ಭಾನುವಾರ, 13 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಕನ್ನಡಿಗರಿಗೆ ಶೇ 70 ಉದ್ಯೋಗವಕಾಶ ನೀಡಬೇಕು: ಹೆಚ್.ಸಿ.ಬಾಲಕೃಷ್ಣ

Published : 1 ಅಕ್ಟೋಬರ್ 2024, 14:01 IST
Last Updated : 1 ಅಕ್ಟೋಬರ್ 2024, 14:01 IST
ಫಾಲೋ ಮಾಡಿ
Comments

ಮಾಗಡಿ: ಜಿಲ್ಲೆಯ ಕೈಗಾರಿಕಾ ಪ್ರದೇಶಗಳಲ್ಲಿ ಕನ್ನಡ ಮಾಧ್ಯಮದಲ್ಲಿ ಓದಿರುವ ಸ್ಥಳೀಯರಿಗೆ ಶೇ 70 ರಷ್ಟು ಉದ್ಯೋಗಾವಕಾಶ ನೀಡುವಂತೆ ಮನವಿ ಮಾಡಲಾಗುವುದು ಎಂದು ಮಾಗಡಿ ಶಾಸಕ ಎಚ್‌.ಸಿ ಬಾಲಕೃಷ್ಣ ತಿಳಿಸಿದರು.

ಮಾಗಡಿಯ ಸರ್ಕಾರಿ ಪ್ರಥಮ ದರ್ಜೆ ಪದವಿ ಕಾಲೇಜಿನಲ್ಲಿ ಕನ್ನಡ ಅಭಿವೃದ್ಧಿ ಪ್ರಾಧಿಕಾರ ಮತ್ತು ಸಮೃದ್ಧಿ ಗ್ರಾಮೀಣಾಭಿವೃದ್ಧಿ ಸಂಸ್ಥೆ ಸಹಯೋಗದಲ್ಲಿ ಆಯೋಜಿಸಿದ್ದ ಭಾಷಾಬಾಂದವ್ಯ ಮತ್ತು ಸವಾಲುಗಳು ಎಂಬ ಕಾರ್ಯಗಾರಕ್ಕೆ ಚಾಲನೆ ನೀಡಿ ಮಾತನಾಡಿದರು. ತಾಲ್ಲೂಕಿನಲ್ಲಿ ಕನ್ನಡ ಭಾಷೆ ಅಭಿವೃದ್ಧಿಗೆ ಒತ್ತು ನೀಡಲಾಗುವುದು.  ಕನ್ನಡ ಶಾಲೆಗಳನ್ನು ಉಳಿಸುವ ಪ್ರಯತ್ನ ಮಾಡಲಾಗುವುದು. ಪಟ್ಟಣ ಮತ್ತು ಕುದೂರು ಹೋಬಳಿಯಲ್ಲಿ ಸ್ಪರ್ಧಾ ತರಬೇತಿ ನೀಡಲು ಯೋಜನೆ ರೂಪಿಸಲಾಗುತ್ತಿದೆ ಎಂದು ತಿಳಿಸಿದರು.

ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿ ಡಾ.ಸಂತೋಷ್ ಹಾನಗಾಲ್‌ ಮಾತನಾಡಿ, ಕನ್ನಡ ಭಾಷೆ ಮತ್ತು ಬೆಳವಣಿಗೆ ಕುರಿತಾಗಿ ವಿವಿಧ ತಾಲೂಕುಗಳಲ್ಲಿ ಕಾರ್ಯಗಾರವನ್ನು ಆಯೋಜಿಸುವ ಮೂಲಕ ಕನ್ನಡ ಭಾಷೆ ಉಳಿವಿಗೆ ಮತ್ತು ಅಭಿವೃದ್ಧಿಗೆ ತಾಲ್ಲೂಕು ಮಟ್ಟದಲ್ಲಿ ಅಗತ್ಯ ಕ್ರಮ ಕೈಗೊಳ್ಳಲಾಗುತ್ತಿದೆ. ಪ್ರತಿಯೊಬ್ಬರೂ ಕನ್ನಡ ಭಾಷೆಗೆ ಆದ್ಯತೆ ನೀಡುವ ಮೂಲಕ ಕನ್ನಡ ಉಳಿಸಲು ಮುಂದಾಗಬೇಕು ಎಂದು ಮನವಿ ಮಾಡಿದರು.

