ಕನಕಪುರ: ಬರಡನಹಳ್ಳಿ ಮಾರಮ್ಮ ದೇವಿ ಅಗ್ನಿಕೊಂಡೋತ್ಸವ ಮತ್ತು ಜಾತ್ರಾ ಮಹೋತ್ಸವ ಬುಧವಾರ ಧಾರ್ಮಿಕ ಪೂಜಾ ಕಾರ್ಯಕ್ರಮಗಳೊಂದಿಗೆ ವಿಜೃಂಭಣೆಯಿಂದ ನೆರವೇರಿತು.

ಮಂಗಳವಾರ ರಾತ್ರಿ ಮಾರಮ್ಮ ದೇವಿ ಅಗ್ನಿಕೊಂಡೋತ್ಸವದ ಯಳವಾರ ಕಾರ್ಯಕ್ರಮ ನೆರವೇರಿತು. ಬುಧವಾರ ಮುಂಜಾನೆ ನಾಲ್ಕು ಗಂಟೆ ವೇಳೆಗೆ ಕೊಂಡದಲ್ಲಿ ಸೌದೆ ಹಾಕಿ ಅಗ್ನಿಸ್ಪರ್ಶಿಸಿ ಪೂಜೆ ನೆರವೇರಿಸಲಾಯಿತು.

ಬೆಳಿಗ್ಗೆ 9ಕ್ಕೆ ಚಿಕ್ಕಹೊಳೆಯಲ್ಲಿ ಗಂಗಾ ಪೂಜೆ ನೆರವೇರಿಸಿ, ಮಂಗಳ ವಾದ್ಯಗೋಷ್ಠಿಯೊಂದಿಗೆ ದೇವರನ್ನು ಮೆರವಣಿಗೆಯಲ್ಲಿ ಕರೆತರಲಾಯಿತು. ಮೆರವಣಿಗೆಯಲ್ಲಿ ಬಂದಂತಹ ಸ್ವಾಮಿಗೆ ಮನೆಗಳ ಮುಂದೆ ಮಡಲಕ್ಕಿ ಕಟ್ಟಿ ಪೂಜೆ ನೆರವೇರಿಸಲಾಯಿತು.

9.30ಕ್ಕೆ ಅರ್ಚಕ ವೀರಭದ್ರ ಮಾರಮ್ಮ ದೇವಿ ಕರಗ ಹೊತ್ತು ಯಶಸ್ವಿಯಾಗಿ ಕೊಂಡ ಆಯ್ದರು. ಮಹಿಳೆಯರು, ಹೆಣ್ಣು ಮಕ್ಕಳು ಬಗೆ ಬಗೆಯ ಹೂಗಳಿಂದ ಶೃಂಗರಿಸಿದ್ದ ತಂಬಿಟ್ಟಿನ ಆರತಿಯೊಂದಿಗೆ ಮೆರವಣಿಗೆಯಲ್ಲಿ ಪಾಲ್ಗೊಂಡು ಎಲ್ಲರ ಗಮನ ಸೆಳೆದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.