ಕುದೂರು: ಕುದೂರು ವ್ಯಾಪ್ತಿಯಲ್ಲಿ ಒಂದೇ ರಾತ್ರಿ 11 ರೈತರ ಬೋರ್ಬೆಲ್ ಕೇಬಲ್ ವೈರ್ ಕಳ್ಳತನ ಮಾಡಲಾಗಿದ್ದು, ಈ ಬಗ್ಗೆ ಕುದುರು ಪೊಲೀಸ್ ಠಾಣೆಯಲ್ಲಿ ದೂರು ನೀಡಲಾಗಿದೆ. ರೈತರು ಸಾಲ ಮಾಡಿ ಬೆಳೆಗೆ ನೀರು ಹಾಯಿಸಲು ಬೋರ್ವೆಲ್ ಕೊರೆಸಿ ಬೆಳೆ ಬೆಳೆಯುತ್ತಿದ್ದರೆ ಇತ್ತ ಕಳ್ಳರ ಕಾಟ ಹೆಚ್ಚಾಗಿದೆ.

ರಾತ್ರಿ ಸಮಯದಲ್ಲಿ ಕಳ್ಳರು ಏಕಾಏಕಿ ಬಂದು ಬೋರ್ವೆಲ್ಗೆ ಹಾಕಿದ ಕೇಬಲ್ ವೈರನ್ನು ಕಳ್ಳತನ ಮಾಡುತ್ತಿದ್ದಾರೆ. ಮಂಗಳವಾರ ರಾತ್ರಿ ಕುದೂರು ಹೋಬಳಿ ಬೆಟ್ಟಹಳ್ಳಿ ಪಾಳ್ಯದಲ್ಲಿ ರೈತ ಮರಿಸ್ವಾಮಿ, ಮಂಜುನಾಥ್, ರಾಮಾಂಜನೇಯ, ಶ್ರೀನಿವಾಸ್, ರವಿಕುಮಾರ್, ರಾಮಣ್ಣ, ಸುನಂದಮ್ಮ, ರಾಜಣ್ಣ, ರಂಗಪ್ಪ, ಧನಂಜಯ, ಮಂಜುನಾಥ, ಚನ್ನಗಿರಿಯಪ್ಪ ಇವರ ಜಮೀನಿನಲ್ಲಿ ಕೇಬಲ್ ಕಳ್ಳತನವಾಗಿದೆ.

ಕುದೂರು ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.