ಕನಕಪುರ: ಇಲ್ಲಿನ ನವಗ್ರಹ ರಸ್ತೆಯಲ್ಲಿ ಒಡೆದಿದ್ದ ಕುಡಿಯುವ ನೀರಿನ ಪೈಪ್ ಅನ್ನು ನಗರಸಭೆ ಸಿಬ್ಬಂದಿ ಬುಧವಾರ ಸರಿಪಡಿಸಿದ್ದಾರೆ.
ಕೆಎನ್‌ಎಸ್ ವೃತ್ತದಿಂದ ಎಂಎಚ್‌ಎಸ್ ಮೈದಾನಕ್ಕೆ ಹೋಗುವ ನವಗ್ರಹ ರಸ್ತೆಯಲ್ಲಿ ನೀರಿನ ಪೈಪ್ ಒಡೆದು ನಾಲ್ಕು ದಿನಗಳಿಂದ ಕುಡಿಯುವ ನೀರಿನ ವ್ಯರ್ಥವಾಗಿ ರಸ್ತೆಯಲ್ಲಿ ಹರಿಯುತ್ತಿತ್ತು. ರಸ್ತೆಯ ನಿವಾಸಿಗಳು ನೀರಿನ ಪೈಪ್ ಒಡೆದಿರುವ ಬಗ್ಗೆ ರಸ್ತೆಯ ನಿವಾಸಿಗಳು ನಗರಸಭೆ ಅಧಿಕಾರಿಗಳ ಗಮನಕ್ಕೆ ತಂದಿದ್ದರೂ ಏನೂ ಪ್ರಯೋಜನವಾಗಿರಲಿಲ್ಲ.
ಈ ಕುರಿತು ಸೆ. 27ರಂದು ‘ಒಡೆದ ಪೈಪ್: ನೀರು ಪೋಲು’ ಶೀರ್ಷಿಕೆಯಡಿ ಪ್ರಜಾವಾಣಿ ವರದಿ ಪ್ರಕಟಿಸಿತ್ತು.
ವರದಿ ಪ್ರಕಟವಾದ ಬಳಿಕ ಎಚ್ಚೆತ್ತುಗೊಂಡ ನಗರಸಭೆ ಅಧಿಕಾರಿಗಳು, ಸ್ಥಳಕ್ಕೆ ಆಗಮಿಸಿ ಪರಿಶೀಲಿಸಿದರು. ರಸ್ತೆಯ ಕಾಂಕ್ರೀಟ್ ಕತ್ತರಿಸಿ ಅದರಡಿಯಲ್ಲಿ ಒಡೆದಿದ್ದ ನೀರಿನ ಪೈಪ್ ಅನ್ನು ನಗರಸಭೆ ಸಿಬ್ಬಂದಿ ಸರಿಪಡಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.