ಮಾಗಡಿ: ತಾಲ್ಲೂಕಿನ ಸೋಲೂರು ಹೋಬಳಿ ಪಾಲನಹಳ್ಳಿ ಮಠದಲ್ಲಿ ಫೆ.15 ಮತ್ತು 16ರಂದು ಶನೇಶ್ವರಸ್ವಾಮಿ ಜಾತ್ರಾ ಮಹೋತ್ಸವ ಮತ್ತು ಶಿವರಾತ್ರಿ ಮಹೋತ್ಸವ ಅದ್ದೂರಿಯಾಗಿ ನಡೆಯಲಿದೆ ಎಂದು ಸಂಸ್ಥಾಪಕ ಮಠಾಧ್ಯಕ್ಷ ಡಾ.ಸಿದ್ದರಾಜುಸ್ವಾಮಿ ಹೇಳಿದರು.

ಮಠದ ಆವರಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಫೆ.15ರಂದು ನಡೆಯುವ ಜಾತ್ರಾ ಮಹೋತ್ಸವ ಅಂಗವಾಗಿ ಧಾರ್ಮಿಕ ಕಾರ್ಯಕ್ರಮ ಆಯೋಜಿಸಲಾಗಿದೆ. ಫೆ.16ರಂದು ಬೆಳಗ್ಗೆ 10ಕ್ಕೆ ಉಚಿತ ಸಾಮೂಹಿಕ ವಿವಾಹ, ರಾತ್ರಿ 9.30ಕ್ಕೆ ಗಂಗೆ–ಗೌರಿ ಪೌರಾಣಿಕ ನಾಟಕ ಏರ್ಪಡಿಸಲಾಗಿದೆ.

ವಿಶೇಷವಾಗಿ ಈ ವರ್ಷ ರುದ್ರಯಾಗ ಮತ್ತು ಶನೇಶ್ವರಯಾಗ ನಡೆಸಲಾಗುತ್ತಿದೆ. ಶ್ರೀಮಾತಂಗ ದೇವಿ ವಿಗ್ರಹ ನಿರ್ಮಾಣಕ್ಕೆ ಶಂಕುಸ್ಥಾಪನೆ, 450 ಶಾಲಾ ಮಕ್ಕಳಿಗೆ ಬಟ್ಟೆ, ನೋಟ್ಬುಕ್ ವಿತರಣೆ, ವಿವಿಧ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿದ ಸಾಧಕರಿಗೆ ಆದಿ ಜಾಂಬವ ರತ್ನ ಪ್ರಶಸ್ತಿ, ವಿಶ್ವ ಅರುಂಧತಿ ಪ್ರಶಸ್ತಿ, ಮಾತಂಗ ಪ್ರಶಸ್ತಿ ಮತ್ತು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರಿಗೆ ‘ಶಿವ ಗಂಗೋತ್ರಿ’ ಪ್ರಶಸ್ತಿ ಪ್ರದಾನ ಮಾಡಲಾಗುವುದು.

ಮಹೋತ್ಸವದಲ್ಲಿ ದಾಸೋಹ ವ್ಯವಸ್ಥೆ ಮಾಡಲಾಗಿದೆ. ಧಾರ್ಮಿಕ ಸಭೆಯಲ್ಲಿ ಸಚಿವರಾದ ಡಾ.ಜಿ.ಪರಮೇಶ್ವರ, ಕೆ.ಎಚ್ ಮುನಿಯಪ್ಪ, ಸತೀಶ್ ಜಾರಕಿಹೊಳಿ, ಆರ್.ವಿ.ತಿಮ್ಮಾಪುರ, ಸಂಸದ ಕೆ.ಸುದಾಕರ್, ಡಾ.ಸಿ.ಎನ್ ಮಂಜುನಾಥ್, ಶಾಸಕರಾದ ಎನ್.ಶ್ರೀನಿವಾಸ್, ಎಚ್.ಸಿ ಬಾಲಕೃಷ್ಣ, ಧಾರ್ಮಿಕ ಗುರುಗಳು, ಸಾಧು ಸಂತರು ಭಾಗವಹಿಸಲಿದ್ದಾರೆ.

ಪಾಲನಹಳ್ಳಿ ಮಠದ ಕೆ.ಪವನ್ಕುಮಾರ್, ಬೆಳಗುಂಬ ವಿಶ್ವನಾಥ್, ಮಂಜುನಾಥ್, ರಾಮಸ್ವಾಮಿ, ಪ್ರಕಾಶ್, ನಾಗರಾಜು, ಪಿ,ಎಸ್ ಮಂಜುನಾಥ್, ಉದಯ್, ಶಶಿಕುಮಾರ್ ಸೇರಿದಂತೆ ಇತರರು ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.