ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಡದಿಗೆ ಕಾವೇರಿ ನೀರು ಪೂರೈಕೆ: ಪಟ್ಟಣದ ಜನರಿಗೆ ಶಾಸಕ ಎ. ಮಂಜುನಾಥ್‌ ಭರವಸೆ

Last Updated 20 ಜೂನ್ 2021, 4:55 IST
ಅಕ್ಷರ ಗಾತ್ರ

ಬಿಡದಿ: ‘ಮಂಚನಬೆಲೆ ಜಲಾಶಯಕ್ಕೆ ಕಾವೇರಿ ನೀರು ಹರಿಸುವ ಕಾರ್ಯ ಪ್ರಗತಿಯಲ್ಲಿದೆ. ಅಲ್ಲಿಂದ ಪೈಪ್‌ಲೈನ್ ಮೂಲಕ ಬಿಡದಿಗೆ ಕಾವೇರಿ ನೀರು ತರುವುದು ನಿಶ್ಚಿತ’ ಎಂದು ಶಾಸಕ ಎ. ಮಂಜುನಾಥ್ ಭರವಸೆ ನೀಡಿದರು.ಪುರಸಭೆ ಆಡಳಿತದಐದುವರ್ಷದ ಅಧಿಕಾರಪೂರ್ಣಗೊಂಡ ಹಿನ್ನೆಲೆಯಲ್ಲಿ ಅಧ್ಯಕ್ಷ, ಉಪಾಧ್ಯಕ್ಷರು ಹಾಗೂ ಸದಸ್ಯರಿಗೆ ಶುಕ್ರವಾರ ಹಮ್ಮಿಕೊಂಡಿದ್ದ ಬೀಳ್ಕೊಡುಗೆ ಸಮಾರಂಭದಲ್ಲಿ ಅವರು ಮಾತನಾಡಿದರು.

ಮಂಚನಬೆಲೆ ಕುಡಿಯುವ ನೀರು ಯೋಜನೆಯ ಜೊತೆಗೆ ಒಳಚರಂಡಿ ಕಾಮಗಾರಿ ಟೆಂಡರ್ ಪ್ರಕ್ರಿಯೆ ಪೂರ್ಣಗೊಂಡಿದೆ.ಏಕಕಾಲದಲ್ಲಿ ಕುಡಿಯುವ ನೀರಿನ ಕಾಮಗಾರಿನೆರವೇರಿಸಲಾಗುವುದು.ವಿದ್ಯುತ್ ತಯಾರಿಕಾ ಘಟಕದಿಂದ ಕಸ ವಿಲೇವಾರಿ ಸಮಸ್ಯೆ ಬಗೆಹರಿಯಲಿದೆ. ಖಾಸಗಿ ಕಂಪನಿಗಳ ನಿಧಿಯಡಿ ಎಲ್ಲಾ 23 ವಾರ್ಡ್‌ಗಳ ವ್ಯಾಪ್ತಿಯಲ್ಲಿ ಎಲ್‌ಇಡಿ ಬೀದಿ ದೀಪಗಳ ಅಳವಡಿಕೆಗೆ ನಿರ್ದೇಶಿಸಲಾಗಿದೆ ಎಂದು ತಿಳಿಸಿದರು.

ವಿಧಾನ ಪರಿಷತ್‌ಸದಸ್ಯ ಸಿ.ಎಂ. ಲಿಂಗಪ್ಪಮಾತನಾಡಿ, ಕಳೆದ ಐದು ವರ್ಷಗಳ ಅವಧಿಯಲ್ಲಿ ವಾರ್ಡ್‌ಗಳ ಅಭಿವೃದ್ಧಿ ವಿಚಾರದಲ್ಲಿ ಸದಸ್ಯರು ಪರಸ್ಪರ ಕಿತ್ತಾಡಿದ್ದರು. ಅಂತಿಮ ಹಂತದಲ್ಲಿ ಒಗ್ಗೂಡಿ ಕೆಲಸ ನಿರ್ವಹಿಸಿರುವುದು ಶ್ಲಾಘನೀಯ ಎಂದರು.

ಅಧಿಕಾರಾವಧಿಯಲ್ಲಿ ಉತ್ತಮವಾಗಿ ಕಾರ್ಯ ನಿರ್ವಹಣೆ ಮಾಡಿದ್ದೀರಿ. ಇನ್ನು ಜನಸೇವೆ ಮಾಡಬೇಕೆಂದು ಇಚ್ಛೆಇದ್ದವರು ಮುಂದಿನ ಚುನಾವಣೆಯಲ್ಲಿ ಗೆದ್ದು ಬಂದು ಇನ್ನಷ್ಟು ಸೇವೆಗೆ ಅರ್ಪಿಸಿಕೊಳ್ಳಿ ಎಂದು ಶುಭ ಹಾರೈಸಿದರು.

ಪುರಸಭೆ ಸದಸ್ಯ ರಮೇಶ್ ಮಾತನಾಡಿ, ಮಾಜಿ ಶಾಸಕ ಎಚ್.ಸಿ. ಬಾಲಕೃಷ್ಣ ಅವರ ಕೃಪೆಯಿಂದ ಪ್ರಥಮ ಪುರಸಭೆ ಸದಸ್ಯರಾಗಿ ನಂತರ ಸ್ಥಾಯಿಸಮಿತಿ ಅಧ್ಯಕ್ಷರಾಗಿ ಸೇವೆ ಸಲ್ಲಿಸಲು ಸಾಧ್ಯವಾಯಿತು. ಪುರಸಭೆ ವ್ಯಾಪ್ತಿಯಲ್ಲಿ ಕೋಟ್ಯಂತರ ರೂಪಾಯಿ ಮೊತ್ತದಕಾಮಗಾರಿನಡೆದಿವೆ. 3 ಬಡಾವಣೆಗಳನ್ನು ಸಂಪರ್ಕಿಸುವ ಜೋಡಿ ರಸ್ತೆ ನಿರ್ಮಾಣ ನಡೆದಿದೆ.ವಾಣಿಜ್ಯ ಕಟ್ಟಡದ ಕ್ರಿಯಾಯೋಜನೆ ರೂಪಿಸಿ ಲೋಕಾರ್ಪಣೆಗೊಂಡ ಕಟ್ಟಡದಲ್ಲಿ ನಿಂತು ಮಾತನಾಡುವ ಅವಕಾಶ ಸಿಕ್ಕಿರುವುದು ನನ್ನ ಭಾಗ್ಯ ಎಂದು ಭಾವುಕರಾದರು.

ಪುರಸಭೆ ಅಧ್ಯಕ್ಷೆ ಸರಸ್ವತಿ ರಮೇಶ್ ಮಾತನಾಡಿ, ತಮ್ಮ ಅಧಿಕಾರವನ್ನು ಯಶಸ್ವಿಯಾಗಿ ಪೂರೈಸಲು ಸಹಕರಿಸಿದ ಎಲ್ಲಾ ಅಧಿಕಾರಿಗಳು, ಕಚೇರಿ ಸಿಬ್ಬಂದಿಗೆ ಕೃತಜ್ಞತೆಸಲ್ಲಿಸಿದರು.

ಸಭೆಯಲ್ಲಿಉಪಾಧ್ಯಕ್ಷಬಿ.ಎಂ. ರಮೇಶ್ ಕುಮಾರ್, ಮಹಿಪತಿ, ಕುಮಾರ್, ಬೋರೇಗೌಡ, ಟಿ. ಕುಮಾರ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT