ಕನಕಪುರ: ಕೇರಳದ ಶಬರಿಮಲೆ ಅಯ್ಯಪ್ಪ ಸ್ವಾಮಿ ದರ್ಶನಕ್ಕೆ ತೆರಳಿದ್ದ ಪಟ್ಟಣದ ಹೆಂಚಿನ ಫ್ಯಾಕ್ಟರಿ ಹಿಂಭಾಗದ ಮದ್ದೂರಮ್ಮ ಬೀದಿಯ ಕುಮಾರ್ (39) ಅವರು ದೇಗುಲದ ಬಳಿಯ ಮೇಲ್ಸೇತುವೆಯಿಂದ ಜಿಗಿದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಕೊಟ್ಟಾಯಂನಲ್ಲಿ ನಡೆದಿದೆ.

ಅವರಿಗೆ ಪತ್ನಿ ಹಾಗೂ ಇಬ್ಬರು ಮಕ್ಕಳಿದ್ದಾರೆ. ಘಟನೆಯ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು, ಕೇರಳದ ಮಾಧ್ಯಮದಲ್ಲಿ ದೊಡ್ಡ ಸುದ್ದಿಯಾಗಿದೆ.

ಕಟ್ಟಡ ನಿರ್ಮಾಣ ಕೆಲಸ ಮಾಡುತ್ತಿದ್ದ ಕುಮಾರ್ ಅವರು ಡಿ.14ರಂದು ಸ್ನೇಹಿತರಾದ ಸುಬ್ರಮಣ್ಯ, ಕೃಷ್ಣ ಹಾಗೂ ಕಿರಣ್ ಅವರೊಂದಿಗೆ, ಪಟ್ಟಣದ ಅಂಬೇಡ್ಕರ್ ನಗರದಲ್ಲಿರುವ ರಾಘವೇಂದ್ರ ಸ್ವಾಮಿ ದೇವಸ್ಥಾನದಲ್ಲಿ ಇರುಮುಡಿ ಕಟ್ಟಿಕೊಂಡು ವಾಹನದಲ್ಲಿ ಅಯ್ಯಪ್ಪನ ದರ್ಶನಕ್ಕೆ ಶಬರಿಮಲೆಗೆ ಹೊರಟ್ಟಿದ್ದರು.

ದೇವರ ದರ್ಶನಕ್ಕೆ ಹೋಗಿದ್ದ ಕುಮಾರ್ ಅವರು ಡಿ.16ರಂದು ಸಂಜೆ ಶಬರಿಮಲೆಗೆ ಹೋಗುವ ಮಾರ್ಗದಲ್ಲಿರುವ ಮೇಲ್ಸೇತುವೆಯಿಂದ ಜಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಗಂಭೀರವಾಗಿ ಗಾಯಗೊಂಡಿದ್ದ ಅವರನ್ನು ಸಮೀಪದ ಆಸ್ಪತ್ರೆಗೆ ಕರೆದೊಯ್ಯುವಾಗ ಮಾರ್ಗಮಧ್ಯೆ ಕೊನೆಯುಸಿರೆಳೆದಿದ್ದಾರೆ. ಕುಮಾರ್ ಅವರ ಬಳಿ ಇದ್ದ ಆಧಾರ್ ಕಾರ್ಡ್ನಲ್ಲಿ ವಿಳಾಸ ಆಧರಿಸಿ ಕೇರಳದ ಪೊಲೀಸರು ನಮಗೆ ಮಾಹಿತಿ ನೀಡಿದರು ಎಂದು ಕನಕಪುರ ನಗರ ಠಾಣೆ ಪೊಲೀಸರು ತಿಳಿಸಿದರು.

