ಗುರುವಾರ , ನವೆಂಬರ್ 21, 2019
21 °C

ಚಿರತೆ ದಾಳಿ– ರೈತ ಸಾವು

Published:
Updated:

ಕುದೂರು (ಮಾಗಡಿ): ತೋಟಕ್ಕೆ ಹೋಗಿದ್ದ ರೈತರೊಬ್ಬರ ಮೇಲೆ ಚಿರತೆ ದಾಳಿ ಮಾಡಿ ಕೊಂದು ಹಾಕಿರುವ ಘಟನೆ ಮೂರು ದಿನಗಳ ಹಿಂದೆ ಬೆಟ್ಟಹಳ್ಳಿ ದಲಿತ ಕಾಲೊನಿ ಬಳಿ ನಡೆದಿದೆ.

ಮೃತಪಟ್ಟವರನ್ನು ಕೆಂಚಯ್ಯ (55) ಎಂದು ಗುರುತಿಸಲಾಗಿದೆ. ಮೃತ ಶರೀರವನ್ನು ಕಾಡುಮೃಗಗಳು ತಿಂದು ಹಾಕಿದ್ದು ಎಡಗಾಲು ಮಾತ್ರ ಉಳಿದಿದೆ. ಸೊಂಟದ ಭಾಗದ ಮೂಳೆಯ ಮೇಲೆ ಹುಳುಗಳು ಬಿದ್ದಿದ್ದು ದುರ್ವಾಸನೆ ಬರುತ್ತಿತ್ತು. ಸೋಮವಾರ ತೋಟಕ್ಕೆ ಹೋದವರು ದುರ್ವಾಸನೆ ಬಂದ ಕಡೆ ಗಮನಿಸಿದಾಗ ಚಿರತೆ ದಾಳಿಯಿಂದ ಮೃತಪಟ್ಟಿರುವ ಬಗ್ಗೆ ತಿಳಿಯಿತು ಎಂದು ಕಾಲೊನಿ ನಿವಾಸಿಗಳು ತಿಳಿಸಿದರು. ಕುದೂರು ಪೊಲೀಸರು ಸ್ಥಳಕ್ಕೆ ಧಾವಿಸಿದ್ದರು.

ಪ್ರತಿಕ್ರಿಯಿಸಿ (+)