ಭಾನುವಾರ, ನವೆಂಬರ್ 29, 2020
21 °C

ರಾಮನಗರ: ಪೌರಾಯುಕ್ತರಾಗಿ ನಂದಕುಮಾರ್ ನೇಮಕ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ರಾಮನಗರ: ಇಲ್ಲಿನ ನಗರಸಭೆ ಆಯುಕ್ತರನ್ನಾಗಿ ಬಿ. ನಂದಕುಮಾರ್‍ ಅವರನ್ನು ನೇಮಿಸಿ ಶುಕ್ರವಾರ ಸರ್ಕಾರ ಆದೇಶ ಹೊರಡಿಸಿದೆ.

ನಂದಕುಮಾರ್‌ ಸಾರಿಗೆ ಇಲಾಖೆಯಲ್ಲಿ ಶಾಖಾಧಿಕಾರಿ ಆಗಿದ್ದು, ಅವರನ್ನು ಮಾತೃ ಇಲಾಖೆಯಿಂದ ಪೌರಾಯುಕ್ತ ಹುದ್ದೆಗೆ ನಿಯೋಜನೆ ಮಾಡಲಾಗಿದೆ. ಈ ಹಿಂದೆ ಇಲ್ಲಿ ಪೌರಾಯುಕ್ತೆ ಆಗಿದ್ದ ಬಿ. ಶುಭಾ ಅವರನ್ನು ಸರ್ಕಾರ ವರ್ಗಾವಣೆ ಮಾಡಿದ್ದು, ಅಲ್ಲಿಂದ ಕೆಲವು ದಿನಗಳ ಕಾಲ ಈ ಹುದ್ದೆ ಭರ್ತಿ ಆಗಿರಲಿಲ್ಲ. ನಗರಸಭೆಯಲ್ಲಿ ಜನಪ್ರತಿನಿಧಿಗಳ ಆಡಳಿತಾವಧಿ ಮುಗಿದು ಎರಡು ವರ್ಷವೇ ಕಳೆದಿದೆ. ಇತ್ತ ಪೂರ್ಣಾವಧಿ ಪೌರಾಯುಕ್ತರು ಇಲ್ಲದೇ ಆಡಳಿತಕ್ಕೆ ಹಿನ್ನೆಡೆಯಾಗಿತ್ತು. ಈ ಹೊತ್ತಿನಲ್ಲೇ ಸರ್ಕಾರ ಹೊಸ ಆಯುಕ್ತರನ್ನು ನೇಮಿಸಿದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.