ಸ್ಥಳಾಂತರಕ್ಕೆ ಸಂಬಂಧಿಸಿದಂತೆ ಶಾಲೆಯಲ್ಲಿ ಇತ್ತೀಚೆಗೆ ನಡೆದ ಸಭೆಯಲ್ಲಿ ಭಾಗವಹಿಸಿದ್ದ ವಿದ್ಯಾರ್ಥಿಗಳ ಪೋಷಕರು ಮತ್ತು ಗ್ರಾಮಸ್ಥರು
ಊರಿನ ಶಾಲೆಗೆ ಸೂರು ಕಲ್ಪಿಸಲು ನಾವು 20 ಕುಂಟೆ ಜಾಗ ದಾನ ಕೊಟ್ಟೆವು. ಅಲ್ಲಿ ಸರ್ಕಾರವೇ ಕಟ್ಟಡ ನಿರ್ಮಿಸಿ ಶಾಲೆ ನಡೆಸುತ್ತಿದೆ. ಊರಿನಲ್ಲಿ ಕ್ರಷರ್ ಶುರುವಾದಾಗಿನಿಂದ ಸಮಸ್ಯೆ ಶುರುವಾಗಿದೆ. ಏನೇ ಆದರೂ ಶಾಲೆ ಸ್ಥಳಾಂತರಕ್ಕೆ ನಾವು ಬಿಡುವುದಿಲ್ಲ
ಜಯಮ್ಮ ಶಾಲೆಗೆ ದಾನ ನೀಡಿದವರು
ಎರಡು ದಶಕಗಳಿಂದ ನಡೆದುಕೊಂಡು ಹೋಗುತ್ತಿದ್ದ ಶಾಲೆಯ ಜಾಗ ತಮ್ಮದೆಂದು ವ್ಯಕ್ತಿಯೊಬ್ಬರು ಆಕ್ಷೇಪ ಎತ್ತಿ ಕೋರ್ಟ್ ಮೊರೆ ಹೋಗಿದ್ದಾರೆ. ಕೋರ್ಟ್ ಆದೇಶದ ಅನುಸಾರ ಮುಂದಿನ ಕ್ರಮ ಕೈಗೊಳ್ಳಲಾಗುವುದು
ಪಿ. ಸೋಮಲಿಂಗಯ್ಯ ಕ್ಷೇತ್ರ ಶಿಕ್ಷಣಾಧಿಕಾರಿ ರಾಮನಗರ ತಾಲ್ಲೂಕು