ಮಾಗಡಿ | ಪ್ರಾಣ ಉಳಿಸಲಿದೆಯೇ ಈ ಮೇಲ್ಸುತುವೆ?: ಸಾರ್ವಜನಿಕರಲ್ಲಿ ಹೀಗೊಂದು ಚರ್ಚೆ
ಸುಧೀಂದ್ರ ಸಿ.ಕೆ.
Published : 19 ಜನವರಿ 2026, 5:05 IST
Last Updated : 19 ಜನವರಿ 2026, 5:05 IST
ಫಾಲೋ ಮಾಡಿ
Comments
ಜಾನ್ಸನ್ ಬಳಿ ಸರ್ವೆಸ್ ರಸ್ತೆ ಕಾಮಗಾರಿ ನಡೆಯುತ್ತಿರುವುದು
ರಾಷ್ಟ್ರೀಯ ಹೆದ್ದಾರಿ 75 ಬೆಂಗಳೂರು-ಮಂಗಳೂರು ಮುಖ್ಯರಸ್ತೆ ಜಾನ್ಸನ್ ಸರ್ಕಲ್
ಬಸ್ ನಿಲ್ದಾಣ ಶೌಚಾಲಯ ನಿರ್ಮಿಸಿ
ತಾಳೆಕೆರೆ ಹ್ಯಾಂಡ್ ಪೋಸ್ಟ್ ಬಳಿ ಸರ್ವಿಸ್ ರಸ್ತೆ ಮತ್ತು ಮೇಲ್ಸುತುವೆ ನಿರ್ಮಾಣದಿಂದ ಅನುಕೂಲವಾಗಲಿದೆ. ಸರ್ವಿಸ್ ರಸ್ತೆಯಲ್ಲಿ ಬೀದಿ ದೀಪಗ ಅಳವಡಿಸಬೇಕು. ಅಲ್ಲದೆ ತಾಳೆಕೆರೆ ಹ್ಯಾಂಡ್ ಪೋಸ್ಟ್‌ನಿಂದ ಮಾಗಡಿ ಮತ್ತು ಇತರ ಕಡೆಗೆ ಹೋಗಲು ಸೂಕ್ತ ಸ್ಥಳದಲ್ಲಿ ಬಸ್ ನಿಲ್ದಾಣ ಮತ್ತು ಶೌಚಾಲಯ ನಿರ್ಮಿಸಿ ಪ್ರಯಾಣಿಕರ ಅನುಕೂಲ ಮಾಡಿಕೊಡಬೇಕು ಎಂದು ರೈತ ಸಂಘದ ತಾಲ್ಲೂಕು ಘಟಕದ ಅಧ್ಯಕ್ಷ ಗೋವಿಂದರಾಜು ಅಭಿಪ್ರಾಯಪಟ್ಟಿದ್ದಾರೆ.
ವಾಹನ ಚಾಲಕರಿಗೆ ಅನುಕೂಲ
ಸರ್ವಿಸ್ ರಸ್ತೆ ಮತ್ತು ಮೇಲ್ಸುತುವೆ ಕಾರ್ಯವನ್ನು ವಿಳಂಬವಿಲ್ಲದೆ ವೇಗವಾಗಿ ಪೂರ್ಣಗೊಳಿಸಿದರೆ ವಾಹನ ಚಾಲಕರಿಗೆ ಹೆಚ್ಚಿನ ಅನುಕೂಲವಾಗಲಿದೆ. ಇಲ್ಲದಿದ್ದರೆ ವಾಹನ ದಟ್ಟಣೆಯಿಂದ ಸ್ಥಳೀಯರು ಮತ್ತು ವಾಹನ ಚಾಲಕರಿಗೆ ತೊಂದರೆಯಾಗಬಹುದು. ಮೇಲ್ಸುತುವೆ ನಿರ್ಮಾಣ ಬಹಳ ಉಪಯುಕ್ತವಾಗಿದೆ ಮತ್ತು ಅಪಘಾತಗಳು ಕಡಿಮೆಯಾಗುವ ನಿರೀಕ್ಷೆಯಿದೆ. ಕಾರ್ಯವನ್ನು ಶೀಘ್ರ ಪೂರ್ಣಗೊಳಿಸಬೇಕು ಎಂದು ಜಿ.ಪಂ ಮಾಜಿ ಸದಸ್ಯ ಎಂ.ಕೆ. ಧನಂಜಯ ಒತ್ತಾಯಿಸಿದ್ದಾರೆ.