ಗುರುವಾರ , ಡಿಸೆಂಬರ್ 5, 2019
22 °C

ಸಾಲುಮರ ರಕ್ಷಿಸಲು ಮನವಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕುದೂರು(ಮಾಗಡಿ): ಹುಲಿಕಲ್‌ ರಸ್ತೆ ಬದಿ ಸಾಲುಮರದ ತಿಮ್ಮಕ್ಕ ಬೆಳೆಸಿರುವ ಆಲದ ಮರದ ಬುಡಕ್ಕೆ ಬೆಂಕಿ ಹಚ್ಚಿರುವವರ ವಿರುದ್ಧ ಕಠಿಣ ಕ್ರಮ ಕೈಗೊಂಡು ಸಾಲುಮರಗಳಿಗೆ ರಕ್ಷಣೆ ನೀಡಬೇಕು ಎಂದು ಸ್ವಾಮಿ ವಿವೇಕಾನಂದ ಕಲಾವಿದರ ಸಂಘದ ಅಧ್ಯಕ್ಷ ಎಚ್‌.ರಾಜಶೇಖರ್‌ ಒತ್ತಾಯಿಸಿದರು.

‘ಕುದೂರು–ಹುಲಿಕಲ್‌ ಮಧ್ಯೆ ರಸ್ತೆ ಬದಿ ಬೆಳೆದಿರುವ ಆಲದ ಮರಗಳ ಬುಡಕ್ಕೆ ಕಬ್ಬಿನ ಹಾಲು ಮಾರುವ ವ್ಯಕ್ತಿಯೊಬ್ಬ ಕಬ್ಬಿನ ಸಿಪ್ಪೆಯನ್ನು ಮರದ ಬುಡಕ್ಕೆ ಹಾಕಿ ಬೆಂಕಿ ಹಚ್ಚಿದ್ದಾನೆ’ ಎಂದು ಆರೋಪಿಸಿದರು. ‘ಮರಗಳ ರಕ್ಷಣೆಗೆ ಅರಣ್ಯ ಇಲಾಖೆಯ ಅಧಿಕಾರಿಗಳು ಸೂಕ್ತ ಕ್ರಮ ಕೈಗೊಳ್ಳಬೇಕು’ ಎಂದು ಆಗ್ರಹಿಸಿದರು.

ಪ್ರತಿಕ್ರಿಯಿಸಿ (+)