ಚನ್ನಪಟ್ಟಣ: ತಾಲ್ಲೂಕಿನ ಮತ್ತೀಕೆರೆ ಗ್ರಾಮದ ಮಾರಮ್ಮ ದೇವಸ್ಥಾನದ ಶತಮಾನೋತ್ಸವ ಮತ್ತು ಕೊಂಡೋತ್ಸವ ಕಾರ್ಯಕ್ರಮ ಮೇ 13ರಿಂದ ಆರಂಭವಾಗಲಿದೆ.

ಗ್ರಾಮದಲ್ಲಿ 1925ರಲ್ಲಿ ನಿರ್ಮಾಣಗೊಂಡ ಮಾರಮ್ಮ ದೇಗುಲದ ಶತಮಾನೋತ್ಸವ ಕಾರ್ಯಕ್ರಮದ ಪ್ರಯುಕ್ತ ಒಂಬತ್ತು ವರ್ಷಗಳ ನಂತರ ಕೊಂಡೋತ್ಸವವನ್ನು ಆಯೋಜಿಸಲಾಗಿದೆ. ಮೇ 11ರಿಂದಲೇ ಧಾರ್ಮಿಕ ಕಾರ್ಯಕ್ರಮಗಳು ಪ್ರಾರಂಭಗೊಂಡಿವೆ.

ಮೇ 11 ರಂದು ಶಾಂತಿ ಹೋಮ ನೆರವೇರಿತು. 12ರಂದು ರೇವಣಸಿದ್ದೇಶ್ವರ ಬೆಟ್ಟದಲ್ಲಿ ಸಂಪ್ರದಾಯದಂತೆ ಪೂಜೆ ನೆರವೇರಿಸಿ ದೇವರನ್ನು ತರಲಾಯಿತು. ಮೇ 13ರಂದು ರಾತ್ರಿ 8ಕ್ಕೆ ಕೊಂಡಕ್ಕೆ ಪೂಜೆ ಸಲ್ಲಿಸಿ, ಅಗ್ನಿ ಸ್ಪರ್ಶಿಸಲಾಗುವುದು. 14ರಂದು ಮುಂಜಾನೆ ತಂಬಿಟ್ಟಿನ ಆರತಿ, ದೇವರ ಮೆರವಣಿಗೆ ನಡೆಯಲಿದೆ. ಮುಂಜಾನೆ 6ಕ್ಕೆ ಕೊಂಡೋತ್ಸವ ನಡೆಯಲಿದೆ. ಸಂಜೆ 4ಕ್ಕೆ ಮಾರಮ್ಮ, ದೊಡ್ಡಬೀರೇಶ್ವರ, ಹೊನ್ನಪ್ಪ ಸ್ವಾಮಿ ಮೆರವಣಿಗೆ ನಡೆಯಲಿದೆ ಎಂದು ಉತ್ಸವ ಸಮಿತಿ ಪ್ರಕಟಣೆ ತಿಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.