ್ಯರ್ಥಿ ರಮೇಶ್‌ ಪರವಾಗಿ ಬಿಜೆಪಿ ಮುಖಂಡರು ಮನೆಮನೆಗೆ ತೆರಳಿ ಮತಯಾಚಿಸಿದರು.

ಹೊಸಪೇಟೆಯಲ್ಲಿ ಸಂಜೆ 8ನೇ ವಾರ್ಡ್‌ನ ಅಭ್ಯರ್ಥಿ ಕವಿತಾ ಪರುಶುರಾಮ್‌ ಮತ್ತು 9ನೇ ವಾರ್ಡ್‌ನ ಅಭ್ಯರ್ಥಿ ಭಾಗ್ಯಮ್ಮನಾರಾಯಣ್‌, 1ನೇ ವಾರ್ಡ್‌ನ ಅಭ್ಯರ್ಥಿ ವನಜಾಕ್ಷಿಸಿದ್ದರಾಜು ಪರವಾಗಿ ಮನೆಮನೆಗೆ ತೆರಳಿ ಮತಯಾಚಿಸಿದರು.

ಕಾಂಗ್ರೆಸ್‌ ಮುಖಂಡ ಎಚ್‌.ಸಿ.ಬಾಲಕೃಷ್ಣ 1 ನೇ ವಾರ್ಡ್‌ನ ಅಭ್ಯರ್ಥಿ ಚೈತ್ರ .ಕೆ.ಎಸ್‌. ಮತ್ತು ವಾರ್ಡ್‌ 2ರಲ್ಲಿ ಅಭ್ಯರ್ಥಿ ಎಚ್‌.ಜೆ.ಪುರುಷೋತ್ತಮ್‌ ಪರವಾಗಿ ಮತಯಾಚಿಸಿದರು. ಕಾಂಗ್ರೆಸ್‌ ಮುಖಂಡರು ಇದ್ದರು.

2ನೇ ವಾರ್ಡ್‌ನ ಜೆಡಿಎಸ್‌ ಅಭ್ಯರ್ಥಿ ಭೈರಪ್ಪ ಪರವಾಗಿ ಶಾಸಕ ಎ.ಮಂಜುನಾಥ, ಜೆಡಿಎಸ್‌ ಪ್ರಧಾನ ಕಾರ್ಯದರ್ಶಿ ಕೆ.ಕೃಷ್ಣಮೂರ್ತಿ, ಮುಖಂಡ ರಂಗೇಗೌಡ ತಂಡದವರು ಕೋಟಪ್ಪನ ಪಾಳ್ಯ ಇತರೆಡೆಗಳಲ್ಲಿ ಮತ ಯಾಚಿಸಿದರು.

ಪ್ರತಿಕ್ರಿಯಿಸಿ (+)