ಶುಕ್ರವಾರ, ಫೆಬ್ರವರಿ 21, 2020
19 °C

ನಾಳೆ ತಿರುಮಲೆ ರಥೋತ್ಸವ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮಾಗಡಿ: ತಿರುಮಲೆ ಕಲ್ಯಾಣ ವರಪ್ರದ ಶ್ರೀನಿವಾಸ ಸ್ವಾಮಿ ಜಾತ್ರಾ ಮಹೋತ್ಸವ ಫೆ.6 ರಿಂದ 10 ರ ತನಕ ನಡೆಯಲಿದೆ ಎಂದು ಪ್ರಧಾನ ಅರ್ಚಕ ಶ್ರೀನಿವಾಸ ರಂಗನ್‌ ತಿಳಿಸಿದರು. ಸುದ್ದಿಗಾರರೊಂದಿಗೆ ಅವರು ಮಾತನಾಡಿದರು.

ಫೆ.6ರಂದು ಬೆಳಿಗ್ಗೆ 9 ಗಂಟೆಗೆ ಮಂಗಳಸ್ನಾನ, ಫೆ.7 ರಂದು ಬೆಳಿಗ್ಗೆ 10 ಗಂಟೆಗೆ ನವಗ್ರಹ ಪೂಜೆ, ಪುಷ್ಪಾಲಂಕಾರ, 10.40ರಿಂದ 11 ರೊಳಗೆ ದಿವ್ಯರಥಾರೋಹಣ ನಡೆಯಲಿದೆ ಎಂದರು.

ರಾತ್ರಿ 8.30ಕ್ಕೆ ಮುತ್ತಿನ ಪಲ್ಲಕ್ಕಿ ಉತ್ಸವ ನೆರವೇರಲಿದೆ. 8 ರಂದು ರಾತ್ರಿ 8 ಗಂಟೆಗೆ ರಾಜಬೀದಿ ಉತ್ಸವ, ರಾತ್ರಿ ಉಯ್ಯಾಲೆ ಉತ್ಸವ ನಡೆಯಲಿವೆ.

ಫೆ.9ರಂದು ಮಧ್ಯಾಹ್ನ 3 ಗಂಟೆಗೆ ರಾಜಬೀದಿ ಉತ್ಸವ, ರಾತ್ರಿ 8 ಗಂಟೆಗೆ ಕರ್ನಾಟಕ ಶಾಸ್ತ್ರೀಯ ಸಂಗೀತ, 9 ಗಂಟೆಗೆ ಡೋಲೋತ್ಸವ, 10 ಗಂಟೆಗೆ ಶಯನೋತ್ಸವ ನಡೆಯಲಿದೆ. ಫೆ.10ರಂದು ಪ್ರಾಕಾರೋತ್ಸವ, ಗರುಡವಾಹನ ಸೇವೆ ನಡೆಯಲಿದೆ ಎಂದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)