ರಾಮನಗರದ ಯಾರಬ್‌ನಗರದ ಗೆಜ್ಜಲಗುಡ್ಡೆ ಬಳಿಯ ಉದ್ಯಾನದ ಬಳಿ ಗಾಂಜಾ ಮಾರಾಟ ಮಾಡುತ್ತಿದ್ದ ಸ್ಥಳದ ಮೇಲೆ ದಾಳಿ ನಡೆಸಿರುವ ರಾಮನಗರ ಟೌನ್ ಠಾಣೆ ಪೊಲೀಸರು ನಾಲ್ವರನ್ನು ಬಂಧಿಸಿದ್ದಾರೆ. ಯಾರಬ್‌ನಗರದ ಸರ್ದಾರ್ ಸಾದಿಕ್ ಪಾಷಾ ಮೆಹಬೂಬ್‌ನಗರದ ಸಯ್ಯದ್ ಖಲೀಂ ಅಲಿಯಾಸ್ ಕಚಡಾ ಖಲೀಂ ಹಾಗೂ ಜಾವಿದ್ ಬಂಧಿತರು. ಆರೋಪಿಗಳಿಂದ ₹6700 ಮೌಲ್ಯದ 134 ಗ್ರಾಂ ಗಾಂಜಾ ವಶಕ್ಕೆ ಪಡೆಯಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.