ಕುಮಾರ್ ಅವರ ಕುಟುಂಬದವರನ್ನು ಪತ್ತೆಹಚ್ಚಿ ಸಾವಿನ ವಿಷಯವನ್ನು ಗಮನಕ್ಕೆ ತಂದಿದ್ದೇವೆ. ಕೇರಳಕ್ಕೆ ಹೋಗಿ ಸಂಬಂಧಪಟ್ಟ ಪೊಲೀಸ್ ಠಾಣೆಗೆ ದೂರು ಕೊಟ್ಟು, ಮರಣೋತ್ತರ ಪರೀಕ್ಷೆ ಬಳಿಕ ಶವವನ್ನು ತರುವಂತೆ ತಿಳಿಸಿದ್ದೇವೆ. ಕುಟುಂಬದವರು ಬರುವವರೆಗೆ ಅಲ್ಲಿಯೇ ಇದ್ದು ಸಹಕರಿಸುವಂತೆ ಕುಮಾರ್ ಜೊತೆಗೆ ಹೋಗಿದ್ದವರಿಗೂ ಸೂಚಿಸಿದ್ದೇವೆ ಎಂದು ಹೇಳಿದರು.

ಕುಮಾರ್ ಅವರ ಜೊತೆಗಿದ್ದ ಸ್ನೇಹಿತರೇ ಮರಣೋತ್ತರ ಪರೀಕ್ಷೆ ಸೇರಿದಂತೆ ಇತರ ಪ್ರಕ್ರಿಯೆಗಳನ್ನು ಪೂರ್ಣಗೊಳಿಸಿ, ಶವವನ್ನು ಆಂಬುಲೆನ್ಸ್ನಲ್ಲಿ ಕೇರಳದಿಂದ ಕನಕಪುರಕ್ಕೆ ತರುತ್ತಿದ್ದಾರೆ. ಬುಧವಾರ ಬೆಳಿಗ್ಗೆ ಕನಕಪುರ ತಲುಪಲಿದ್ದಾರೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ಸಾವಿನ ಬಗ್ಗೆ ಅನುಮಾನ: ಕುಮಾರ್ ಅವರ ಸಾವಿನ ಕುರಿತು ಪತ್ನಿ ಮಹಾಲಕ್ಷ್ಮಿ ಅನುಮಾನ ವ್ಯಕ್ತಪಡಿಸಿದ್ದಾರೆ. ಈ ಕುರಿತು ಮಾಧ್ಯಮದವರಿಗೆ ಪ್ರತಿಕ್ರಿಯಿಸಿರುವ ಅವರು, ‘ಡಿ. 16ರಂದು ಮಧ್ಯಾಹ್ನ 1 ಗಂಟೆಗೆ ಕರೆ ಮಾಡಿದ್ದ ಪತಿ, ದೇವರ ದರ್ಶನಕ್ಕಾಗಿ ಬೆಟ್ಟ ಏರುತ್ತಿದ್ದೇನೆ ಎಂದು ಹೇಳಿದ್ದರು. ಮಾರನೇಯ ದಿನ ಪೊಲೀಸರು ಸಾವಿನ ವಿಷಯ ತಿಳಿಸಿದರು. ಪತಿ ಆತ್ಮಹತ್ಯೆ ಮಾಡಿಕೊಂಡಿರುವ ಬಗ್ಗೆ ನನಗೆ ಅನುಮಾನವಿದೆ. ಎಂದೂ ಶಬರಿಮಲೆಗೆ ಹೋಗದವರು ಈ ಸಲ ಯಾಕೆ ಹೋದರು? ಅವರು ತೀರಿಕೊಂಡ ಬಳಿಕ, ಜೊತೆಯಲ್ಲಿ ಯಾರೂ ಇಲ್ಲವಂತೆ. ಈ ಕುರಿತು ನಾನು ಪೊಲೀಸರಿಗೆ ದೂರು ಕೊಡುವೆ. ಸಾವಿನ ಕುರಿತು ತನಿಖೆಯಾಗಬೇಕು’ ಎಂದು ಒತ್ತಾಯಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.