ಚನ್ನಪಟ್ಟಣ: ನಗರದ ತಾಲ್ಲೂಕು ಕಚೇರಿಯಲ್ಲಿ ತಾಲ್ಲೂಕು ಆಡಳಿತ ವತಿಯಿಂದ ಭಾನುವಾರ ಸಂತ ಸೇವಾಲಾಲ್ ಜಯಂತಿ ಹಮ್ಮಿಕೊಳ್ಳಲಾಗಿತ್ತು.

ಸೇವಾಲಾಲ್ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಮಾತನಾಡಿದ ತಾಲ್ಲೂಕು ಕಚೇರಿ ಉಪ ತಹಶೀಲ್ದಾರ್ ಹರೀಶ್ ಕುಮಾರ್, ವೈವಿಧ್ಯದಲ್ಲಿ ಏಕತೆ ಸಾರಿದ ಮಹನೀಯರಲ್ಲಿ ಸಂತ ಸೇವಾಲಾಲ್ ಪ್ರಮುಖರು. ಬಂಜಾರ ಸಮುದಾಯದಲ್ಲಿ ಹುಟ್ಟಿ ಸಂತರಾಗಿ ತಮ್ಮ ಸಮುದಾಯದ ಪ್ರಗತಿಗೆ ಶ್ರಮಿಸಿದವರು. ಸಮುದಾಯದಲ್ಲಿ ದುಡಿಮೆ, ಜ್ಞಾನಾರ್ಜನೆ, ಸ್ವಾಭಿಮಾನ, ಸ್ವಾವಲಂಭನೆ ಭಿತ್ತಿದ ಮಹಾನ್ ಸಂತ. ಅಂತಹ ಮಹಾನ್ ಸಂತರ ತತ್ವ ಸಿದ್ಧಾಂತವನ್ನು ಪ್ರತಿಯೊಬ್ಬರು ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದರು.

ಚಕ್ಕೆರೆ ಪ್ರೌಢಶಾಲೆ ಮುಖ್ಯಶಿಕ್ಷಕ ಯೋಗೇಶ್ ಚಕ್ಕೆರೆ ಮಾತನಾಡಿ, ಸಂತ ಸೇವಾಲಾಲ್ ಬಂಜಾರ ಸಮುದಾಯದಲ್ಲಿ ಶಿಕ್ಷಣದ ಮಹತ್ವವನ್ನು ಸಾರಿದ ಮಹನೀಯರು. ಅಕ್ಷರಜ್ಞಾನದಿಂದ ಸಮ ಸಮಾಜ ನಿರ್ಮಾಣ ಹಾಗೂ ಸೋದರಭಾವ ಬೆಳೆಸುವ ಸಂದೇಶ ನೀಡಿದ್ದಾರೆ ಎಂದು ತಿಳಿಸಿದರು.

ಲೋಕೋಪಯೋಗಿ ಇಲಾಖೆಯ ಎಇ ಮಲ್ಲಿಕಾರ್ಜುನ್, ಪಂಚಾಯಿತಿ ರಾಜ್ ಎಂಜಿನಿಯರಿಂಗ್ ಇಲಾಖೆ ಎಇಇ ಶಿವಕುಮಾರ್, ತೋಟಗಾರಿಕೆ ಇಲಾಖೆ ಹಿರಿಯ ಸಹಾಯಕ ನಿರ್ದೇಶಕ ಶಂಕರ್, ರೇಷ್ಮೆ ಇಲಾಖೆ ರಾಜು, ಕಂದಾಯ ನಿರೀಕ್ಷಕ ಶ್ರೀಧರ್, ನಗರಸಭೆ ಕಂದಾಯ ನಿರೀಕ್ಷಕ ಮಂಜುನಾಥ್, ಬಂಜಾರ ಸಮಾಜದ ಮುಖಂಡರಾದ ಸತೀಶ್ ನಾಯ್ಕ, ಚಂದ್ರ ನಾಯ್ಕ, ರಾಜು ನಾಯ್ಕ, ಮಹಾದೇವ ನಾಯ್ಕ, ದುರ್ಗಾ ನಾಯ್ಕ, ಆನಂದ ನಾಯ್ಕ, ಮುಕುಂದ, ವಿವಿಧ ಇಲಾಖೆಗಳ ಅಧಿಕಾರಿಗಳು, ಸಿಬ್ಬಂದಿ ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.