ಗುರುವಾರ , ಡಿಸೆಂಬರ್ 5, 2019
21 °C

ಮದ್ಯ ಅಕ್ರಮ ಮಾರಾಟ ತಡೆಗಟ್ಟಲು ಮನವಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮಾಗಡಿ: ತಾಲ್ಲೂಕಿನ ಮತ್ತಿಕೆರೆ ಗ್ರಾಮದ 12 ಅಂಗಡಿಗಳಲ್ಲಿ ಅಕ್ರಮವಾಗಿ ಮದ್ಯಮಾರಾಟ ಮಾಡಲಾಗುತ್ತಿದೆ. ಸಂಸಾರಗಳು ಬೀದಿಪಾಲಾಗುವುದನ್ನು ತಪ್ಪಿಸಲು ಮದ್ಯ ಮಾರಾಟವನ್ನು ತಡೆಗಟ್ಟಬೇಕು ಎಂದು ಗ್ರಾಮದ ಮಹಿಳೆಯರು ಮನವಿ ಮಾಡಿದ್ದಾರೆ.

ನಿತ್ಯ ಬೆಳಿಗ್ಗೆ 6 ಗಂಟೆಗೆ ಕೆಲವು ಗಂಡಸರು ಮದ್ಯದ ಅಂಗಡಿಗಳಿಗೆ ತೆರಳಿ ಮದ್ಯಪಾನ ಮಾಡಿ ಇಡೀ ದಿನ ಮನೆಯತ್ತ ಮರಳುತ್ತಿಲ್ಲ. ಮದ್ಯ ಅಕ್ರಮ ಮಾರಾಟ ಮಾಡುವವರಲ್ಲಿ ಮಹಿಳೆಯರೂ ಇದ್ದಾರೆ ಎಂದಿದ್ದಾರೆ.

ಈ ಕುರಿತು ಕ್ರಮ ಕೈಗೊಳ್ಳುವಂತೆ ಜಿಲ್ಲಾ ಪಂಚಾಯಿತಿ ಸದಸ್ಯೆ ನಾಗರತ್ನ ಚಂದ್ರೇಗೌಡ ಅವರಲ್ಲಿ ಮನವಿ ಮಾಡಿರುವುದಾಗಿ ದಾಕ್ಷಾಣಿಣಮ್ಮ, ಹನುಮಕ್ಕ, ವೇದಾವತಿ ತಿಳಿಸಿದ್ದಾರೆ.

ಕೆಲವು ಅಂಗಡಿಗಳಲ್ಲಿ ಸಾಲದ ರೂಪದಲ್ಲಿ ದುಬಾರಿ ಬೆಲೆಗೆ ಮದ್ಯ ಮಾರಾಟ ಮಾಡುತ್ತಿದ್ದಾರೆ. ಮತ್ತಿಕೆರೆ ಸುತ್ತಲಿನ ಗ್ರಾಮಗಳಲ್ಲಿ ಶೇ 98 ರಷ್ಟು ಗಂಡಸರು ಮತ್ತು ಕೆಲವು ಹೆಂಗಸರು ನಿತ್ಯ ಮದ್ಯಸೇವಿಸಿ ಬೀದಿ ಜಗಳ ಮಾಡಿ ಅಶ್ಲೀಲ ಪದಗಳಿಂದ ಪರಸ್ಪರ ನಿಂದನೆಗೆ ಇಳಿಯುತ್ತಿದ್ದಾರೆ ಎಂದು ತಿಳಿಸಿದ್ದಾರೆ.

ಪ್ರತಿಕ್ರಿಯಿಸಿ (+)