ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನೀರಿನ ಘಟಕಕ್ಕೆ ಭೂಮಿಪೂಜೆ

Last Updated 24 ಜೂನ್ 2019, 13:19 IST
ಅಕ್ಷರ ಗಾತ್ರ

ಮಾಗಡಿ: ಪಟ್ಟಣದ ಜ್ಯೋತಿ ನಗರದಲ್ಲಿ ರೋಟರಿ ಸೆಂಟ್ರಲ್‌ ವತಿಯಿಂದ ₹ 30ಲಕ್ಷ ವೆಚ್ಚದಲ್ಲಿ ಶುದ್ಧ ನೀರು ಘಟಕ ಸ್ಥಾಪಿಸಲಾಗುವುದು ಎಂದು ಪುರಸಭೆ ಸದಸ್ಯ ಎಂ.ಎನ್‌.ಮಂಜುನಾಥ ಹೇಳಿದರು.

ಸೋಮವಾರ ನೀರು ಶುದ್ಧೀಕರಣ ಘಟಕದ ಕಟ್ಟಡಕ್ಕೆ ಇಲ್ಲಿನ ವಾಟರ್‌ ಟ್ಯಾಂಕ್‌ ಬಳಿ ಭೂಮಿಪೂಜೆ ನಡೆಸಿ ಅವರು ಮಾತನಾಡಿದರು.

ಸಾರ್ವಜನಿಕರು ಕೊಳಾಯಿಯಲ್ಲಿ ಬರುವ ನೀರನ್ನು ಪೋಲು ಮಾಡಬಾರದು ಎಂದರು.

ಮಾಗಡಿ ರೋಟರಿ ಸೆಂಟ್ರಲ್‌ ಅಧ್ಯಕ್ಷ ಡಿ.ಕುಮಾರ್‌ ಮಾತನಾಡಿ, ‘ಘಟಕ ನಿರ್ಮಾಣಕ್ಕೆ ನಾವೂ ₹ 5 ಲಕ್ಷವನ್ನು ಆರಂಭಿಕ ಹಂತದಲ್ಲಿ ಖರ್ಚು ಮಾಡುತ್ತಿದ್ದೇವೆ. ರೋಟರಿ ಇಂಟರ್‌ ನ್ಯಾಷನಲ್ ಮತ್ತು ಟಾಟಾ ಕಂಪನಿಯವರ ಸಹಯೋಗದಲ್ಲಿ ಗುಣಮಟ್ಟದ ಶುದ್ಧ ನೀರು ಘಟಕದ ನಿರ್ಮಿಸಲು ಕಾರ್ಯಾರಂಭಿಸಿದ್ದೇವೆ’ ಎಂದರು.

ರೋಟರಿ ಸಂಸ್ಥೆಯ ಕಾರ್ಯದರ್ಶಿ ಚೈತನ್ಯ ಲ್ಯಾಬ್‌ ಲೋಕೇಶ್‌, ರೊಟೇರಿಯನ್‌ಗಳಾದ ಡಿ.ಎನ್‌.ಸಿದ್ದಲಿಂಗಯ್ಯ, ಆರ್‌.ನಾಗೇಶ್‌, ಶಂಕರ್‌, ದಕ್ಷಿಣ ಮೂರ್ತಿ, ಮುನಿಯಪ್ಪ, ನಾಗರಾಜು.ಜಿ.ಸಿ, ಪ್ರಭಾಕರ್‌, ವೇಣುಗೋಪಾಲ್‌, ದಯಾನಂದ್‌ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT