ರಾಮನಗರ: ನಗರದ ಚಾಮುಂಡೇಶ್ವರಿ ದೇವಿ ಕರಗ ಮಹೋತ್ಸವ ಮಂಗಳವಾರ ವಿಜೃಂಭಣೆಯಿಂದ ನೆರವೇರಿತು. ಕರಗದ ಹಿನ್ನೆಲೆಯಲ್ಲಿ ಇಡೀ ನಗರವನ್ನು ಬಣ್ಣಬಣ್ಣದ ವಿದ್ಯುದ್ದೀಪಗಳಿಂದ ಅಲಂಕರಿಸಲಾಗಿದ್ದು, ಇಡೀ ನಗರ ಸಿಂಗಾರಗೊಂಡು ಕಂಗೊಳಿಸುತ್ತಿದೆ. ಕಣ್ಣು ಹಾಯಿಸದತ್ತೆಲ್ಲಾ ಉತ್ಸವದ ಸೊಬಗು ಎದ್ದು ಕಂಡಿತು.

ಕರಗ ಮಹೋತ್ಸವ ಪ್ರಯುಕ್ತ ಚಾಮುಂಡೇಶ್ವರಿ ದೇವಾಲಯ ಸೇರಿದಂತೆ ಇತರ ಏಳು ಶಕ್ತಿ ದೇವತೆಗಳ ಹೂವಿನ ಕರಗಕ್ಕೆ ಬೆಳಿಗ್ಗೆ ಪೂಜಾ ಕೈಂಕರ್ಯ ನೆರವೇರಿತು. ನಗರ ಪ್ರದಕ್ಷಿಣೆ ಹಾಕಿದ ಕರಗವು ದೇವಾಲಯಗಳಲ್ಲಿ ಪೂಜೆ ಸ್ವೀಕರಿಸಿತು. ತಮ್ಮ ಬೀದಿಗೆ ಬಂದ ಕರಗಗಳನ್ನು ಜನರು ರಸ್ತೆಗೆ ರಂಗೋಲಿ ಹಾಕಿ ಸಿಂಗರಿಸಿ ಸ್ವಾಗತ ಕೋರಿದರು. ಪೂಜೆ ಸಲ್ಲಿಸಿ ಇಷ್ಟಾರ್ಥ ಸಿದ್ಧಿಗೆ ಬೇಡಿಕೊಂಡರು.

ಚಾಮುಂಡೇಶ್ವರಿ ಕರಗದ ಜೊತೆಗೆ ದ್ಯಾವರಸೇಗೌಡನದೊಡ್ಡಿಯ ಚಾಮುಂಡೇಶ್ವರಿ ದೇವತೆ, ಕೊಂಕಾಣಿದೊಡ್ಡಿಯ ಆದಿಶಕ್ತಿ, ಗಾಂಧಿನಗರ ಆದಿಶಕ್ತಿ, ಶೆಟ್ಟಿಹಳ್ಳಿ ಬೀದಿ ಆದಿಶಕ್ತಿ, ತೋಪಖಾನ್ ಮೊಹಲ್ಲಾದ ಮುತ್ತುಮಾರಮ್ಮ, ಬಾಲಗೇರಿಯ ಬಿಸಿಲು ಮಾರಮ್ಮ, ಮಗ್ಗದಕೇರಿ ಮಾರಮ್ಮ, ಭಂಡಾರಮ್ಮ, ಐಜೂರು ಆದಿಶಕ್ತಿಪುರದ ಆದಿಶಕ್ತಿ ಅಮ್ಮನವರ ಕರಗ ಸಹ ಅದ್ಧೂರಿಯಾಗಿ ಜರುಗಿತು. ಡೊಳ್ಳು, ತಮಟೆ, ನಗಾರಿಯ ಶಬ್ಧಕ್ಕೆ ಕರಗ ಹೊತ್ತ ಅರ್ಚಕರು ಹಾಗೂ ಭಕ್ತರು ಮಾಡಿದ ನೃತ್ಯ ಗಮನ ಸೆಳೆಯಿತು.

ಬೆಳಿಗ್ಗೆ ಬ್ರಾಹ್ಮಿ ಮೂಹೂರ್ತದಲ್ಲಿ ದೇವಿಗೆ ವಿಶೇಷ ಅಭಿಷೇಕ ಮಾಡಿ, ಮಡಿನೀರು ಕರಗ ನೆರವೇರಿಸಲಯಿತು. ಮಧ್ಯಾಹ್ನದವರೆಗೆ ವಿವಿಧ ಧಾರ್ಮಿಕ ಕೈಂಕರ್ಯಗಳು ಜರುಗಿದ ಬಳಿಕ ಕೊಂಡಕ್ಕೆ ಅಗ್ನಿಸ್ಪರ್ಶ ಮಾಡಲಾಯಿತು. ರಾತ್ರಿ ದೇವಿಯ ಹೂವಿನ ಕರಗ ನಗರದಾದ್ಯಂತ ಸಂಚರಿಸಿ, ಭಕ್ತರಿಂದ ಪೂಜೆ ಸ್ವೀಕರಿತು. ಬುಧವಾರ ಬೆಳಿಗ್ಗೆ ದೇವಾಲಯದ ಆವರಣದಲ್ಲಿ ನಿರ್ಮಿಸಿರುವ ಕೊಂಡ ಹಾಯುವುದರೊಂದಿಗೆ ಕರಗವು ಮುಗಿಯಲಿದೆ.

ಕರಗದ ಹಿನ್ನೆಲೆಯಲ್ಲಿ ಮಧ್ಯಾಹ್ನ ಬಾಡೂಟ ಜೋರಾಗಿತ್ತು. ಜನರು ತಮ್ಮ ಬಂಧು–ಬಳಗದವರನ್ನು ಔತಣಕ್ಕೆ ಆಹ್ವಾನಿಸಿ, ಬಾಡೂಟ ಸವಿದರು. ಕರಗ ಹಿನ್ನೆಲೆಯಲ್ಲಿ ನಗರದಲ್ಲಿ ಸೋಮವಾರದಿಂದ ಬುಧವಾರ ರಾತ್ರಿ 12ರವರೆಗೆ ಮದ್ಯ ಮಾರಾಟವನ್ನು ಜಿಲ್ಲಾಡಳಿತ ನಿಷೇಧಿಸಿದೆ. ನಗರದಾದ್ಯಂತ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿತ್ತು.

ವೇದಿಕೆ ಕಾರ್ಯಕ್ರಮದಲ್ಲಿ ಮಾಜಿ ಶಾಸಕರಾದ ಸಿ.ಎಂ. ಲಿಂಗಪ್ಪ, ಕೆ. ರಾಜು, ಕಾಂಗ್ರೆಸ್ ಮುಖಂಡರಾದ ಕೆ. ಶೇಷಾದ್ರಿ ಶಶಿ, ಸೋಮಶೇಖರ್, ಚೇತನ್ ಕುಮಾರ್ ಸೇರಿದಂತೆ ಸ್ಥಳೀಯ ಕಾಂಗ್ರೆಸ್ ಮುಖಂಡರು ಇದ್ದರು.

Quote - ರಾಮನಗರದ ಕ್ಷೇತ್ರದಲ್ಲಿ ಸಾಕಷ್ಟು ಅಭಿವೃದ್ಧಿ ಕೆಲಸಗಳಾಗಬೇಕಿದೆ. ಹಾಗಾಗಿ ಮುಖ್ಯಮಂತ್ರಿಗಳು ದಯವಿಟ್ಟು ದೊಡ್ಡ ಮನಸ್ಸು ಮಾಡಿ ಕ್ಷೇತ್ರಕ್ಕೆ ವಿಶೇಷ ಅನುದಾನ ನೀಡಬೇಕು – ಎಚ್.ಎ. ಇಕ್ಬಾಲ್ ಹುಸೇನ್ ಶಾಸಕ

Quote - ಸರಿಯಾದ ಸಮಯಕ್ಕೆ ವರುಣ ದೇವ ಕೃಪೆ ತೋರಿದ್ದಾನೆ. ಮುಖ್ಯಮಂತ್ರಿಗಯವರು ಆದಷ್ಟು ಬೇಗ ಮೇಕೆದಾಟು ಅಣೆಕಟ್ಟೆ ನಿರ್ಮಾಣಕ್ಕೆ ಚಾಲನೆ ನೀಡಬೇಕು. ಜಿಲ್ಲೆಯ ಅಭಿವೃದ್ಧಿಗಾಗಿ ನಮಗೆ ಆಶೀರ್ವಾದ ಮಾಡಬೇಕು – ಎಚ್.ಸಿ. ಬಾಲಕೃಷ್ಣ ಶಾಸಕ

Cut-off box - ಸಂಗೀತ ಸಂಜೆಯಲ್ಲಿ ಮಿಂದೆದ್ದ ಜನ ಚಾಮುಂಡಿ ಉತ್ಸವದ ಪ್ರಯುಕ್ತ ಜಿಲ್ಲಾ ಕ್ರೀಡಾಂಗಣದಲ್ಲಿ ರಾತ್ರಿ ಹಮ್ಮಕೊಂಡಿದ್ದ ಸಂಗೀತ ಸಂಜೆಯ ರಸಮಂಜರಿ ಕಾರ್ಯಕ್ರಮದಲ್ಲಿ ಜನರು ಮಿಂದೆದ್ದರು. ಸಂಗೀತ ನಿರ್ದೇಶಕ ಅರ್ಜುನ್ ಜನ್ಯ ಮತ್ತು ತಂಡ ನಡೆಸಿಕೊಟ್ಟ ರಸಮಂಜರಿ ಕಾರ್ಯಕ್ರಮದಲ್ಲಿ ಜನಪ್ರಿಯ ಗಾಯಕಿ ಮಂಗ್ಲಿ ಅನುರಾಧ ಭಟ್ ಸೇರಿದಂತೆ ಹಲವು ಗಾಯಕರು ಹಾಡಿ ರಂಜಿಸಿದರು. ಸಿನಿಮಾ ನಟರಾದ ನೆನಪಿರಲಿ ಪ್ರೇಮ್ ಸೇರಿದಂತೆ ಹಲವು ನಟ–ನಟಿಯರು ಭಾಗವಹಿಸಿದ್ದರು.

Cut-off box - ‘ನಾನಿದ್ದಾಗ ಮಳೆ ಬರಲ್ಲ ಅಂದವರು ಈಗ ಏನೇಳುತ್ತಾರೆ?’ ‘ಮೌಢ್ಯಗಳನ್ನು ನಂಬುವ ಜನರು ಸಿದ್ದರಾಮಯ್ಯ ಅವರು ಅಧಿಕಾರಕ್ಕೆ ಬಂದರೆ ಮಳೆಯಾಗಲ್ಲ ಎಂದು ವ್ಯಂಗ್ಯವಾಗಿ ಹೇಳುತ್ತಾರೆ. ಚಾಮುಂಡೇಶ್ವರಿ ಕೃಪೆಯಿಂದ ರಾಜ್ಯದಲ್ಲಿ ಈ ಸಲ ಈಗ ಉತ್ತಮ ಮಳೆಯಾಗಿದೆ. ಎಲ್ಲಾ ಜಲಾಶಯಗಳು ತುಂಬಿವೆ. ಉಳುಮೆ ಬಿತ್ತನೆ ಸೇರಿದಂತೆ ಕೃಷಿ ಚಟುವಟಿಕೆಗಳು ನಡೆಯುತ್ತಿವೆ. ಮೌಢ್ಯ ನಂಬುವವರು ಈಗ ಸಿದ್ದರಾಮಯ್ಯ ಅವರಿಂದಾಗಿ ಮಳೆಯಾಗಿದೆ ಎಂದು ಹೇಳುತ್ತಾರಾ? ಹೇಳುವುದಿಲ್ಲ. ಪ್ರಕೃತಿ ನಮ್ಮ ಪರವಾಗಿದ್ದರೆ ಮಳೆ–ಬೆಳೆ ಚನ್ನಾಗಿ ಆಗಲಿದೆ. ಮುನಿಸಿಕೊಂಡರೆ ಆಗುವುದಿಲ್ಲ. ರಾಮನಗರ ಕ್ಷೇತ್ರ ಸೇರಿದಂತೆ ಇಡೀ ಜಿಲ್ಲೆಯನ್ನು ಅಭಿವೃದ್ಧಿ ಮಾಡುವ ಪ್ರಾಮಾಣಿಕ ಪ್ರಯತ್ನವನ್ನು ನಮ್ಮ ಸರ್ಕಾರ ಮಾಡಲಿದೆ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಭರವಸೆ ನೀಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.