ಶಿಕ್ಷಣ ತಜ್ಞ ವಿ.ಪಿ ನಿರಂಜನಾರಾಧ್ಯ ಮಾತನಾಡಿ, ರಾಮನಗರ ಜಿಲ್ಲೆಯಲ್ಲಿ ಕಳೆದ ವರ್ಷ 200ಕ್ಕೂ ಹೆಚ್ಚು ಕನ್ನಡ ಶಾಲೆಗಳನ್ನು ಮುಚ್ಚಲಾಗಿದೆ. 30 ರ ದಾಖಲಾತಿಗಿಂತಲೂ ಕಡಿಮೆ ಮಕ್ಕಳಿರುವ 600 ಶಾಲೆಗಳ ಸ್ಥಿತಿ ಚಿಂತಾಜನಕವಾಗಿದೆ. ಜಿಲ್ಲಾಡಳಿತ ಮತ್ತು ಸರ್ಕಾರ ಈ ಶಾಲೆಗಳನ್ನು ಉಳಿಸಬೇಕು ಎಂದರು.

ಪ್ರಸ್ತುತ ಭಾಷೆಗಳ ಅನುಕರಣೆ ಮತ್ತು ಅನುಸಂಧಾನತೆ ವಿಚಾರವನ್ನು ಉಪನ್ಯಾಸಕ ಡಾ.ನವೀನ್‌ ಹಳೆಮನೆ ಮಂಡಿಸಿದರು. ಭಾಷಾ ಬಿಕ್ಕಟ್ಟು ಮತ್ತು ಅದರ ಸವಾಲುಗಳು ಎಂಬ ವಿಚಾರವನ್ನು ಕಸಾಪ ಅಧ್ಯಕ್ಷ ತಿ.ನಾ ಪದ್ಮನಾಭ ಮಂಡಿಸಿದರು. ಸಾಹಿತಿ ಭೈರಮಂಗಲ ರಾಮೇಗೌಡ ಸರ್ಕಾರ ಭಾಷೆ ಅಭಿವೃದ್ಧಿಗೆ ಸದನದಲ್ಲಿ ಕೈಗೊಳ್ಳಬೇಕಾದ ನಿರ್ಣಯಗಳ ಬಗ್ಗೆ ಮಾತನಾಡಿದರು.

ಕಾರ್ಯಕ್ರಮದಲ್ಲಿ ತಹಶೀಲ್ದಾರ್ ಶರತ್‌ ಕುಮಾರ್‌, ಕಾಲೇಜು ಪ್ರಾಂಶುಪಾಲ ರಾಜಣ್ಣ, ಸಂಸ್ಕೃತ ವಿವಿ ಸಿಂಡಿಕೇಟ್‌ ಸದಸ್ಯ ಡಾ. ನಂಜುಂಡಯ್ಯ, ಡಾ.ಡಿ.ಸಿ ರಾಮಚಂದ್ರ, ಸಾಹಿತಿ ಕೋಡಿಪಾಳ್ಯ ಕೃಷ್ಣಪ್ಪ, ಮಾಜಿ ಕಸಾಪ ಅಧ್ಯಕ್ಷ ಎಂ.ಆರ್‌ ರಾಮಸ್ವಾಮಿ, ಉಪನ್ಯಾಸಕರಾದ ನವೀನ್‌, ದಲಿತ ಮುಖಂಡರಾದ ಕಲ್ಕರೆ ಶಿವಣ್ಣ, ದೊಡ್ಡಯ್ಯ ಸೇರಿದಂತೆ ಕಾಲೇಜು ವಿದ್ಯಾರ್ಥಿಗಳು ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT