ಭಾನುವಾರ, 19 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಮನಗರ | ವಿವಿಧೆಡೆ ಸಾಧಾರಣ ಮಳೆ

Published 7 ಮೇ 2024, 6:55 IST
Last Updated 7 ಮೇ 2024, 6:55 IST
ಅಕ್ಷರ ಗಾತ್ರ

ರಾಮನಗರ/ಮಾಗಡಿ: ಜಿಲ್ಲೆಯ ರಾಮನಗರ ಮತ್ತು ಮಾಗಡಿ ತಾಲ್ಲೂಕಿನ ವಿವಿಧೆಡೆ ಸೋಮವಾರ ಸಂಜೆ ಭಾರೀ ಗಾಳಿ ಹಾಗೂ ಗುಡುಗು ಸಹಿತ ಸಾಧಾರಣೆ ಮಳೆಯಾಗಿದೆ. ಪಾದರಹಳ್ಳಿ, ಲಕ್ಷ್ಮಿಪುರ, ವೀರೇಗೌಡನದೊಡ್ಡಿ, ಗೊಲ್ಲರದೊಡ್ಡಿ, ಗೌಡರದೊಡ್ಡಿ ಹಾಗೂ ಮಾಗಡಿ ತಾಲ್ಲೂಕಿನ ವಿವಿಧ ಹಳ್ಳಿಗಳಲ್ಲಿ ಸುಮಾರು ಮುಕ್ಕಾಲು ತಾಸು ಮಳೆ ಸುರಿದಿದೆ.

ಸಂಜೆ 6 ಗಂಟೆಯಿಂದಲೇ ಮೋಡ ಕವಿದ ವಾತಾವರಣದ ಜೊತೆಗೆ ಜೋರಾಗಿ ಗಾಳಿ ಬೀಸತೊಡಗಿತು. ಸಣ್ಣದಾಗಿ ಹನಿಗಳೊಂದಿಗೆ ಶುರುವಾದ ಮಳೆ ರಾತ್ರಿ 7ರ ಹೊತ್ತಿಗೆ ಸಾಧಾರಣವಾಗಿ ಸುಮಾರು 40 ನಿಮಿಷ ಸುರಿಯಿತು. ಬಿಸಿಲ ಬೇಗೆಗೆ ಬಳಲಿದ್ದ ಭೂಮಿಗೆ ಮಳೆಯು ತಂಪನ್ನೆರೆಯಿತು. ಮಳೆ ಇಲ್ಲದೆ ಕಂಗಾಲಾಗಿದ್ದ ರೈತರು ವರುಣನ ಕೃಪೆಗೆ ಸಂತಸಪಟ್ಟರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT