ಭಾನುವಾರ, 28 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಾಗಡಿ: ತಿರುಮಲೆಯಲ್ಲಿ ಎನ್‌ಎಸ್ಎಸ್‌ ಶಿಬಿರ

Published 9 ಫೆಬ್ರುವರಿ 2024, 13:03 IST
Last Updated 9 ಫೆಬ್ರುವರಿ 2024, 13:03 IST
ಅಕ್ಷರ ಗಾತ್ರ

ಮಾಗಡಿ: ಪಟ್ಟಣದ ತಿರುಮಲೆಯಲ್ಲಿ ನಡೆಯುತ್ತಿರುವ ಬೆಂಗಳೂರಿನ ಸರ್ಕಾರಿ ಕಲಾ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆ ಶಿಬಿರದಲ್ಲಿ ಶುಕ್ರವಾರ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಅರ್ಥಶಾಸ್ತ್ರ ಉಪನ್ಯಾಸಕ ಬೆಟ್ಟಸ್ವಾಮಿ ಮಾನವ ಸಂಪನ್ಮೂಲ ಅಭಿವೃದ್ಧಿ ಕುರಿತು ಉಪನ್ಯಾಸ ನೀಡಿದರು.

ವಿದ್ಯಾರ್ಥಿಗಳ ಮನಸ್ಸಿನಲ್ಲಿ ಅಡಗಿರುವ ಪ್ರತಿಭೆ ಹೊರತರುವುದೇ ನಿಜವಾದ ಶಿಕ್ಷಣ. ಬುದ್ಧ, ಬಸವಣ್ಣ, ಸ್ವಾಮಿ ವಿವೇಕಾನಂದ, ಗಾಂಧೀಜಿ ಮತ್ತು ಅಂಬೇಡ್ಕರ್‌, ಸಾವಿತ್ರಿಬಾಯಿ ಫುಲೆ ವಿಚಾರ ವಿದ್ಯಾರ್ಥಿಗಳಲ್ಲಿ ಬಿತ್ತಿ ಬೆಳೆಸುವುದು ಇಂದಿನ ತುರ್ತು ಅಗತ್ಯ ಎಂದರು.

ದೇಶದಲ್ಲಿ 135 ಕೋಟಿ ಜನಸಂಖ್ಯೆ ಇದ್ದರೂ ಸಹ ಮಾನವ ಸಂಪನ್ಮೂಲ ಅಭಿವೃದ್ಧಿ ಕುಂಠಿತವಾಗಿದೆ. ಯುವ ಜನರಿಗೆ ಅರ್ಥಶಾಸ್ತ್ರದ ಮೂಲ ಪರಿಕಲ್ಪನೆ ಅರ್ಥ ಮಾಡಿಸುವಲ್ಲಿ ವಿಫಲರಾಗಿದ್ದೇವೆ ಎಂದರು.

ಸಿನಿಮಾ ನಟರು ಮತ್ತು ಕ್ರೀಡಾಪಟುಗಳು ಮಾದರಿ ನಾಯಕರಾಗಲು ಸಾಧ್ಯವಿಲ್ಲ. ಯುವ ಮನಸ್ಸುಗಳ ನಡುವೆ ಭಿನ್ನತೆ ಬೇಲಿ ಕಟ್ಟಿ ದೇಶವನ್ನು ಪ್ರಗತಿಪಥದಲ್ಲಿ ಮುನ್ನಡೆಸಲಾಗದು. ಮನಸ್ಸು ಕಟ್ಟುವ ಕೆಲಸವಾಗಬೇಕು ಎಂದರು.

ಸರ್ಕಾರಿ ಕಲಾ ಕಾಲೇಜಿನ ಸಂಶೋಧನಾ ವಿದ್ಯಾರ್ಥಿ ಶ್ರೀನಿವಾಸ್, ವಿದ್ಯಾರ್ಥಿಗಳ ಮನೋವಿಕಾಸದ ಮೊದಲ ಹೆಜ್ಜೆ ಎನ್ಎಸ್ಎಸ್ ಶಿಬಿರ. ಪ್ರತಿಭೆ ಒಂದು ಜಾತಿ, ಧರ್ಮದ ಸ್ವತ್ತಲ್ಲ ಎಂದರು.

ಸಂಶೋಧನಾ ವಿದ್ಯಾರ್ಥಿ ಶಿವರಾಜ್ ಮಾತನಾಡಿ, ಫಲಾಪೇಕ್ಷೆ ಇಲ್ಲದೆ ಸೇವೆ ಮಾಡಿ, ಸೌಹಾರ್ದತೆಯಿಂದ ಬಾಳಲು ಸಿದ್ಧರಾಗಬೇಕು ಎಂದರು.

ಪುರಸಭೆ ಮಾಜಿ ಅಧ್ಯಕ್ಷೆ ಕಲ್ಪನಾಶಿವಣ್ಣ ಮಾನಾಡಿದರು.

ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಪ್ರೊ.ರಾಜಣ್ಣ ಡಿ.ಅಧ್ಯಕ್ಷತೆ ವಹಿಸಿ ಮಾತನಾಡಿ, ಸೂಕ್ತ ಸಮಯದಲ್ಲಿ ಸೂಕ್ತವಾದದ್ದನ್ನು ಓದಿ ಗುರಿ ಮುಟ್ಟಲು ಪ್ರಯತ್ನಿಸಿ ಎಂದು ಕಿವಿಮಾತು ಹೇಳಿದರು.

ಎನ್.ಎಸ್.ಎಸ್.ಶಿಬಿರಾಧಿಕಾರಿಗಳಾದ ಡಾ.ನಂಜುಂಡ.ಪಿ, ಡಾ.ಚಲುವರಾಜು, ಕಲಾವಿದೆ ಸೌಮ್ಯ, ಎಸ್ ಎನ್.ಎಸ್.ಎಸ್ ಶಿಬಿರದ ಮಹತ್ವ ಕುರಿತು ಮಾತನಾಡಿದರು.

ಮಾಗಡಿಯಲ್ಲಿ ನಡೆಯುತ್ತಿರುವ ಎನ್‌ಎಸ್‌ಎಸ್‌ ಶಿಬಿರದಲ್ಲಿ ಭಾಗವಹಿಸಿರುವ ಶಿಬಿರಾರರ್ಥಿಗಳೊಂದಿಗೆ ಪ್ರಾಂಶುಪಾಲ ಪ್ರೊ.ರಾಜಣ್ಣ.ಡಿ ಶಿಬಿರಾಧಿಕಾರಿಗಳಾದ ಡಾ.ನಂಜುಂಡ.ಪಿ ಡಾ.ಚೆಲುವರಾಜು ಇತರರು ಇದ್ದರು.
ಮಾಗಡಿಯಲ್ಲಿ ನಡೆಯುತ್ತಿರುವ ಎನ್‌ಎಸ್‌ಎಸ್‌ ಶಿಬಿರದಲ್ಲಿ ಭಾಗವಹಿಸಿರುವ ಶಿಬಿರಾರರ್ಥಿಗಳೊಂದಿಗೆ ಪ್ರಾಂಶುಪಾಲ ಪ್ರೊ.ರಾಜಣ್ಣ.ಡಿ ಶಿಬಿರಾಧಿಕಾರಿಗಳಾದ ಡಾ.ನಂಜುಂಡ.ಪಿ ಡಾ.ಚೆಲುವರಾಜು ಇತರರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT