ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಹಿಷಾ ದಸರಾ ಆಚರಣೆ ನಾಳೆ

Last Updated 24 ಅಕ್ಟೋಬರ್ 2020, 12:26 IST
ಅಕ್ಷರ ಗಾತ್ರ

ರಾಮನಗರ: ಜಿಲ್ಲಾ ಯುವ ದಲಿತ ಪರ ಸಂಘಟನೆಗಳ ವತಿಯಿಂದ ಇದೇ 26ರಂದು ಮಹಿಷಾ ದಸರಾ ಆಯೋಜನೆ ಮಾಡಲಾಗುತ್ತದೆ ಎಂದು ದಲಿತಪರ ಸಂಘಟನೆಗಳ ಜಿಲ್ಲಾ ಅಧ್ಯಕ್ಷ ಶಿವಕುಮಾರ ಸ್ವಾಮಿ ತಿಳಿಸಿದರು.

ಸಿದ್ದಾರ್ಥ ನಗರದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು "12ಕ್ಕೂಹೆಚ್ಚು ದಲಿತ ಸಂಘಟನೆಗಳ ಸಹಯೋಗದಲ್ಲಿ ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗುತ್ತಿದೆ. ಕಳೆದ 8 ವರ್ಷದಿಂದ ಈ ಕಾರ್ಯಕ್ರಮವನ್ನು ಅದ್ದೂರಿಯಾಗಿ ಹಮ್ಮಿಕೊಳ್ಳಲಾಗಿತ್ತು. ಆದರೆ ಈ ವರ್ಷ ಕೋವಿಡ್‌ ಹಿನ್ನೆಲೆಯಲ್ಲಿ ಸಂಘಟನೆಗಳ ಪ್ರಮುಖರನ್ನು ಮಾತ್ರ ಆಹ್ವಾನಿಸಲಾಗಿದೆ" ಎಂದು ಹೇಳಿದರು.

"ದೇಶದ ಬಹುಜನ ಮಹಾರಾಜರುಗಳಲ್ಲಿ ಮಹಿಷಾಸುರಾ ಕೂಡ ಒಬ್ಬರು. ತಿರುಚಿದ ಇತಿಹಾಸದಿಂದಾಗಿ ಇಂದು ಮಹಿಷನನ್ನು ರಾಕ್ಷಸನೆಂದು ತಪ್ಪಾಗಿ ಬಿಂಬಿಸಲಾಗುತ್ತಿದೆ. ನಮ್ಮ ಬಹುಜನರ ಪೂರ್ವಿಕರಲ್ಲಿ ಮಹಿಷಾ ಕೂಡ ಒಬ್ಬರಾಗಿದ್ದು, ಇವರ ಗುಣವನ್ನು ಜನತೆಗೆ ತಿಳಿಸುವ ಕೆಲಸ ಮಾಡಲಾಗುವುದು ಎಂದರು.

ಭೀಮಯಾನ ಟ್ರಸ್ಟ್‌ ಅಧ್ಯಕ್ಷ ಹರೀಶ್ ಬಾಲು ಮಾತನಾಡಿ, ರಾಮನಗರದ ವಾಟರ್‌ ಟ್ಯಾಂಕ್‌ ವೃತ್ತದಲ್ಲಿ ಅಂದು 25 ಅಡಿಯ ಮಹಿಷಾಸುರನ ಪ್ರತಿಮೆ ನಿಲ್ಲಿಸಲಾಗುವುದು. ಕ್ಯಾಂಡಲ್ ಹೊತ್ತಿಸಿ, ಸ್ಮರಣೆಮಾಡಲಾಗುತ್ತದೆ. ಗೀತಗಾಯನ ಮೊದಲಾದ ಕಾರ್ಯಕ್ರಮಗಳು ನಡೆಯಲಿವೆ ಎಂದರು.

ವಿವಿಧ ಸಂಘಟನೆಯ ಮುಖಂಡರಾದ ನರೇಶ್, ಆಸೀಫ್, ವೆಂಕಟೇಶ್, ಹರೀಶ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT