ಶನಿವಾರ, ಫೆಬ್ರವರಿ 29, 2020
19 °C

ಉಚಿತ, ಸಾಮೂಹಿಕ ವಿವಾಹ ಆಯೋಜನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮಾಗಡಿ: ‘ಇಲ್ಲಿನ ಸಾವನದುರ್ಗ ಗಿರಿಧಾಮದಲ್ಲಿ ಕರ್ನಾಟಕ ಸರ್ಕಾರದ ಹಿಂದೂ ಧಾರ್ಮಿಕ ದತ್ತಿ ಮತ್ತು ಧರ್ಮಾದಾಯ ದತ್ತಿಗಳ ಇಲಾಖೆ ಸಹಯೋಗದಲ್ಲಿ ಉಚಿತ ಸಾಮೂಹಿಕ ವಿವಾಹವನ್ನು ಮೇ 24ರಂದು ನಡೆಸಲು ಆಯೋಜಿಸಲಾಗಿದೆ’ ಎಂದು ವಿಧಾನ ಪರಿಷತ್‌ ಸದಸ್ಯ ಎಚ್‌.ಎಂ.ರೇವಣ್ಣ ತಿಳಿಸಿದ್ದಾರೆ.

‘ಸಾಮೂಹಿಕ ವಿವಾಹದಲ್ಲಿ ಭಾಗವಹಿಸುವ ವಧು, ವರರಿಗೆ ಒಟ್ಟು ₹55 ಸಾವಿರ ಉಡುಗೊರೆಯನ್ನು ವಸ್ತ್ರ, ಮಾಂಗಲ್ಯದ ರೂಪದಲ್ಲಿ ನೀಡಲಾಗುವುದು. ಹೆಸರು ನೋಂದ‌ಣಿಗೆ ಏ. 24 ಕಡೆಯ ದಿನ. ಏ. 29ರಂದು ದೇವಾಲಯದ ನೋಟಿಸ್‌ ಬೋರ್ಡ್‌ನಲ್ಲಿ ವಿವಾಹವಾಗಲಿರುವವರ ಹೆಸರು ಪ್ರಕಟಿಸಲಾಗುವುದು. ತಿದ್ದುಪಡಿಗಳು ಇದ್ದಲ್ಲಿ ಮೇ 4ರೊಳಗೆ ಲಿಖಿತ ರೂಪದಲ್ಲಿ ಸಲ್ಲಿಸಬೇಕು. ಅಂತಿಮ ವಧೂ, ವರರ ಪಟ್ಟಿಯನ್ನು ಮೇ 9ರೊಳಗೆ ಪ್ರಕಟಿಸಲಾಗುವುದು’ ಎಂದು ಹೇಳಿದರು.

‘ವಿವಾಹದ ನಂತರ ಅವರ ಬ್ಯಾಂಕ್ ಖಾತೆಗೆ ₹55 ಸಾವಿರ ಮೊತ್ತವನ್ನು ಜಮೆ ಮಾಡಲಾಗುವುದು. ಹೆಸರು ನೋಂದಣಿಗೆ ದೂರವಾಣಿ ಸಂಖ್ಯೆ 94480 17596 ಅನ್ನು ಸಂಪರ್ಕಿಸಬಹುದು’ ಎಂದು ತಿಳಿಸಿದ್ದಾರೆ.

ಸಮಾಜ ಸೇವಕ ಎಂ.ಸಿ.ರಾಜಣ್ಣ, ವಿವಾಹ ವೇದಿಕೆ ಅಧ್ಯಕ್ಷ ನಾಗರಾಜು, ರಘು, ಜಿ.ಸೋಮಶೇಖರ್‌, ಎನ್‌.ಕಿರಣ್‌ ಕುಮಾರ್‌ ಇದ್ದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು